ETV Bharat / city

ಬೆಡ್​​, ಆಸ್ಪತ್ರೆ ಸಿಗದೇ ಸತ್ತವರ ಸಂಖ್ಯೆಯೇ ಐದುಪಟ್ಟು ಹೆಚ್ಚು: DK Shivakumar - D K shivakumAr

ಸಾವಿನ ಆಡಿಟ್ ಮಾಡ್ತೇವೆ ಅಂತ ಹೇಳಿದ ಸಿಎಂ ಈ ಬಗ್ಗೆ ಆದೇಶ ಹೊರಡಿಸಿಲ್ಲ. ಕಾಂಗ್ರೆಸ್ ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ನೊಂದ ಜನರಿಗೆ, ಜೀವ ಜೀವನ ಕಳೆದುಕೊಂಡವರ ಮುಟ್ಟುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಬೆಡ್​​ ಕೊರತೆ ಮತ್ತು ಆಸ್ಪತ್ರೆಗೆ ತೆರಳಲಾಗದೇ ಹಾಗೂ ಆಕ್ಸಿಜನ್ ಸಿಗದೆ ಸತ್ತವರ ಸಂಖ್ಯೆ ಸರ್ಕಾರ ಈಗ ಘೋಷಣೆ ಮಾಡಿರೋದಕ್ಕಿಂತ ಐದರಷ್ಟು ಹೆಚ್ಚಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

death-toll-is-five-times-higher-than-the-declaration
ಡಿಕೆಶಿ
author img

By

Published : Jun 24, 2021, 5:05 PM IST

ಬೆಂಗಳೂರು: ಬೆಡ್​​​ ಕೊರತೆ ಮತ್ತು ಆಸ್ಪತ್ರೆಗೆ ತೆರಳಲಾಗದೇ ಹಾಗೂ ಆಕ್ಸಿಜನ್ ಸಿಗದೆ ಸತ್ತವರ ಸಂಖ್ಯೆ ಸರ್ಕಾರ ಈಗ ಘೋಷಣೆ ಮಾಡಿರೋದಕ್ಕಿಂತ ಐದರಷ್ಟು ಹೆಚ್ಚಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸಾವಿನ ಆಡಿಟ್ ಮಾಡ್ತೇವೆ ಅಂತ ಹೇಳಿದ ಸಿಎಂ ಈ ಬಗ್ಗೆ ಆದೇಶ ಹೊರಡಿಸಿಲ್ಲ. ಕಾಂಗ್ರೆಸ್ ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ನೊಂದ ಜನರಿಗೆ, ಜೀವ - ಜೀವನ ಕಳೆದುಕೊಂಡವರನ್ನು ಮುಟ್ಟುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.

ಎಐಸಿಸಿ ಕೂಡ ಇಡೀ ರಾಷ್ಟ್ರದ ವ್ಯಾಪ್ತಿಯಲ್ಲಿ ಒಂದು ತಿಂಗಳ ಅಭಿಯಾನ ನಡೆಸಲು ಮಾರ್ಗದರ್ಶನ ಮಾಡಿದೆ. ಡಿಸಿಸಿ ಅಧ್ಯಕ್ಷರು ಹಾಗೂ ಶಾಸಕರು, ಮಾಜಿ ಶಾಸಕರಿಗೆ ಈ ಕಾರ್ಯಕ್ರಮದ ವಿವರಣೆ ನೀಡಲಿದ್ದೇನೆ ಎಂದರು.

ಬೆಡ್​​, ಆಸ್ಪತ್ರೆ, ಆಕ್ಸಿಜನ್ ಸಿಗದೆ ಸತ್ತವರ ಸಂಖ್ಯೆ ಘೋಷಣೆಗಿಂತ ಐದು ಪಟ್ಟು ಹೆಚ್ಚಿದೆ

ಅನುದಾನ ಯಾರಿಗೆ ಅನ್ನೋ ಸ್ಪಷ್ಟನೆ ಇಲ್ಲ: ಒಂದು‌ ಲಕ್ಷ ರೂಪಾಯಿ ಘೋಷಣೆ ಮಾಡಿದ್ದಾರೆ, ಯಾರ್ಯಾರಿಗೆ ಅನ್ನೋ ಸ್ಪಷ್ಟನೆ ಇಲ್ಲ. ಕೇಂದ್ರ ಸರ್ಕಾರ ನಾಲ್ಕು ಲಕ್ಷ ಕೊಡೋದಾಗಿ ಹೇಳಿ ಎಂಟೇ ಗಂಟೆಯಲ್ಲಿ ಆ ಆದೇಶ ವಾಪಸ್ ಪಡೆದಿದೆ. ಕಾಂಗ್ರೆಸ್ ಪಕ್ಷದ ವತಿಯಿಂದ ಕೊರೋನಾ ಹಿನ್ನೆಲೆಯಲ್ಲಿ ಆರ್ಥಿಕ ಪ್ಯಾಕೇಜ್​​​ಗೆ ಒತ್ತಾಯ ಮಾಡಿದ್ದೆವು. 20 ಲಕ್ಷ ಕೋಟಿ ರೂಪಾಯಿ ಯಾರಿಗೆ ಸಿಕ್ತು, ಯಾರಿಗೆ ಸಿಗಲಿಲ್ಲ ಪಟ್ಟಿ ಕೊಡಿ ಅಂದೆವು. ಹೋದ ವರ್ಷ ರಾಜ್ಯದ ಪ್ಯಾಕೇಜ್ ಡೀಟೈಲ್ಸ್ ಕೂಡ ಕೇಳಿದೆವು. ಈ ಬಗ್ಗೆ ಕಾಂಗ್ರೆಸ್ ಆರ್​​​​ಟಿಐ ಮೂಲಕ ಮಾಹಿತಿ ಪಡೆದು ಬಿಡುಗಡೆ ಮಾಡಿದೆ ಎಂದರು.

ಜಿಲ್ಲಾ ಮಟ್ಟದಲ್ಲಿ ನಾವು ಈ ಅಭಿಯಾನ ಸಭೆಗಳನ್ನು ಮಾಡುತ್ತೇವೆ. ಮನೆ, ಉದ್ಯೋಗ ಕಳೆದುಕೊಂಡು, ಆರ್ಥಿಕದಲ್ಲಿ ಸಂಕಷ್ಟ ಇರುವವರಿಗೆ ಕಾಂಗ್ರೆಸ್ ಕಾರ್ಯಕ್ರಮ ರೂಪಿಸಿದೆ. ಪ್ರತಿ ವಿಧಾನಸಭಾ ಕ್ಷೇತ್ರ, ಟೌನ್ , ಪಂಚಾಯಿತಿಯಿಂದ ಪಾರ್ಲಿಮೆಂಟ್ ವರೆಗೂ ತಾಲೂಕಿನಲ್ಲಿ ಕನಿಷ್ಠ 30 ಜನರನ್ನು ಕೋವಿಡ್ ವಾರಿಯರ್ಸ್ ಮಾಡುತ್ತೇವೆ. ಕನಿಷ್ಠ 200 ಜನ ಮನೆಗಳಿ ಮುಖಂಡರು ಭೇಟಿ ಮಾಡಿ ಸಾಂತ್ವನ ಹೇಳುತ್ತೇವೆ.

ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತೆ. ಸರ್ಕಾರದ ಕೆಲವು ಸ್ಕೀಮ್ಸ್ ಗಳನ್ನು ಫೈನಾನ್ಸಿಯಲ್ ಪ್ಯಾಕೇಜ್ ಘೋಷಣೆ ಮಾಡಲು ಹೇಳಿದ್ವಿ ಎಂದು ವಿವರಿಸಿದರು.

ಸಿಎಂ ಸ್ಥಾನ ಯಾರಿಗೂ ಫಿಕ್ಸ್ ಇಲ್ಲ: ಮುಖ್ಯಮಂತ್ರಿ ಆಯ್ಕೆ ಕುರಿತು ಚುನಾವಣೆಯಲ್ಲಿ ಗೆದ್ದು ಬಂದ ಶಾಸಕರ ಅಭಿಪ್ರಾಯ ಅಂತಿಮ ಆಗುತ್ತೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡದವರೇ ಸಿಎಂ ಆದ ಇತಿಹಾಸ ಇದೆ. ದೇವರಾಜ ಅರಸು, ರಾಮಕೃಷ್ಣ ಹೆಗಡೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರಲಿಲ್ಲ. ಸಿಎಂ ಆಗಲಿಲ್ಲವೇ ಯಾರು ಬೇಕಾದರೂ ಸಿಎಂ ಆಗಬಹುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.