ETV Bharat / city

ಮನೆ ಬದಲಾಯಿಸಿದ್ದಲ್ಲಿ, ಮತದಾನಕ್ಕೆ ನೀವು ಅರ್ಹರೇ? ಮತದಾರರ ಪಟ್ಟಿ ಸೇರಲು ಹೀಗೆ ಮಾಡಿ..

ರೇಡಿಯೋ ಹಾಗೂ ಮೆಟ್ರೋ ನಿಲ್ದಾಣಗಳಲ್ಲೂ ಈ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತಿದೆ. ಇನ್ನು ಆನ್​ಲೈನ್ ಮೂಲಕವೂ ಅರ್ಜಿ ಸಲ್ಲಿಸಲು ಹಾಗೂ ಹೆಲ್ಪ್​ಲೈನ್ ನಂಬರ್​ಗಳನ್ನು ಚುನಾವಣಾ ಆಯೋಗ ಸಿದ್ಧತೆ ಮಾಡಿದೆ.

preparing voter list
ಮತದಾರರ ಪಟ್ಟಿ ಸೇರಲು ಹೀಗೆ ಮಾಡಿ
author img

By

Published : Nov 6, 2021, 5:42 PM IST

ಬೆಂಗಳೂರು: ಮತದಾರರ ಪಟ್ಟಿಯಲ್ಲಿ ಹೆಸರಿದೆಯೇ?, ಮನೆ ಬದಲಾಯಿಸಿದ್ದರೆ ಹೊಸ ಮತದಾರರ ಪಟ್ಟಿಗೆ ಹೆಸರು ವರ್ಗಾವಣೆ ಮಾಡೋದು ಹೇಗೆ?, 18 ವರ್ಷ ತುಂಬಿದ್ದು, ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗೋದು ಹೇಗೆ?, ಹೀಗೆ ಜನರ ಗೊಂದಲಗಳಿಗೆ ಬಿಬಿಎಂಪಿ ಹಾಗೂ ಚುನಾವಣಾ ಆಯೋಗ ವಿಶೇಷ ನೋಂದಣಿ ಅಭಿಯಾನದ ಮೂಲಕ ಸೇರ್ಪಡೆಗೊಳಿಸಲು ಮುಂದಾಗಿದೆ.

ಬಿಬಿಎಂಪಿಯು ಸೋಮವಾರ ಕರಡು ಮತದಾರರ ಪಟ್ಟಿಯನ್ನು ಪ್ರಕಟಣೆ ಮಾಡಲಿದೆ. ನಂತರ ಡಿಸೆಂಬರ್ 8 ರವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ಅಥವಾ ಹೆಸರು, ವಿಳಾಸದಲ್ಲಿ ವ್ಯತ್ಯಾಸಗಳಿದ್ದರೆ ತಿದ್ದುಪಡಿ ಮಾಡಿಕೊಳ್ಳಲು, ಹೆಸರನ್ನು ತೆಗೆಯಲು, ಬೇರೆ ವಿಧಾನಸಭಾ ಕ್ಷೇತ್ರಕ್ಕೆ ಅಥವಾ ಆ ಕ್ಷೇತ್ರದ ಒಳಗೇ ಹೆಸರನ್ನು ವರ್ಗಾವಣೆ ಮಾಡಿಕೊಳ್ಳಲು ಅವಕಾಶಗಳಿರುತ್ತವೆ. ಇದೆಲ್ಲ ಆದನಂತರ ಜನವರಿ 13ನೇ ತಾರೀಕು ಅಂತಿಮ ಮತದಾರರ ಪಟ್ಟಿಯನ್ನು ಬಿಬಿಎಂಪಿ ಪ್ರಕಟಿಸಲಿದೆ ಎಂದು ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತ ದಯಾನಂದ್ ತಿಳಿಸಿದರು.

ಇನ್ನು ಜನರಿಗೆ ಅನುಕೂಲ ಆಗಲು, ಭಾನುವಾರದಂದೂ ಕೂಡ ಪಾಲಿಕೆ ಈ ಸೇವೆ ಒದಗಿಸಲು ಮುಂದಾಗಿದೆ. ಹೀಗಾಗಿ ಚುನಾವಣಾ ಆಯೋಗ ವಿಶೇಷ ಅಭಿಯಾನದ ಮೂಲಕ ನಾಲ್ಕು ಭಾನುವಾರಗಳಂದು ವಾರ್ಡ್ ಆಫೀಸ್, ಮತದಾರರ ನೋಂದಣಾಧಿಕಾರಿಗಳ ಕಚೇರಿ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿ ಮತ್ತು ಮತಗಟ್ಟೆಗಳಲ್ಲಿ ಅರ್ಜಿ ಸಲ್ಲಿಸಬಹುದು.

ರೇಡಿಯೋ ಹಾಗೂ ಮೆಟ್ರೋ ನಿಲ್ದಾಣಗಳಲ್ಲೂ ಈ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತಿದೆ. ಇನ್ನು ಆನ್​ಲೈನ್ ಮೂಲಕವೂ ಅರ್ಜಿ ಸಲ್ಲಿಸಲು ಹಾಗೂ ಹೆಲ್ಪ್ ಲೈನ್ ನಂಬರ್​ಗಳನ್ನು ಆಯೋಗ ಸಿದ್ಧತೆ ಮಾಡಿದೆ.

-ಮತದಾರರ ಸಹಾಯವಾಣಿ ಮೊಬೈಲ್ ಆ್ಯಪ್

-NVSP ಪೋರ್ಟಲ್(www.nvsp.in)
-1950 ವೋಟರ್ ಹೆಲ್ಪ್​ಲೈನ್
-voter portal(www.voterportal.eci.gov.in)

ತಮ್ಮ ಕುಟುಂಬದ ಸದಸ್ಯರು ತೀರಿಹೋಗಿದ್ದಲ್ಲಿ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಅರ್ಜಿ 7 ಮತ್ತು ಮರಣಪ್ರಮಾಣ ಪತ್ರ ನೀಡಬಹುದು. ಹೊಸದಾಗಿ ಸೇರ್ಪಡೆಯಾಗುವವರು ವಿಳಾಸ ದೃಢೀಕರಣಕ್ಕಾಗಿ ಹಾಗೂ ವಯಸ್ಸಿನ ದೃಢೀಕರಣಕ್ಕಾಗಿ ದಾಖಲೆಗಳನ್ನು ಸಲ್ಲಿಸಬೇಕು. 1-1-2003 ಕ್ಕಿಂತ ಮೊದಲು ಜನಿಸಿರುವ ಎಲ್ಲರೂ ಮತದಾನ ಮಾಡಲು ಅರ್ಹರಾಗಿದ್ದು, ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಬಹುದು ಎಂದರು.

ಇನ್ನು ಮತದಾನದ ದಿನ ಮತಗಟ್ಟೆಗೆ ನೇರವಾಗಿ ಬಂದು ಗುರುತಿನ ಚೀಟಿಯೊಂದಿಗೆ ಮತದಾನ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಜನರಲ್ಲಿ ತಪ್ಪು ತಿಳಿವಳಿಕೆ ಇದೆ. ಮತದಾರರ ಕಾರ್ಡ್ ಇದ್ದರೆ ಎಲ್ಲಾ ಕಡೆ ಮತದಾನ ಮಾಡಲು ಸಾಧ್ಯವಿಲ್ಲ. ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಹೊರತು ಮತದಾನ ಮಾಡಲು ಸಾಧ್ಯವಿಲ್ಲ. ಮನೆ ಬದಲಾವಣೆ ಮಾಡಿದಾಗ ಪ್ರತೀ ಸಲ ಮತದಾರರ ಪಟ್ಟಿಯಲ್ಲಿ ಹೆಸರಿದೆಯೇ ಎಂದು ಮೊದಲೇ ಪರಿಶೀಲಿಸಿಕೊಳ್ಳಬೇಕು ಎಂದರು.

ಯಾರ್ಯಾರು ಶಿಫ್ಟ್ ಆಗಿದ್ದಾರೋ ಅವರ ಹೆಸರನ್ನು ಬೂತ್ ಲೆವೆಲ್ ಅಧಿಕಾರಿಗಳು ಡಿಲೀಟ್ ಮಾಡಿರುತ್ತಾರೆ. ಹೀಗಾಗಿ ಮನೆ ಶಿಫ್ಟ್ ಆದ ಹೊಸ ಜಾಗದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಳ್ಳುವುದು ಮುಖ್ಯ ಎಂದು ಮುಖ್ಯ ಆಯುಕ್ತರು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.