ಬೆಂಗಳೂರು: ಬೆಂಗಳೂರು ಜಲಮಂಡಳಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದ್ದು, ಈ ಸಂಬಂಧ ಯಾವುದೇ ನೇಮಕಾತಿ ಆದೇಶ ಹೊರಡಿಸಿಲ್ಲ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸ್ಪಷ್ಟಪಡಿಸಿದೆ.
ಜಲಮಂಡಳಿಯು ತನ್ನ ವೃಂದ, ನೇಮಕಾತಿ ಮತ್ತು ಬಡ್ತಿ ನಿಬಂಧನೆಗಳಿಗೆ ಸಮಗ್ರ ತಿದ್ದುಪಡಿ ಮಾಡಿ ಕರಡು ನಿಬಂಧನೆಗಳನ್ನು ಜು. 20ರಂದು ರಾಜ್ಯ ಪತ್ರದಲ್ಲಿ ಪ್ರಕಟಿಸಿದೆ. ಆಕ್ಷೇಪಣಿಗಳನ್ನು ಆಹ್ವಾನಿಸಿದ್ದು, ಸದರಿ ಅಧಿಸೂಚನೆಯು ನೇಮಕಾತಿ ಅಧಿಸೂಚನೆಯಾಗಿರುವುದಿಲ್ಲ ಹಾಗೂ ಮಂಡಳಿಯಲ್ಲಿ ಯಾವುದೇ ನೇಮಕಾತಿ ಅರ್ಜಿಯನ್ನು ವಿತರಿಸುತ್ತಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನೇಮಕಾತಿಗೆ ಸಂಬಂಧಿಸಿದ ಯಾವುದೇ ಪ್ರಕಟಣೆಯನ್ನು ಮಂಡಳಿಯ ಅಧಿಕೃತ ಜಾಲತಾಣ WWW. bwssb.gov.in ಹಾಗೂ ದೈನಂದಿನ ಪತ್ರಿಕೆಗಳು ಮಾಧ್ಯಮಗಳ ಪ್ರಕಟಿಸುತ್ತದೆಯೇ ಹೊರತು, ಇತರ ಯಾವುದೇ ಸಾಮಾಜಿಕ ಜಾಲತಾಣದಲ್ಲ ಪ್ರಕಟಿಸುವುದಿಲ್ಲ. ನೇಮಕಾತಿ ಸಂಬಂಧ ಸಾರ್ವಜನಿಕರು ಅಭ್ಯರ್ಥಿಗಳು ಯಾವುದೇ ವಂಚನೆಗೆ ಒಳಗಾಗದಂತೆ ಎಚ್ಚರದಿಂದಿರಲು ಈ ಮೂಲಕ ಕೋರಿದೆ.
ಇದನ್ನೂ ಓದಿ: ಗರ್ಭಿಣಿ ಎಂದು 9 ತಿಂಗಳು ಗಂಡನ ಮನೆಯಲ್ಲಿ ನಟನೆ: ಅಕ್ರಮವಾಗಿ ಮಗು ಪಡೆದು ಜೈಲು ಸೇರಿದ ಮಹಿಳೆ