ETV Bharat / city

ಕಾನೂನು ಪದವಿ ಪರೀಕ್ಷೆ ಬರೆಯಲು ಅನುಕಂಪದ ಆಧಾರದಲ್ಲಿ ಅವಕಾಶ ನೀಡಲು ಹೈಕೋರ್ಟ್ ಸೂಚನೆ - ಕಾನೂನು ಪದವಿ ಪರೀಕ್ಷೆ

ಕಾರಣಾಂತರಗಳಿಂದ 10 ವರ್ಷದೊಳಗೆ ಕಾನೂನು ಪದವಿ ಪೂರೈಸಲು ವಿಫಲವಾಗಿರುವ ಅಭ್ಯರ್ಥಿಯೊಬ್ಬರಿಗೆ ಅಂತಿಮ ವರ್ಷದ ಪರೀಕ್ಷೆ ಬರೆಯಲು ಹೈಕೋರ್ಟ್​ ಅನುಕಂಪದ ಆಧಾರದಲ್ಲಿ ಅವಕಾಶ ಕಲ್ಪಿಸಿದೆ.

compassionate grounds
ಕಾನೂನು ಪದವಿ ಪರೀಕ್ಷೆ ಬರೆಯಲು ಅನುಕಂಪದ ಆಧಾರದಲ್ಲಿ ಅವಕಾಶ ನೀಡಲು ಹೈಕೋರ್ಟ್ ಸೂಚನೆ
author img

By

Published : May 2, 2022, 9:33 PM IST

ಬೆಂಗಳೂರು: ಕಾರಣಾಂತರಗಳಿಂದ 10 ವರ್ಷದೊಳಗೆ ಕಾನೂನು ಪದವಿ ಪೂರೈಸಲು ವಿಫಲವಾಗಿರುವ ಅಭ್ಯರ್ಥಿಯೊಬ್ಬರಿಗೆ ಅಂತಿಮ ವರ್ಷದ ಪರೀಕ್ಷೆ ಬರೆಯಲು ಅನುಮತಿ ನೀಡುವುದಕ್ಕೆ ಸಂಬಂಧಿಸಿದ ಮನವಿಯನ್ನು ಅನುಕಂಪದ ಆಧಾರದಲ್ಲಿ ಪರಿಗಣಿಸಿ ಸೂಕ್ತ ನಿರ್ಣಯ ಕೈಗೊಳ್ಳುವಂತೆ ಹೈಕೋರ್ಟ್, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ಆದೇಶಿಸಿದೆ.

ಈ ಕುರಿತು ಚಿತ್ರದುರ್ಗ ತಾಲೂಕಿನ ಎಸ್‌ಜೆಎಂ ಬಡಾವಣೆ ನಿವಾಸಿ ಎಸ್. ಜನಾರ್ದನ ಪೂಜಾರಿ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ. ಕೃಷ್ಣ ಭಟ್ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ಹೊರಡಿಸಿದೆ. ಅರ್ಜಿದಾರರು 2009ರಲ್ಲಿ ಚಿತ್ರದುರ್ಗದ ಎಸ್‌ಜೆಎಂ ಕಾನೂನು ಕಾಲೇಜಿನಲ್ಲಿ ಐದು ವರ್ಷದ ಕಾನೂನು ಪದವಿಗೆ ಪ್ರವೇಶ ಪಡೆದಿದ್ದರು. ಐದು ವರ್ಷಗಳ ಕಾನೂನು ಪದವಿಯನ್ನು ಪ್ರವೇಶ ಪಡೆದ ವರ್ಷದಿಂದ 10 ವರ್ಷದೊಳಗೆ ಪೂರ್ಣಗೊಳಿಸಬೇಕು ಎಂಬ ನಿಯಮವಿದೆ.

ಆದರೆ, ನಾನಾ ಕಾರಣಗಳಿಂದ ಕಾನೂನು ಪದವಿ ಪೂರ್ಣಗೊಳಿಸಲು ಅರ್ಜಿದಾರರಿಗೆ ಸಾಧ್ಯವಾಗಿರಲಿಲ್ಲ. ಇದರಿಂದ ಬಾಕಿಯಿರುವ ಅಂತಿಮ ವರ್ಷದ ವಿಷಯಗಳಲ್ಲಿ ಉತ್ತೀರ್ಣವಾಗುವುದಕ್ಕಾಗಿ 2022ರ ಏ.26ರಿಂದ ಆರಂಭವಾಗಿರುವ ಪರೀಕ್ಷೆ ಬರೆಯಲು ತಮಗೆ ಅನುಮತಿ ನೀಡುವಂತೆ ಅರ್ಜಿದಾರರು ಕರ್ನಾಟಕ ಕಾನೂನು ವಿವಿಯನ್ನು ಕೋರಿದ್ದರು. ಆದರೆ, ವಿವಿ ಅನುಮತಿ ನಿರಾಕರಿಸಿದ್ದರಿಂದ ಅರ್ಜಿದಾರರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ತೀರ್ಪು: ಅರ್ಜಿ ವಿಚಾರಣೆ ನಡೆಸಿದ ಪೀಠ, ಪರೀಕ್ಷೆ ಬರೆಯಲು ಅನುಮತಿ ಕೋರಿ ಅರ್ಜಿದಾರರು ಒಂದು ವಾರದಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮನವಿ ಪತ್ರ ಸಲ್ಲಿಸಬೇಕು. ಹಾಗೊಂದು ವೇಳೆ ಅರ್ಜಿದಾರರು ಮನವಿ ಪತ್ರ ಸಲ್ಲಿಸಿದರೆ, ಅದನ್ನು ಅನುಕಂಪದ ಮೇಲೆ ಪರಿಗಣಿಸಿ ನಾಲ್ಕು ವಾರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಹಾಗೂ ಕೈಗೊಂಡ ನಿರ್ಧಾರವನ್ನು ಕೂಡಲೇ ಅರ್ಜಿದಾರರಿಗೆ ತಿಳಿಸಬೇಕು ಎಂದು ವಿವಿಗೆ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿದೆ.

ಅರ್ಜಿಯಲ್ಲಿ ಏನಿತ್ತು?: 2022ರ ಏ.26ರಿಂದ ಕಾನೂನು ಪದವಿ ಪರೀಕ್ಷೆ ನಡೆಸಲು ವೇಳಾಪಟ್ಟಿ ಪ್ರಕಟಿಸಿ ಕರ್ನಾಟಕ ಕಾನೂನು ವಿಶ್ವ ವಿದ್ಯಾಲಯ ಹೊರಡಿಸಿದ ಆದೇಶ ರದ್ದುಪಡಿಸಬೇಕು. ಐದು ವರ್ಷಗಳ ಕಾನೂನು ಪದವಿಗೆ ಪ್ರವೇಶ ಪಡೆದ ವರ್ಷದಿಂದ 10 ವರ್ಷಗಳ ಒಳಗೆ ಪದವಿ ಪೂರ್ಣಗೊಳಿಸುವುದನ್ನು ಕಡ್ಡಾಯಗೊಳಿಸಿರುವ ನಿಯಮವನ್ನು ರದ್ದುಪಡಿಸಬೇಕು. 2022ರ ಏ.26ರಿಂದ ಆರಂಭವಾಗಿರುವ ಐದು ವರ್ಷಗಳ ಕಾನೂನು ಪದವಿಯ ಅಂತಿಮ ವರ್ಷದ ಪರೀಕ್ಷೆ ಬರೆಯಲು ತಮಗೆ ಅನುಮತಿ ನೀಡುವಂತೆ ಕರ್ನಾಟಕ ಕಾನೂನು ವಿವಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

ಇದನ್ನೂ ಓದಿ: ಕಲಬುರಗಿಯಲ್ಲಿ ಕಳೆಗಟ್ಟಿದ ರಂಜಾನ್ ಸಂಭ್ರಮ: ಮಾರ್ಕೆಟ್​ನಲ್ಲಿ ಜನವೋ ಜನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.