ETV Bharat / city

ದ್ವಿಚಕ್ರ ವಾಹನಕ್ಕೆ ಬಿಬಿಎಂಪಿ ಟಿಪ್ಪರ್ ಡಿಕ್ಕಿ, ಮಹಿಳೆ ಸಾವು - woman died

ಬೈಕ್‌ಗೆ ಬಿಬಿಎಂಪಿ ಟಿಪ್ಪರ್ ಡಿಕ್ಕಿಯಾಗಿ ಮಹಿಳೆ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆಯಿತು.

BBMP Tipper accident woman died in Bengaluru
ದ್ವಿ-ಚಕ್ರ ವಾಹನಕ್ಕೆ ಬಿಬಿಎಂಪಿ ಟಿಪ್ಪರ್ ಡಿಕ್ಕಿ
author img

By

Published : Jul 10, 2022, 9:48 AM IST

ಬೆಂಗಳೂರು: ಬಿಬಿಎಂಪಿ ಟಿಪ್ಪರ್‌ ಬೈಕ್‌ಗೆ ಡಿಕ್ಕಿ ಹೊಡೆದು ಮಹಿಳೆಯೋರ್ವರು ಮೃತಪಟ್ಟಿರುವ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಾಗರಬಾವಿ ನಿವಾಸಿ ವಿಜಯಕಲಾ (37) ಮೃತರು. ಬೈಕ್ ಸವಾರ ಯೋಗೇಂದ್ರ (41) ಗಾಯಗೊಂಡಿದ್ದಾರೆ.

ಶನಿವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಯೋಗೇಂದ್ರ ಅವರು ವಿಜಯಕಲಾ ಅವರನ್ನು ಬೈಕ್‌ನಲ್ಲಿ ಕೂರಿಸಿಕೊಂಡು ನಾಗರಬಾವಿ ಸರ್ಕಲ್ ಬಳಿ ಹೋಗುತ್ತಿದ್ದರು. ಇದೇ ಸಂದರ್ಭದಲ್ಲಿ ಬಿಬಿಎಂಪಿ ಟಿಪ್ಪರ್‌ ಚಾಲಕ ಮಾನಸ ನಗರದ ಬಸ್ ನಿಲ್ದಾಣದ ಕಡೆಯಿಂದ ಚಂದ್ರಾ ಲೇಔಟ್ ಕಡೆಗೆ ಅತಿ ವೇಗವಾಗಿ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದರಂತೆ. ನಾಗರಬಾವಿ ಸರ್ಕಲ್ ಬಳಿ ಬಂದಾಗ ನಿಯಂತ್ರಣ ತಪ್ಪಿ, ಮುಂದೆ ಹೋಗುತ್ತಿದ್ದ ಯೋಗೇಂದ್ರ ಅವರ ಬೈಕ್‌ಗೆ ಟಿಪ್ಪರ್​​ ಡಿಕ್ಕಿ ಹೊಡೆದಿದೆ.

ಅಪಘಾತದ ರಭಸಕ್ಕೆ ಬೈಕ್‌ನಲ್ಲಿದ್ದ ಇಬ್ಬರೂ ವಾಹನಸಮೇತ ರಸ್ತೆಯ ಮೇಲೆ ಬಿದ್ದಿದ್ದಾರೆ. ಟಿಪ್ಪರ್ ಚಕ್ರ ವಿಜಯಕಲಾ ಸೊಂಟದ ಮೇಲೆ ಹರಿದು ಅವರು ಗಂಭೀರವಾಗಿ ಗಾಯಗೊಂಡಿದ್ದರು. ಯೋಗೇಂದ್ರ ಅವರಿಗೂ ಹೊಟ್ಟೆ ಹಾಗೂ ದೇಹದ ಇತರ ಭಾಗಗಳಿಗೆ ಪೆಟ್ಟು ಬಿದ್ದಿದೆ. ತಕ್ಷಣ ಸಾರ್ವಜನಿಕರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ವಿಜಯಕಲಾ ಮೃತಪಟ್ಟಿದ್ದಾರೆ.

ಯೋಗೇಂದ್ರ ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಬ್ಯಾಟರಾಯನಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಲಾಕ್​ಡೌನ್​ನಲ್ಲಿ ಕೆಲಸ ಕಳೆದುಕೊಂಡ ಇಂಜಿನಿಯರ್: ನಕಲಿ ನೋಟುಗಳ ಮುದ್ರಣದ ಮೊರೆ ಹೋದ..! ಬಳಿಕ ಮಾಡಿದ್ದೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.