ETV Bharat / city

ನಂದಿಬೆಟ್ಟದಲ್ಲಿ ಪಾರ್ಕಿಂಗ್ ನಿರ್ಮಾಣಕ್ಕೆ ಹೈಕೋರ್ಟ್ ತಡೆಯಾಜ್ಞೆ: ಆದೇಶ ಉಲ್ಲಂಘಿಸಿ ಕಾಮಗಾರಿ ಆರೋಪ

ನಂದಿಬೆಟ್ಟದ ರೋಪ್​ ವೇ ಭಾಗವಾಗಿ ಪಾರ್ಕಿಂಗ್ ನಿರ್ಮಿಸಲು 3.20 ಎಕರೆ ರೈತರ ಜಾಗವನ್ನ ಸರ್ಕಾರ ಸ್ವಾಧೀನ ಮಾಡಿಕೊಂಡು ಪಾರ್ಕಿಂಗ್ ಕಾಮಾಗಾರಿ ನಡೆಸುತ್ತಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ರೈತ, ಇದೀಗ ಕೋರ್ಟ್​ ಮೊರೆ ಹೋಗಿ ಪಾರ್ಕಿಂಗ್ ನಿರ್ಮಾಣಕ್ಕೆ ತಡೆಯಾಜ್ಞೆ ತಂದಿದ್ದಾರೆ.

ಪಾರ್ಕಿಂಗ್  ನಿರ್ಮಾಣಕ್ಕೆ ವಿರೋಧ
ಪಾರ್ಕಿಂಗ್ ನಿರ್ಮಾಣಕ್ಕೆ ವಿರೋಧ
author img

By

Published : Feb 26, 2022, 12:00 PM IST

Updated : Feb 26, 2022, 2:19 PM IST

ದೊಡ್ಡಬಳ್ಳಾಪುರ: ರೋಪ್ ವೇ ಯೋಜನೆಯ ಭಾಗವಾಗಿ ನಂದಿ ಬೆಟ್ಟದ ಬುಡದಲ್ಲಿ ಪಾರ್ಕಿಂಗ್ ವ್ಯವಸ್ಥೆ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ದೊಡ್ಡಬಳ್ಳಾಪುರ ತಾಲೂಕಿನ ರೈತರ ಭೂಮಿಯನ್ನು ಒತ್ತುವರಿ ಮಾಡಲಾಗಿದೆ. ಹೈಕೋರ್ಟ್ ಮೊರೆ ಹೋದ ರೈತ ಇದೀಗ ಪಾರ್ಕಿಂಗ್ ನಿರ್ಮಾಣಕ್ಕೆ ತಡೆಯಾಜ್ಞೆ ತಂದಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಹೆಗ್ಗಡಿಹಳ್ಳಿ ರೈತ ಮುನಿನಾರಾಯಣಪ್ಪ ಸುಮಾರು 20 ವರ್ಷಗಳಿಂದ ಈ ಜಾಗದಲ್ಲಿ ಕೃಷಿ ಮಾಡುತ್ತಿದ್ದಾರೆ. 1998 ರಲ್ಲಿ ಬಗರ್ ಹುಕುಂ ಸಾಗುವಳಿ ಅಡಿ 53 ಅರ್ಜಿಯನ್ನ ಸಲ್ಲಿಸಿದ್ದಾರೆ. ಕಂದಾಯ ಇಲಾಖೆ 1997-98ನೇ ಸಾಲಿನಲ್ಲಿ ಸರ್ವೇ ನಂಬರ್ 64 ರಲ್ಲಿ 1.5 ಎಕರೆ ಭೂಮಿಯನ್ನು ಸ್ಕೆಚ್ ಕೂಡ ಮಾಡಿದೆ. ಅಂದಿನ ಶಾಸಕ ಪಿಳ್ಳಮುನಿಶಾಮಪ್ಪ ಸಹ ಹಕ್ಕು ಪತ್ರ ನೀಡುವಂತೆ ಶಿಫಾರಸು ಮಾಡಿದ್ದಾರೆ. ಇದೀಗ ಸರ್ಕಾರ, ಏಕಾಏಕಿ ರೈತ ಮುನಿನಾರಾಯಣಪ್ಪನ ಜಮೀನು ಸ್ವಾಧೀನಕ್ಕೆ ಮುಂದಾಗಿದೆ.

ನಂದಿಬೆಟ್ಟದಲ್ಲಿ ಪಾರ್ಕಿಂಗ್ ನಿರ್ಮಾಣಕ್ಕೆ ರೈತರು ಆಕ್ರೋಶ

ನಂದಿಬೆಟ್ಟದ ರೋಪ್​ವೇ ನಿರ್ಮಾಣ ಭಾಗದ ಪಾರ್ಕಿಂಗ್ ನಿರ್ಮಿಸಲು 3.20 ಎಕರೆ ರೈತರ ಜಾಗವನ್ನ ಸರ್ಕಾರ ಸ್ವಾಧೀನ ಮಾಡಿಕೊಂಡಿದೆ ಮತ್ತು ಪಾರ್ಕಿಂಗ್ ಕಾಮಗಾರಿ ಸಹ ನಡೆಯುತ್ತಿದೆ. ಜಮೀನು ಒತ್ತುವರಿ ವಿರುದ್ಧ ರೈತ ಮುನಿನಾರಾಯಣಪ್ಪ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ರೈತನ ಮನವಿ ಅಲಿಸಿದ ಹೈಕೋರ್ಟ್, ಪಾರ್ಕಿಂಗ್ ನಿರ್ಮಾಣಕ್ಕೆ ತಡೆಯಾಜ್ಞೆ ನೀಡಿದೆ. ತಡೆಯಾಜ್ಞೆ ಆದೇಶದ ಪ್ರತಿಯನ್ನ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಕೋರ್ಟ್​ ಆದೇಶವನ್ನು ಉಲ್ಲಂಘನೆ ಮಾಡಿ, ಪಾರ್ಕಿಂಗ್ ಕಾಮಗಾರಿ ಮಾಡುತ್ತಿದ್ದಾರೆ ಎಂದು ರೈತ ಆರೋಪಿಸಿದ್ದಾರೆ.

ಇದನ್ನೂ ಓದಿ: ಮಂಗಳೂರಿನ ಖಾಸಗಿ ಶಾಲೆಯಲ್ಲಿ ಉದ್ಭವಿಸಿದ್ದ ಟರ್ಬನ್​ ಸಮಸ್ಯೆ ಮಾತುಕತೆ ಮೂಲಕ ಪರಿಹಾರ

ಈ ಹಿಂದಿನ ಕಾಂಗ್ರೆಸ್ ಸರ್ಕಾರ ನಂದಿಬೆಟ್ಟಕ್ಕೆ ರೋಪ್ ವೇ ಯೋಜನೆಯ ಪಾರ್ಕಿಂಗ್ ನಿರ್ಮಾಣಕ್ಕೆ ಚಿಕ್ಕಬಳ್ಳಾಪುರ ತಾಲೂಕಿನ ಕುಡವತಿ ಗ್ರಾಮದಲ್ಲಿ 9.30 ಎಕರೆ ಭೂಮಿಯನ್ನು ಮೀಸಲಿಟ್ಟಿತ್ತು. ಆದರೆ, ಇಂದಿನ ಬಿಜೆಪಿ ಸರ್ಕಾರ ರೋಪ್ ವೇ ಯೋಜನೆಯನ್ನ ಪೂರ್ವದಿಂದ ಪಶ್ಚಿಮಕ್ಕೆ ಬದಲಾಯಿಸಿದೆ. ಇದರಿಂದ ರೈತ ಮುನಿನಾರಾಯಣಪ್ಪ 1.20 ಎಕರೆ ಹಾಗೂ ಚೆಲುವ ಮೂರ್ತಿಯ 2 ಎಕರೆ ಸೇರಿದಂತೆ ಒಟ್ಟು 3.20 ಎಕರೆ ಜಮೀನನ್ನು ಒತ್ತುವರಿ ಮಾಡಲಾಗಿದೆ. ಜೀವನಕ್ಕೆ ಇರುವ ಏಕೈಕ ಜಮೀನು ಉಳಿಸಿಕೊಳ್ಳಲು ರೈತ ಹೈಕೋರ್ಟ್ ಮೊರೆ ಹೋಗಿದ್ದು, ರೈತನ ಮನವಿಗೆ ಸ್ಪಂದಿಸಿದ ಕೋರ್ಟ್ ಪಾರ್ಕಿಂಗ್ ಕೆಲಸ ನಿಲ್ಲಿಸುವಂತೆ ತಡೆಯಾಜ್ಞೆ ಆದೇಶ ನೀಡಿತ್ತು.

Last Updated : Feb 26, 2022, 2:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.