ETV Bharat / city

ಕೈ ಕೊಟ್ಟಿರುವ ಸಮುದಾಯದ ಮತದಾರರನ್ನು ಸೆಳೆಯಲು ಕಾಂಗ್ರೆಸ್ ತಂತ್ರಗಾರಿಕೆ ಏನು ಗೊತ್ತಾ? - DK Shivakumar game plan

ಮುಂದಿನ ಚುನಾವಣೆ ಹಿನ್ನೆಲೆ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ವಿವಿಧ ಸಮಿತಿಗಳಲ್ಲಿ ಜಾತಿವಾರು ಮಣೆ ಹಾಕಲು ನಿರ್ಧರಿಸಲಾಗಿದೆ. ಇದರ ಜತೆ ಕೆಲ ಹೊಸ ಸಮಿತಿಗಳನ್ನು ರಚಿಸಿ ವಿಶೇಷ ಸಮುದಾಯಗಳಿಗೆ ಹೆಚ್ಚಿನ ಒತ್ತು ನೀಡಲು ನಿರ್ಧರಿದೆ.

congress
ಕಾಂಗ್ರೆಸ್
author img

By

Published : Jul 11, 2021, 10:42 PM IST

ಬೆಂಗಳೂರು: ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ವೇಳೆ ತಮಗೆ ಕೈ ಕೊಟ್ಟಿರುವ ಮತದಾರರನ್ನು ಸಮುದಾಯವಾರು ಸೆಳೆಯಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ.

ಮುಂದಿನ ಚುನಾವಣೆಗಳಿಗೆ ಕಾಂಗ್ರೆಸ್ ಪಕ್ಷ ಎರಡರಿಂದ ಮೂರು ವರ್ಷ ಇರುವಾಗಲೇ ಸಮುದಾಯವಾರು ಮತದಾರರನ್ನು ಸೆಳೆಯಲು ಪ್ರಯತ್ನ ಆರಂಭಿಸಿದೆ. ಕೆಪಿಸಿಸಿ ವಿವಿಧ ಸಮಿತಿಗಳ ರಚನೆಗೆ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಂದಾಗಿದ್ದು, ಸಮುದಾಯವಾರು ಅಧ್ಯಕ್ಷ, ಪದಾಧಿಕಾರಿಗಳ ಹಂಚಿಕೆ ಮಾಡಲು ತೀರ್ಮಾನಿಸಿದ್ದಾರೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ವಿವಿಧ ಸಮಿತಿಗಳಲ್ಲಿ ಜಾತಿವಾರು ಮಣೆ ಹಾಕಲು ನಿರ್ಧರಿಸಲಾಗಿದೆ. ಇದರ ಜತೆ ಕೆಲ ಹೊಸ ಸಮಿತಿಗಳನ್ನು ರಚಿಸಿ ವಿಶೇಷ ಸಮುದಾಯಗಳಿಗೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಲಾಗಿದೆ.

ರಾಜ್ಯವನ್ನು ಸುತ್ತಿ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆಯುತ್ತಿರುವ ಡಿಕೆಶಿ ನಿಧಾನವಾಗಿ ರಾಜ್ಯದ ನಾಡಿ ಮಿಡಿತ, ಜನರ ಆಶಯವನ್ನು ಅರಿಯುವ ಕಾರ್ಯ ಮಾಡುತ್ತಿದ್ದಾರೆ. ಇದರ ಜತೆ ಜತೆಗೆ ಪಕ್ಷದ ಪರವಾಗಿ ಕಾರ್ಯ ನಿರ್ವಹಿಸುತ್ತಿರುವ ಯುವ ಮುಖಂಡರಿಗೆ ಅವಕಾಶ ನೀಡುವ ಮೂಲಕ ಮುಂಬರುವ ದಿನಗಳಲ್ಲಿ ಪಕ್ಷದ ಪರವಾಗಿ ಮುಖಂಡರು ಸುದೀರ್ಘ ಕಾಲಾವಧಿ ಹಾಗೂ ದಿನದ ಹೆಚ್ಚಿನ ಸಮಯ ಕಾರ್ಯ ನಿರ್ವಹಿಸುವ ಉತ್ಸಾಹಿಗಳನ್ನು ಹುಡುಕುವ ಕಾರ್ಯ ಮಾಡುತ್ತಿದ್ದಾರೆ.

ಅಸ್ತಿತ್ವದ ಪ್ರಶ್ನೆ: ಮುಂಬರುವ ದಿನಗಳಲ್ಲಿ ಜನರ ಜತೆ ಇದ್ದು ಪಕ್ಷವನ್ನು ಬೆಳೆಸುವ ಶಕ್ತಿ ಇರುವ ನಾಯಕರಿಗೆ ಅವಕಾಶಗಳು ಮತ್ತು ವೇದಿಕೆ ಕಲ್ಪಿಸಲು ನಿರ್ಧರಿಸಿರುವ ಶಿವಕುಮಾರ್, ಇದರ ಜತೆ ಅತ್ಯಂತ ಪ್ರಮುಖವಾಗಿ ಜಾತಿವಾರು ಮಣೆ ಹಾಕಿ ಮತದಾರರನ್ನು ಜಾತಿ ವಿಶ್ವಾಸದ ಮೂಲಕ ಸೆಳೆಯುವ ಯತ್ನ ಮಾಡಲಿದ್ದಾರೆ.

ಈಗಾಗಲೇ ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಮತಗಳಾಗಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಇದ್ದರು. ಇನ್ನು ಸಿದ್ದರಾಮಯ್ಯ ಪಕ್ಷಕ್ಕೆ ಬರುತ್ತಿದ್ದಂತೆ ಅಹಿಂದ ವರ್ಗದವರು ಬೆಂಬಲ ವ್ಯಕ್ತಪಡಿಸಿದರು. ಒಕ್ಕಲಿಗರು ಹಾಗೂ ಲಿಂಗಾಯಿತರು ಒಂದಿಷ್ಟು ಸಂಖ್ಯೆಯಲ್ಲಿ ಇವರ ಬೆಂಬಲಕ್ಕೆ ಇದ್ದರು. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ವಲ್ಪ ಮಟ್ಟಿನ ಮತದಾರರು ಇವರ ಕೈಬಿಟ್ಟರೆ, ಲೋಕಸಭೆ ಚುನಾವಣೆ ವೇಳೆಗೆ ಅಲ್ಪಸಂಖ್ಯಾತರನ್ನು ಹೊರತುಪಡಿಸಿ ಉಳಿದ ಮತದಾರರು ಚದುರಿ ಹೋದರು. ಇದೀಗ ಬಿಟ್ಟು ಹೋಗಿರುವ ಮತದಾರರನ್ನು ಮತ್ತೆ ಪಕ್ಷಕ್ಕೆ ಸೆಳೆಯುವ ಮೂಲಕ ಅತ್ಯಂತ ದೊಡ್ಡ ಇತಿಹಾಸ ಹಾಗೂ ಹಿರಿತನ ಹೊಂದಿರುವ ಕಾಂಗ್ರೆಸ್​ ಪಕ್ಷ ತನ್ನ ಅಸ್ಥಿತ್ವ ಉಳಿಸಿಕೊಳ್ಳುವ ಯತ್ನಕ್ಕೆ ಮುಂದಾಗಿದೆ.

ಹೈಕಮಾಂಡ್ ಸಮ್ಮತಿ: ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲಿಯೂ ಮತದಾರರ ವಿಶ್ವಾಸ ಕಳೆದುಕೊಂಡಿದೆ. ಈ ಹಿನ್ನೆಲೆ ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲಾ ಸಮುದಾಯದ ಮತದಾರರ ಒಲವು ಗಳಿಸುವ ಅನಿವಾರ್ಯತೆ ಇದೆ. ಇದರಿಂದ ಇತ್ತೀಚೆಗೆ ದಿಲ್ಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಬಂದಿರುವ ಡಿ.ಕೆ.ಶಿವಕುಮಾರ್, ಅಲ್ಲಿ ಜಾತಿವಾರು ವಿವಿಧ ಸಮಿತಿ ರಚಿಸಿ ಅದಕ್ಕೆ ಅಧ್ಯಕ್ಷರನ್ನು ನೇಮಿಸುವ, ವಿವಿಧ ವರ್ಗ, ಸಮುದಾಯಕ್ಕೆ ಪ್ರತ್ಯೇಕ ಸಮಿತಿ ರಚಿಸಿ ಉತ್ತೇಜಿಸುವ ನಿಲುವು ಕೈಗೊಳ್ಳುವುದಾಗಿ ಹೇಳಿದ್ದಾರೆ. ಜಿಲ್ಲಾವಾರು ಸಮಿತಿ ರಚಿಸಿ ಪಕ್ಷದ ಚಟುವಟಿಕೆ ಗಮನಿಸುವ ಕಾರ್ಯ ಮಾಡುವುದಾಗಿ ಹೇಳಿ ಬಂದಿದ್ದಾರೆ. ಇನ್ನೊಂದೆಡೆ ಈಗಾಗಲೇ ಸ್ತ್ರೀಶಕ್ತಿ ಸಮಿತಿ ರಚಿಸಿದ್ದಾರೆ. ಇದೇ ರೀತಿ ಒಂದೊಂದೇ ವರ್ಗಕ್ಕೆ ಒಂದು ಪ್ರತ್ಯೇಕ ಸಮಿತಿ ರಚಿಸಿ, ಪ್ರಾತಿನಿಧ್ಯ ನೀಡಲು ನಿರ್ಧರಿಸಿದ್ದಾರೆ. ಇದಕ್ಕೆ ಪಕ್ಷದ ಹಿರಿ-ಕಿರಿಯ ನಾಯಕರನ್ನು ಭೇಟಿಯಾಗಿ ಸಮಾಲೋಚಿಸುತ್ತಿದ್ದಾರೆ.

ಮುಂಬರುವ ದಿನಗಳಲ್ಲಿ ಪಕ್ಷವನ್ನು ಬಲಪಡಿಸುವ ಜತೆಗೆ ಯುವ ಸಮುದಾಯಕ್ಕೆ ಮಣೆ ಹಾಕುವ ನಿಟ್ಟಿನಲ್ಲೂ ಯೋಜನೆ ರೂಪಿಸುತ್ತಿರುವ ಡಿಕೆಶಿ, ದೀರ್ಘಾವಧಿ ಪಕ್ಷದ ಬಳಕೆಗೆ ಸಿಗುವವರನ್ನು ಹೆಕ್ಕಿ ತೆಗೆಯುವ ಯತ್ನ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.