ETV Bharat / city

ಕೋವಿಡ್ ಎಫೆಕ್ಟ್: ಆದಾಯದ ಗುರಿ ಮುಟ್ಟುವಲ್ಲಿ ಪರದಾಡುತ್ತಿರುವ ಮುದ್ರಾಂಕ ಹಾಗೂ ನೋಂದಣಿ ಇಲಾಖೆ! - tax update

ಆರ್ಥಿಕ ವರ್ಷದಲ್ಲಿನ ಮಾಸಿಕ ಆದಾಯದ ಗುರಿ ಮುಟ್ಟಲು ಇನ್ನೂ ಸಾಧ್ಯವಾಗದೇ ಇರುವುದು ಇಲಾಖೆಯನ್ನು ಕಂಗೆಡಿಸಿದೆ. ಆದಾಯದ ಗುರಿಯಲ್ಲಿ ಮಾಸಿಕ ಶೇ.25-30ರಷ್ಟು ಕೊರತೆ ಎದುರಿಸಲಾಗುತ್ತಿದೆ.

covid-effect
ಕೋವಿಡ್ ಎಫೆಕ್ಟ್
author img

By

Published : Nov 5, 2020, 2:08 AM IST

ಬೆಂಗಳೂರು: ಅನ್‌ಲಾಕ್ ಬಳಿಕ ರಾಜ್ಯದಲ್ಲಿ ಆಸ್ತಿ ನೋಂದಣಿಯಲ್ಲಿ ಪ್ರಗತಿ ಕಾಣುತ್ತಿದ್ದರೂ, ಮುದ್ರಾಂಕ ಹಾಗೂ ನೋಂದಣಿ ಇಲಾಖೆಗೆ ಇನ್ನೂ ಮಾಸಿಕ ಆದಾಯದ ಗುರಿಯನ್ನು ಮುಟ್ಟಲು ಸಾಧ್ಯವಾಗಿಲ್ಲ. ಅನ್​ಲಾಕ್ ಬಳಿಕ ಆರು ತಿಂಗಳಲ್ಲಿ ಮುದ್ರಾಂಕ ಹಾಗೂ ನೋಂದಣಿ ಶುಲ್ಕ ಸಂಗ್ರಹದಲ್ಲಿನ ಏರಿಳಿತ ಕೊರೊನಾಘಾತದ ತೀವ್ರತೆ ಇನ್ನೂ ಮಾಸಿಲ್ಲ ಎಂಬುದಕ್ಕೆ ಕೈಗನ್ನಡಿಯಾಗಿದೆ.

ಅನ್‌ಲಾಕ್ ಆದ ಬಳಿಕ ರಾಜ್ಯದಲ್ಲಿನ ಆರ್ಥಿಕ‌ ಚಟುವಟಿಕೆ ನಿಧಾನವಾಗಿ ಸಹಜ‌ ಸ್ಥಿತಿಗೆ ಬರುತ್ತಿದೆ. ಇತ್ತ ಸರ್ಕಾರಕ್ಕೆ ಆದಾಯ ತರುವ ಇಲಾಖೆಗಳು ಚೇತರಿಕೆಯ ಹಾದಿಯಲ್ಲಿವೆ. ಅದರಂತೆ ಮುದ್ರಾಂಕ ಹಾಗೂ ನೋಂದಣಿ ಇಲಾಖೆಯೂ ಪ್ರಗತಿ ಕಾಣುತ್ತಿದೆ. ನಿಧಾನವಾಗಿ ಆಸ್ತಿ ನೋಂದಣಿ ಪ್ರಮಾಣ ಹೆಚ್ಚಾಗುತ್ತಿದ್ದು, ಆದಾಯದಲ್ಲಿ ಚೇತರಿಕೆ ಕಾಣುತ್ತಿದೆ. ಆದರೆ ನೋಂದಣಿ ಶುಲ್ಕ ರೂಪದಲ್ಲಿನ ಆದಾಯ ಸಂಗ್ರಹದಲ್ಲಿನ‌ ಏರುಪೇರು ಇಲಾಖೆಯ ತಲೆನೋವಿಗೆ ಕಾರಣವಾಗಿದೆ.

ಅದರ ಜೊತೆಗೆ ಈ ಆರ್ಥಿಕ ವರ್ಷದಲ್ಲಿನ ಮಾಸಿಕ ಆದಾಯದ ಗುರಿ ಮುಟ್ಟಲು ಇನ್ನೂ ಸಾಧ್ಯವಾಗದೇ ಇರುವುದು ಇಲಾಖೆಯನ್ನು ಕಂಗೆಡಿಸಿದೆ. ಆದಾಯದ ಗುರಿಯಲ್ಲಿ ಮಾಸಿಕ ಶೇ.25-30ರಷ್ಟು ಕೊರತೆ ಎದುರಿಸಲಾಗುತ್ತಿದೆ.

ಹೇಗಿದೆ ಆದಾಯ‌ ಸಂಗ್ರಹದ ಲೆಕ್ಕಾಚಾರ:

ಅನ್‌ಲಾಕ್ ಬಳಿಕ ಮುದ್ರಾಂಕ ಹಾಗೂ ನೋಂದಣಿ ಶುಲ್ಕ ರೂಪದ ಆದಾಯ ಚೇತರಿಕೆಯಲ್ಲೇ ಇದೆ. ನೋಂದಣಿಗೆ ಅನುವು ಮಾಡಿದ ಆರು ತಿಂಗಳಲ್ಲಿ ಇಲಾಖೆ, ಆಗಸ್ಟ್ ತಿಂಗಳಲ್ಲಿ ಗರಿಷ್ಠ ಪ್ರಮಾಣದ ಆದಾಯ ಸಂಗ್ರಹಿಸಿತ್ತು. ಅಂದರೆ 969.19 ಕೋಟಿ ರೂ. ಸಂಗ್ರಹಿಸಲಾಗಿತ್ತು. ಅಂದರೆ ಮಾಸಿಕ ಗುರಿಯ ಶೇ.83.24 ರಷ್ಟು ಪ್ರಗತಿ ಸಾಧಿಸಿತ್ತು.

revenue department
ಆದಾಯದ ಗುರಿ ಮುಟ್ಟುವಲ್ಲಿ ಪರದಾಡುತ್ತಿರುವ ಮುದ್ರಾಂಕ ಹಾಗೂ ನೋಂದಣಿ ಇಲಾಖೆ
ಆದರೆ ನಂತರದ ತಿಂಗಳಾದ ಸೆಪ್ಟೆಂಬರ್ ಹಾಗೂ ಅಕ್ಟೋಬರ್​​‌ನಲ್ಲಿ ಕುಂಠಿತ ಕಂಡಿದೆ. ಸೆಪ್ಟೆಂಬರ್ ತಿಂಗಳಲ್ಲಿ ಇಲಾಖೆ 831.95 ಕೋಟಿ ರೂ. ಅಂದರೆ ಶೇ.70.60 ರಷ್ಟು ಪ್ರಗತಿ ಸಾಧಿಸಿದೆ. ಇನ್ನು ಅಕ್ಟೋಬರ್ ನಲ್ಲಿ 933.53 ಕೋಟಿ ರೂ. ಮಾಸಿಕ ಆದಾಯ ಸಂಗ್ರಹಿಸಿತ್ತು. ಮಾಸಿಕ ಗುರಿಯ ಶೇ.74.82 ಆದಾಯ ಸಂಗ್ರಹಿಸಲು ಸಾಧ್ಯವಾಗಿದೆ. ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಇಲಾಖೆ 878.26 ಕೋಟಿ ರೂ. (88.02%) ಸಂಗ್ರಹಿಸಿತ್ತು. ಅಕ್ಟೋಬರ್‌ನಲ್ಲಿ 902.36 ಕೋಟಿ ರೂ. (88.77%) ಸಂಗ್ರಹಿಸಲಾಗಿತ್ತು. ಈ ಆರ್ಥಿಕ ವರ್ಷದ ಮೊದಲ ಏಳು ತಿಂಗಳು ಮುದ್ರಾಂಕ ಹಾಗೂ ನೋಂದಣಿ ಇಲಾಖೆ 6,151.37 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿತ್ತು. ಆದರೆ ಇದುವರೆಗೆ 4,610.12 ಕೋಟಿ ರೂ. ಅಂದರೆ 74.94% ಆದಾಯದ ಗುರಿ ಮುಟ್ಟಲು ಸಾಧ್ಯವಾಗಿದೆ. ಅದೇ ಕಳೆದ ವರ್ಷ ಇದೇ ಅವಧಿಗೆ 6,432 ಕೋಟಿ ರೂ. ಗುರಿ ಮುಂದೆ 5,572.23 ಕೋಟಿ ರೂ. (86.62%) ಗುರಿ ಮುಟ್ಟಿತ್ತು.ಗುರಿ ತಲುಪದ ಆತಂಕದಲ್ಲಿ ಇಲಾಖೆ:ಕಳೆದ ಆರು ತಿಂಗಳಲ್ಲಿನ ಆದಾಯ ಸಂಗ್ರಹದ ಏರಿಳಿತ ನೋಡಿದರೆ ನಿರೀಕ್ಷಿತ ಆದಾಯ ಮುಟ್ಟುವುದು ಕಷ್ಟ ಸಾಧ್ಯ ಎಂದು ಇಲಾಖೆ ಅಧಿಕಾರಿಗಳೇ ಆತಂಕ ವ್ಯಕ್ತಪಡಿಸಿದ್ದಾರೆ.ಆದಾಯದ ಗುರಿ ಸಾಧಿಸಲು ಸುಮಾರು 25-30% ಕೊರತೆ ಇದ್ದು, ಮುಂದಿನ ಐದು ತಿಂಗಳಲ್ಲಿ ನಿರೀಕ್ಷಿತ ಗುರಿ ಮುಟ್ಟುವುದು ಬಹುತೇಕ ಅನುಮಾನ ಎಂದು ತಿಳಿಸಿದ್ದಾರೆ. ಆಸ್ತಿ ನೋಂದಣಿಯಲ್ಲಿ ಪ್ರಗತಿ ಕಾಣುತ್ತಿದ್ದು, ಉಳಿದಿರುವ ಆರ್ಥಿಕ ವರ್ಷದಲ್ಲಿ ನೋಂದಣಿಗಳಲ್ಲಿ ಇನ್ನಷ್ಟು ಚುರುಕು ಕಾಣುವ ನಿರೀಕ್ಷೆ ಇಲಾಖೆಯದ್ದು.ಗುರಿ-ಸಂಗ್ರಹದ ವಿವರ:ಮೇ:ಗುರಿ - 397.70 ಕೋಟಿಸಾಧನೆ - 358.95 - 90.26%ಜೂನ್:ಗುರಿ - 1,070.61 ಕೋಟಿಸಾಧನೆ - 780.95 ಕೋಟಿಜುಲೈ:ಗುರಿ - 1,064.29 ಕೋಟಿಸಾಧನೆ - 705.76 ಕೋಟಿಆಗಸ್ಟ್:ಗುರಿ - 1,164.26 ಕೋಟಿಸಾಧನೆ - 969.19 ಕೋಟಿಸೆಪ್ಟೆಂಬರ್:ಗುರಿ - 1,176.92 ಕೋಟಿಸಾಧನೆ - 831.95 ಕೋಟಿಅಕ್ಟೋಬರ್:ಗುರಿ - 1,247.78 ಕೋಟಿಸಾಧನೆ - 933.53 ಕೋಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.