ETV Bharat / city

ಸುದೀಪ್ ಹೇಳಿಕೆಯಿಂದ ಆರ್​ಎಸ್​ಎಸ್​, ಬಿಜೆಪಿಗೆ ತುರಿಕೆ ರೋಗ: ದಿನೇಶ್ ಗುಂಡೂರಾವ್

author img

By

Published : Apr 28, 2022, 9:33 PM IST

ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂಬ ನಟ ಸುದೀಪ್​ ಅವರ ಹೇಳಿಕೆಯನ್ನು ಬೆಂಬಲಿಸಿರುವ ಕಾಂಗ್ರೆಸ್​ ಮುಖಂಡ ದಿನೇಶ್​ ಗುಂಡೂರಾವ್​, ಈ ಹೇಳಿಕೆಯಿಂದ ಬಿಜೆಪಿ, ಆರ್​ಎಸ್​ಎಸ್​ಗೆ ತುರಿಕೆ ರೋಗ ಬರಲಿದೆ ಎಂದು ವ್ಯಂಗ್ಯವಾಡಿದ್ದಾರೆ.

dinesh-gundurao
ದಿನೇಶ್ ಗುಂಡೂರಾವ್

ಬೆಂಗಳೂರು: ನಟ ಸುದೀಪ್ ಹೇಳಿಕೆಯಿಂದ ಒನ್‌ನೇಷನ್​ ಹೆಸರಲ್ಲಿ ಹಿಂದಿ ರಾಷ್ಟ್ರೀಯ ಭಾಷೆ ಎಂದು ಬಿಂಬಿಸಲು ಹೊರಟಿರುವ ಆರ್​ಎಸ್​ಎಸ್​, ಬಿಜೆಪಿಗೆ ತುರಿಕೆ ರೋಗ ತರಿಸಬಹುದು. ಹಿಂದಿ ರಾಷ್ಟ್ರೀಯ ಭಾಷೆಯಲ್ಲ ಎಂದಿರುವ ಸುದೀಪ್​ ಹೇಳಿಕೆ ಒಬ್ಬ ಕನ್ನಡಿಗನ ನಿಜವಾದ ಗತ್ತು ತೋರಿಸಿದೆ ಎಂದು ಕಾಂಗ್ರೆಸ್​ ಮುಖಂಡ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ನಟ ಸುದೀಪ್ ಹಿಂದಿ ರಾಷ್ಟ್ರೀಯ ಭಾಷೆಯಲ್ಲ ಎಂದಿರುವ ಹೇಳಿಕೆ ಒಬ್ಬ ಕನ್ನಡಿಗನ ನಿಜವಾದ ಅಂತಸತ್ವವನ್ನು ತೋರಿಸಿದೆ. ಸುದೀಪ್ ಮಾತು ಸತ್ಯ. ಹಿಂದಿ ರಾಷ್ಟ್ರೀಯ ಭಾಷೆಯಾಗಲು ಎಂದಿಗೂ ಸಾಧ್ಯವಿಲ್ಲ. ಕನ್ನಡಿಗರು ಹಿಂದಿಯನ್ನು ಒಂದು ಭಾಷೆಯಾಗಿ ಗೌರವಿಸುತ್ತೇವೆ ಎಂದಿದ್ದಾರೆ.

ಹಿಂದಿಗೆ ದಕ್ಷಿಣದ ಭಾಷೆಗಳಾದ ಕನ್ನಡ, ತಮಿಳು, ಮಲಯಾಳಂ ಹಾಗೂ ತೆಲುಗಿಗೆ ಇರುವ ಶ್ರೀಮಂತ ಪರಂಪರೆಯಿಲ್ಲ. ಶಾಸ್ತ್ರೀಯತೆಯೂ ಇಲ್ಲ. ಜೊತೆಗೆ ಸಂವಿಧಾನದಲ್ಲೂ ಹಿಂದಿ ರಾಷ್ಟ್ರೀಯ ಭಾಷೆ ಎಂಬ ಉಲ್ಲೇಖವಿಲ್ಲ.‌ ಹೀಗಿರುವಾಗ ಹಿಂದಿ ರಾಷ್ಟ್ರೀಯ ಭಾಷೆ ಎಂದು ಬಿಂಬಿಸುವ ಹುನ್ನಾರವೇಕೆ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಭಾಷಾ ವಿವಾದದ ನಡುವೆ 'ಕೆಜಿಎಫ್​-2' ದಾಖಲೆ; ಹಿಂದಿಯಲ್ಲೇ ಅತಿ ಹೆಚ್ಚು ಗಳಿಸಿದ 3ನೇ ಸಿನಿಮಾ!

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.