ETV Bharat / city

ಶಾಲಾರಂಭಕ್ಕೆ ಮುಹೂರ್ತ: ಶಿಕ್ಷಕರು, ವಿದ್ಯಾರ್ಥಿಗಳ ಕುಟುಂಬದವರಿಗೆ ಲಸಿಕೆ ನೀಡಲು ಸರ್ಕಾರದ ಸೂಚನೆ

ಇನ್ನೇನು ಕೆಲವೇ ದಿನಗಳಲ್ಲಿ 9,10ನೇ ತರಗತಿಗಳು ಆರಂಭವಾಗಲಿದ್ದು ಆದ್ಯತೆಯ ಮೇರೆಗೆ ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಪೋಷಕರಿಗೆ ಕೋವಿಡ್ ಲಸಿಕೆ ನೀಡಲು ಸರ್ಕಾರ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಿದೆ.

vaccination  for students parents and school staff
ಶಾಲಾರಂಭ ಹಿನ್ನೆಲೆ ಲಸಿಕಾಭಿಯಾನಕ್ಕೆ ಸೂಚನೆ
author img

By

Published : Aug 10, 2021, 8:28 AM IST

ಬೆಂಗಳೂರು: ರಾಜ್ಯಾದ್ಯಂತ ಆಗಸ್ಟ್ 23 ರಿಂದ 9, 10ನೇ ತರಗತಿಗಳು ಆರಂಭವಾಗಲಿದೆ‌. ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಇದೀಗ ತ್ವರಿತವಾಗಿ ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಶಿಕ್ಷಕರು ಮತ್ತು ಬೋಧಕ / ಬೋಧಕೇತರ ಸಿಬ್ಬಂದಿಗೆ ಹಾಗೂ ವಿದ್ಯಾರ್ಥಿಗಳ ಕುಟುಂಬದವರಿಗೆ ಲಸಿಕೆ ನೀಡುವಂತೆ ಸರ್ಕಾರ ಇಲಾಖೆಗಳಿಗೆ ಸೂಚಿಸಿದೆ.

ಆದ್ಯತೆ ಮೇರೆಗೆ ಕೋವಿಡ್ ಲಸಿಕೆ ನೀಡಲು ತಿಳಿಸಿದ್ದು, 9ನೇ ತರಗತಿ ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳ ಕೋವಿಡ್-19 ಲಸಿಕೆ ಪಡೆಯದ ತಂದೆ, ತಾಯಿ ಹಾಗೂ ಪೋಷಕರುಗಳಿಗೆ ನೀಡುವಂತೆ ಕೋರಲಾಗಿದೆ.‌ ಇದಕ್ಕಾಗಿ ಶಾಲೆಯ ಮುಖ್ಯಸ್ಥರಿಂದ ತಂದೆ-ತಾಯಿ/ಪೋಷಕರಿಗೆ ಮಾಹಿತಿ ತಲುಪಿಸಿ ಲಸಿಕೆ ಪಡೆಯದವರ ಪಟ್ಟಿ ತಯಾರಿಸಿ ಆರೋಗ್ಯ ಇಲಾಖೆಗೆ ಮಾಹಿತಿ ಒದಗಿಸಿ ಕೊಡುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಲು ಸರ್ಕಾರ ಆದೇಶಿಸಿದೆ.

ಇದನ್ನೂ ಓದಿ: ಕೆಲಸ ಕೊಡಿಸುವ ಸೋಗಿನಲ್ಲಿ ಯುವತಿಯರನ್ನ ಕರೆತಂದು ವೇಶ್ಯವಾಟಿಕೆ ದಂಧೆ; ರೌಡಿಶೀಟರ್ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.