ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೊನಾ ಸೋಂಕು 501 ಮಂದಿಗೆ ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,33,578ಕ್ಕೆ ಏರಿಕೆ ಆಗಿದೆ.
ಇಂದು 4 ಮಂದಿ ಕೋವಿಡ್ಗೆ ಮೃತರಾಗಿದ್ದು, ಸಾವಿನ ಸಂಖ್ಯೆ 12,185ಕ್ಕೆ ಏರಿಕೆ ಆಗಿದೆ. ಇನ್ನು 19 ಸೋಂಕಿತರು ಅನ್ಯ ಕಾರಣಕ್ಕೆ ಮೃತರಾಗಿದ್ದಾರೆ. 665 ಸೋಂಕಿತರು ಇಂದು ಗುಣಮುಖರಾಗಿದ್ದು, ಈವರೆಗೆ 9,13,677 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 168 ಜನರು ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ರಾಜ್ಯದಲ್ಲಿ 7697 ಸಕ್ರಿಯ ಪ್ರಕರಣಗಳು ಬಾಕಿ ಇವೆ.
ಕಳೆದ 7 ದಿನಗಳಲ್ಲಿ 18,451 ಮಂದಿ ಹೋಂ ಕ್ವಾರಂಟೈನ್ ಇದ್ದು, ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ 51,171 ಜನ ಇದ್ದಾರೆ. ದ್ವಿತೀಯ ಸಂಪರ್ಕದಲ್ಲಿ 58,371 ಜನರು ಇದ್ದಾರೆ. ಈವರೆಗೆ ಯುಕೆಯಿಂದ ಬಂದ 50 ಮಂದಿಗೆ ಪಾಸಿಟಿವ್ ಆಗಿದ್ದು, ಇವರ ಸಂಪರ್ಕದಲ್ಲಿದ್ದ 26 ಮಂದಿಗೂ ಸೋಂಕು ದೃಢವಾಗಿದೆ. ಇನ್ನು ಯುಕೆಯಿಂದ ಬಂದವರಲ್ಲಿ 14 ಜನಕ್ಕೆ ರೂಪಾಂತರ ಕೊರೊನಾ ದೃಢಪಟ್ಟಿದೆ.