ಆನೇಕಲ್: ದೇಶದಲ್ಲಿ ರಾಜಕೀಯ ಧೃವೀಕರಣಗೊಂಡು ಬಹುಜನ ಸಮಾಜ ಪಕ್ಷ ಅಧಿಕಾರಕ್ಕೆ ಬರಲಿದೆ. ಮಾಯಾವತಿ ದೇಶದ ಪ್ರಧಾನಿ ಗದ್ದುಗೆ ಏರುವುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ಬಿಎಸ್ಪಿಯನ್ನು ಬೇಷರತ್ ಆಗಿ ಬೆಂಬಲಿಸಿ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ. ವೈ ಚಿನ್ನಪ್ಪ ಚಿಕ್ಕಹಾಗಡೆ ಮನವಿ ಮಾಡಿದರು.
ಆನೇಕಲ್ ಪಟ್ಟಣದ ಡಾ. ಅಂಬೇಡ್ಕರ್ ಸಾರ್ವಜನಿಕ ಗ್ರಂಥಾಲಯ ಆವರಣದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಮತಯಾಚನೆ ಮಾಡಿದರು. ಕಾಂಗ್ರೆಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇವು ಸಮುದಾಯಗಳನ್ನ ಓಟಿಗಾಗಿ ಬಳಸಿಕೊಂಡಿದ್ದೇ ಆಯಿತು ಎಂದು ವಾಗ್ದಾಳಿ ನಡೆಸಿದರು.
ಬಾಬಾ ಸಾಹೇಬ ಅಂಬೇಡ್ಕರ್ರ ಆಶಯಗಳನ್ನು ಚುನಾವಣೆ ಸಂದರ್ಭದಲ್ಲಿ ಮಾತ್ರ ಜಪಿಸುತ್ತಾರೆ. ಇತರೆ ಪಕ್ಷದ ಅಭ್ಯರ್ಥಿಗಳಿಗೆ ತಳ ಸಮುದಾಯದ, ಅಲ್ಪಸಂಖ್ಯಾತರ ಮತಗಳಷ್ಟೇ ಮುಖ್ಯವಾಗುತ್ತಿವೆ. ಬಾಬಾ ಸಾಹೇಬರ ಆಶಯಗಳನ್ನು ಸಾಕಾರಗೊಳಿಸಲು ಬಹುಜನ ಸಮುದಾಯಗಳು ಎಚ್ಚೆತ್ತುಕೊಂಡು, ಬಿಎಸ್ಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಈ ವೇಳೆ ಕಾರ್ಯಕರ್ತರೊಂದಿಗೆ ಆನೇಕಲ್ ಪಟ್ಟಣದ ಮನೆ ಮನೆಗೆ ತೆರಳಿ ವಿವಿಧ ವಿಚಾರಗಳ ಕುರಿತು ಮಾತನಾಡಿದರು.