ETV Bharat / city

MLC Election: ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್. ರವಿ ಜಯಭೇರಿ - ಜೆಡಿಎಸ್ ಅಭ್ಯರ್ಥಿ ರಮೇಶ್ ಗೌಡ ಸೋಲು

ಜೆಡಿಎಸ್ ಅಭ್ಯರ್ಥಿ ರಮೇಶ್ ಗೌಡರನ್ನ 722 ಮತಗಳ ಅಂತರದಿಂದ ಸೋಲಿಸುವ ಮೂಲಕ ಬೆಂಗಳೂರು ಗ್ರಾಮಾಂತರ ವಿಧಾನ ಪರಿಷತ್ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಎಸ್. ರವಿ ಜಯಭೇರಿ ಬಾರಿಸಿದ್ದಾರೆ.

S Ravi
ಎಸ್. ರವಿ
author img

By

Published : Dec 14, 2021, 4:08 PM IST

Updated : Dec 14, 2021, 4:28 PM IST

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ವಿಧಾನ ಪರಿಷತ್ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಎಸ್. ರವಿ ಗೆಲುವು ಸಾಧಿಸಿದ್ದಾರೆ. ಪ್ರತಿಸ್ವರ್ಥಿ ಜೆಡಿಎಸ್ ಅಭ್ಯರ್ಥಿ ರಮೇಶ್ ಗೌಡರನ್ನ 722 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್. ರವಿ ಜಯಭೇರಿ

ಡಿಸೆಂಬರ್ 10 ರಂದು ವಿಧಾನ ಪರಿಷತ್ ಚುನಾವಣೆಗೆ ಮತದಾನ ನಡೆದಿದ್ದು, ಇಂದು ಮತಗಳ ಎಣಿಕೆ ಕಾರ್ಯ ಮಾಡಲಾಯಿತು. ಬೆಂಗಳೂರು ಗ್ರಾಮಾಂತರ ವಿಧಾನ ಪರಿಷತ್ ಕ್ಷೇತ್ರದ ಮತಗಳ ಎಣಿಕೆ ಕಾರ್ಯ ದೇವನಹಳ್ಳಿ ಪಟ್ಪಣದ ಆಕಾಶ್ ಇಂಟರ್ ನ್ಯಾಷನಲ್ ಸ್ಕೂಲ್​​ನಲ್ಲಿ ಮಾಡಲಾಗಿದ್ದು, ಫಲಿತಾಂಶದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್ ರವಿ ಜಯಭೇರಿ ಭಾರಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ವಿಧಾನ ಪರಿಷತ್ ಕ್ಷೇತ್ರವು ರಾಮನಗರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳು ಸೇರಿದಂತೆ 8 ವಿಧಾನಸಭಾ ಕ್ಷೇತ್ರಗಳನ್ನ ಒಳಗೊಂಡಿದೆ. ಚುನಾವಣೆಯಲ್ಲಿ 3,919 ಸ್ಥಳೀಯ ಸಂಸ್ಥೆಗಳ ಸದಸ್ಯರು ತಮ್ಮ ಮತಗಳನ್ನ ಚಲಾಯಿಸಿದ್ದರು. ಇದರಲ್ಲಿ 56 ಮತಗಳು ಅಸಿಂಧು ಆಗಿವೆ. ಸಿಂಧುವಾದ 3,856 ಮತಗಳ ಎಣಿಕೆ ಮಾಡಲಾಗಿದ್ದು, ಎಸ್.ರವಿ 2,262 ಮತಗಳನ್ನ ಪಡೆದಿದ್ದಾರೆ. ರಮೇಶ್ ಗೌಡ 1,540 ಮತಗಳನ್ನ ಪಡೆದಿದ್ದಾರೆ ಮತ್ತು ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ 54 ಮತಗಳನ್ನ ಪಡೆದಿದ್ದಾರೆ.

ಇದನ್ನೂ ಓದಿ: ಮಂಡ್ಯದೊಳಗೆ ಜೆಡಿಎಸ್ ಕೋಟೆ ಕೆಡವಿದ ಕಾಂಗ್ರೆಸ್‌ನ 'ಗೂಳಿ'ಗೌಡ!!

ಕುಮಾರಸ್ವಾಮಿ ಅವರ ರಣತಂತ್ರ ಫಲಿಸಿಲ್ಲ

ಗೆಲುವು ಘೋಷಣೆಯಾದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ರವಿ, ಮೊದಲಿಗೆ ಬೆಳಗಾವಿ ಆಧಿವೇಶನದಲ್ಲಿರುವ ಡಿಕೆ ಶಿವಕುಮಾರ್ ಆಶೀರ್ವಾದ ಪಡೆಯಲು ಬೆಳಗಾವಿಗೆ ಹೋಗುವೆ. ಪಕ್ಷದ ನಿಷ್ಟಾವಂತ ಕಾರ್ಯಕರ್ತರಿಂದ ಗೆಲುವು ಸಿಕ್ಕಿದೆ. ಕುಮಾರಸ್ವಾಮಿ ಅವರ ರಣತಂತ್ರ ಈ ಚುನಾವಣೆಯಲ್ಲಿ ಫಲಿಸಿಲ್ಲ. ಕುಮಾರಸ್ವಾಮಿಯವರೇ ನೇರವಾಗಿ ಚುನಾವಣೆ ಮಾಡಿದರು, ನಮ್ಮ ಕಾರ್ಯಕರ್ತರು ಎದೆ ಗುಂದದೇ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದಾರೆ ಎಂದರು.

Last Updated : Dec 14, 2021, 4:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.