ETV Bharat / city

ದೇವೇಗೌಡರ ಜೀವನಾಧಾರಿತ ಕೃತಿ ಬಿಡುಗಡೆ... ಭಾಷಣದ ವೇಳೆ ಭಾವುಕರಾದ ಫಾರೂಕ್​ ಅಬ್ದುಲ್ಲಾ

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್​​ ಅಬ್ದುಲ್ಲಾ ಅವರು, ಕಣಿವೆ ರಾಜ್ಯವನ್ನು ಗೌಡರು ನಿರ್ವಹಿಸಿದ ರೀತಿ ಕೆಚ್ಚೆದೆಯಿಂದ ಕೂಡಿತ್ತು. ಆಗ ಗ ದೇವೇಗೌಡರು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದರು ಎಂದರು.

author img

By

Published : Dec 14, 2021, 1:04 AM IST

Updated : Dec 14, 2021, 10:03 AM IST

Farooq abdullah on HDD
Farooq abdullah on HDD

ಬೆಂಗಳೂರು/ನವದೆಹಲಿ: ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರ ಜೀವನ ಆಧರಿಸಿ ಹಿರಿಯ ಪತ್ರಕರ್ತ ಸುಗತಾ ಶ್ರೀನಿವಾಸರಾಜು ಅವರು ಬರೆದಿರುವ 'ಫರೋಸ್ ಇನ್ ಎ ಫೀಲ್ಡ್: ದಿ ಅನ್​​​ಎಕ್ಸ್​​​​​ಪ್ಲೋರ್ಡ್​​​ ಲೈಫ್ ಆಫ್ ಹೆಚ್.ಡಿ.ದೇವೇಗೌಡʼ (Furrows in a Field: The Unexplored Life of H.D. Deve Gowda) ಕೃತಿಯನ್ನು ಖ್ಯಾತ ನ್ಯಾಯವಾದಿ ಎಫ್ ನಾರಿಮನ್ ಅವರು ಲೋಕಾರ್ಪಣೆ ಮಾಡಿದರು.

Farooq abdullah on HDD
ದೇವೇಗೌಡರ ಜೀವನಾಧಾರಿತ ಕೃತಿ ಬಿಡುಗಡೆ

ನವದೆಹಲಿಯ ಮಲ್ಟಿಪರ್ಪೋಸ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಆನ್​ಲೈನ್​​ ವೇದಿಕೆಯ ಮೂಲಕ ನಾರಿಮನ್ ಅವರು ಕೃತಿಯನ್ನು ದೇವೇಗೌಡರ ಸಮಕ್ಷಮದಲ್ಲಿ ಬಿಡುಗಡೆ ಮಾಡಿ ಮಾತನಾಡಿದರು. ದೇವೇಗೌಡರ ಸುದೀರ್ಘ ರಾಜಕೀಯ ಜೀವನದ ಮಜಲುಗಳನ್ನು ಮೆಲುಕು ಹಾಕಿದ ಅವರು, ಮುಖ್ಯವಾಗಿ ನೆರೆ ರಾಜ್ಯಗಳೊಂದಿಗೆ ಸಂಘರ್ಷಕ್ಕೆ ಕಾರಣವಾಗಿದ್ದ ಕೃಷ್ಣಾ ಮತ್ತು ಕಾವೇರಿ ಕೊಳ್ಳಗಳ ಜಲವಿವಾದಗಳ ಬಗ್ಗೆ ಗೌಡರು ಕೈಗೊಂಡ ಕಠಿಣ ಕ್ರಮಗಳ ಬಗ್ಗೆ ಮುಖ್ಯವಾಗಿ ಉಲ್ಲೇಖ ಮಾಡಿದರು. 60 ವರ್ಷಗಳ ಸುದೀರ್ಘ ರಾಜಕೀಯ ಜೀವನವುಳ್ಳ ದೇವೇಗೌಡರನ್ನು ಪುಸ್ತಕದಲ್ಲಿ ದೊಡ್ಡ ಜೀವ ಎಂದು ಕರೆಯಲಾಗಿದೆ. ದೊಡ್ಡ ಜೀವದ ಜತೆ ಸಂಭ್ರಮಿಸುತ್ತಿದ್ದೇವೆ ಎಂದು ಬರೆಯಲಾಗಿದೆ. ಆದರೆ, ಅವರು ತಾವು ರಾಜಕೀಯ ಜೀವನ ಆರಂಭಿಸಿದಾಗ ಅವರಿಗೆ ತಾವೊಬ್ಬ ದೊಡ್ಡ ಜೀವ ಆಗುತ್ತೇನೆಂಬ ಕಲ್ಪನೆಯೇ ಇರಲಿಲ್ಲ. ಆದರೆ ದೇವೇಗೌಡರು ಹಾಗೆ ಬೆಳೆದು ಸಾಧಿಸಿದರು ಎಂದು ನಾರಿಮನ್ ಅಭಿಪ್ರಾಯಪಟ್ಟರು.

Farooq abdullah on HDD
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಣ್ಯರು

1962ರಲ್ಲಿ ಪಕ್ಷೇತರ ಶಾಸಕರಾಗಿ ಗೌಡರು ರಾಜ್ಯ ವಿಧಾನಸಭೆಗೆ ಕಾಲಿಟ್ಟ ಕೂಡಲೇ ಅವರು ಪ್ರಸ್ತಾಪ ಮಾಡಿದ್ದು, ರಾಜ್ಯಕ್ಕೆ ಹಂಚಿಕೆಯಾಗಿರುವ ಕಾವೇರಿ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಬಗ್ಗೆ. ಜತೆಗೆ ಒಂದು ನಿರ್ಣಯವನ್ನೂ ಮಂಡಿಸಿದರು. ಅದಾದ ಮೇಲೆ ಕರ್ನಾಟಕ ಸರಕಾರವು ಕಾವೇರಿ ಕೊಳ್ಳದ ತನ್ನ ಪಾಲಿನ ನೀರನ್ನು ಸಮರ್ಪಕವಾಗಿ ಬಳಿಸಿಕೊಳ್ಳುವ ನಿರ್ಧಾರ ಕೈಗೊಂಡಿತು ಎಂದು ಅವರು ವಿವರಿಸಿದರು. ಆ ನಿರ್ಣಯ ಮಂಡಿಸಿ ಗೌಡರು ಮಾಡಿದ ಭಾಷಣವನ್ನು ಉಲ್ಲೇಖಿಸಿದ ನಾರಿಮನ್, ಹಾಸನ, ಮೈಸೂರು, ಕೊಡಗು, ಮಂಡ್ಯ, ಚಿತ್ರದುರ್ಗ, ಬೆಂಗಳೂರು ಮುಂತಾದ ಜಿಲ್ಲೆಗಳ ನೀರಿನ ಬವಣೆಯನ್ನು ಹಾಗೂ ಕಾವೇರಿ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದ್ದರು. ಅವರ ಮಾತುಗಳನ್ನು ಹಿರಿಯ ನಾಯಕರಾದ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಅವರುಗಳೆಲ್ಲ ಆಲಿಸಿ ನೀರಿನ ಬಳಕೆ ಬಗ್ಗೆ ನಿರ್ಧಾರ ಕೈಗೊಂಡಿದ್ದರು ಎಂದರು.

ದೇವೇಗೌಡರ ಜೀವನಾಧಾರಿತ ಕೃತಿ ಬಿಡುಗಡೆ

ಇಷ್ಟೇ ಅಲ್ಲದೆ, ರಾಜ್ಯದಲ್ಲಿ ಬಲಿಷ್ಠ ಸಮುದಾಯಗಳ ನಡುವೆ ನಡೆಯುತ್ತಿದ್ದ ರಾಜಕೀಯ ಮೇಲಾಟ, ಕೊನೆಗೆ ಹೋರಾಟಕ್ಕೆ ಮನ್ನಣೆ ಸಿಕ್ಕಿ ದೇವೇಗೌಡರು ರಾಜ್ಯದ ಮುಖ್ಯಮಂತ್ರಿಗಳಾದ ಘಟನಾವಳಿಗಳ ಬಗ್ಗೆ ನಾರಿಮನ್ ಅವರು ಪ್ರಸ್ತಾಪ ಮಾಡಿದರು.

ಗದ್ಗದಿತರಾದ ಫಾರೂಕ್ ಅಬ್ದುಲ್ಲಾ : ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು, ಕಣೆವೆಯಲ್ಲಿ ಬಹಳ ದುಸ್ತರ ಸಂದರ್ಭವಿದ್ದ ವೇಳೆಯಲ್ಲಿ ಗೌಡರು ಈ ದೇಶದ ಪ್ರಧಾನಿ ಆಗಿದ್ದರು. ಆಗ ನಮ್ಮ ರಾಜ್ಯದಲ್ಲಿ ಪರಿಸ್ಥಿತಿ ವಿಪರೀತ ವಿಷಮವಾಗಿತ್ತು ಎಂದರು. ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಲು ಗೌಡರು ಬಹುದೊಡ್ಡ ರಿಸ್ಕ್ ತೆಗೆದುಕೊಂಡಿದ್ದರು. ಆ ಸಂದರ್ಭದಲ್ಲಿ ಅನೇಕ ಸಲ ಅವರನ್ನು ಪ್ರಧಾನಿ ಕಚೇರಿಯಲ್ಲಿ ಭೇಟಿಯಾಗಿದ್ದೆ. ಅಂತಹ ಕಠಿಣ ಸಂದರ್ಭದಲ್ಲಿ ಕಣಿವೆ ರಾಜ್ಯವನ್ನು ಗೌಡರು ನಿರ್ವಹಿಸಿದ ರೀತಿ ಕೆಚ್ಚೆದೆಯಿಂದ ಕೂಡಿತ್ತು. ಆಗ ದೇವೇಗೌಡರು ಜಮ್ಮು ಕಾಶ್ನೀರಕ್ಕೆ ಭೇಟಿ ನೀಡಿದರು. ಅದು ನನ್ನ ಪಾಲಿಗೆ ಹೊಸ ಆರಂಭ. ಆಗ ಗೌಡರ ದೃಢ ನಿರ್ಧಾರದಿಂದ ಅಷ್ಟು ವಿಷಮ ಸ್ಥಿತಿಯಲ್ಲಿದ್ದ ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆದು ನಾನು ಅಧಿಕಾರಕ್ಕೆ ಬಂದೆ ಎಂದು ಫಾರೂಕ್ ಅಬ್ದುಲ್ಲಾ ಅವರು ಗದ್ಗದಿತರಾದರು.

ಭಾಷಣದ ವೇಳೆ ಭಾವುಕರಾದ ಫಾರೂಕ್​ ಅಬ್ದುಲ್ಲಾ

ಈ ಕಾರಣಕ್ಕೆ ಜಮ್ಮು, ಕಾಶ್ಮೀರ, ಲಡಾಖ್ ಜನರು ಎಂದೆಂದಿಗೂ ದೇವೇಗೌಡರಿಗೆ ಋಣಿಯಾಗಿರುತ್ತಾರೆಂದು ಅವರು ಕಣ್ಣಂಚಿನಲ್ಲಿ ನೀರು ತುಂಬಿಕೊಂಡೇ ಹೇಳಿದರು.

ಇದನ್ನೂ ಓದಿರಿ: ಭುವನ ಸುಂದರಿ ಪಟ್ಟ ತಂದುಕೊಟ್ಟ ಬೆಡಗಿಗೆ ನಮೋ ಶುಭ ಹಾರೈಕೆ

ಕೇಂದ್ರದ ಮಾಜಿ ಸಚಿವ ಜೈರಾಮ್​ ರಮೇಶ್, ಗೌಡರು ಮತ್ತು ಕೃತಿಯ ಬಗ್ಗೆ ಮಾತನಾಡಿದರು. ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ, ಗೌಡರ ಜತೆಗಿನ ತಮ್ಮ ಬಾಂಧವ್ಯವನ್ನು ಮೆಲುಕು ಹಾಕಿದರು. ಲೇಖಕ ಸುಗತಾ ಶ್ರೀನಿವಾಸ ರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವೇಗೌಡರ ಸಂಪುಟದಲ್ಲಿ ವಿತ್ತ ಸಚಿವರಾಗಿದ್ದ ಪಿ.ಚಿದಂಬರಂ, ಜನರಲ್ ಧಿಲ್ಲೋನ್, ರಾಜ್ಯದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಚನ್ನಮ್ಮ ದೇವೇಗೌಡರು ಸೇರಿದಂತೆ ಅನೇಕ ಗಣ್ಯರು, ಹೀತೈಷಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕೃತಿ ಬಿಡುಗಡೆ ಅವಿಸ್ಮರಣಿಯ ಕ್ಷಣಕ್ಕೂ ನಾನು ಸಾಕ್ಷಿ: ಕುಮಾರಸ್ವಾಮಿ

ಕೃತಿ ಬಿಡುಗಡೆಯ ಆವಿಸ್ಮರಣಿಯ ಕ್ಷಣಕ್ಕೆ ನಾನೂ ಸಾಕ್ಷಿಯಾಗಿದ್ದೆ ಎನ್ನುವುದೇ ನನ್ನಲ್ಲಿನ ಧನ್ಯತಾ ಭಾವ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.ಈ ಕುರಿತು ಟ್ವೀಟ್ ಮಾಡಿರುವ ಅವರು, ನಮ್ಮ ರಾಷ್ಟ್ರದ ಶ್ರೇಷ್ಠ ನ್ಯಾಯವಾದಿಗಳಲ್ಲಿ ಒಬ್ಬರಾದ ಫಾಲಿ ಎಫ್‌ ನಾರಿಮನ್‌ ಅವರು ಮಹತ್ವದ ಈ ಕೃತಿಯನ್ನು ಬಿಡುಗಡೆ ಮಾಡಿ, ದೇವೇಗೌಡರ ಹೆಜ್ಜೆಗುರುತುಗಳನ್ನು ತಮ್ಮ ಭಾಷಣದಲ್ಲಿ ಉಲ್ಲೇಖ ಮಾಡಿದ್ದು ವಿಶೇಷ ಎಂದಿದ್ದಾರೆ. ಕೃತಿಯ ಪ್ರಥಮ ಪ್ರತಿಯನ್ನು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್‌ ಅವರು ದೇವೇಗೌಡರಿಗೆ ನೀಡಿದರು.

Last Updated : Dec 14, 2021, 10:03 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.