ಬೆಂಗಳೂರು: ಮಂಗಳೂರಿನಲ್ಲಿ ಕೇರಳದ ಸಿಪಿಐ ಸಂಸದ ಬಿನೋಯ್ ವಿಸ್ವಂ ಹಾಗೂ ಇತರರನ್ನು ಬಂಧಿಸಿರೋ ಹಿನ್ನೆಲೆ ಬೆಂಗಳೂರಿನಲ್ಲೂ ಭಾರಿ ವಿರೋಧ ವ್ಯಕ್ತವಾಗಿದೆ.
ಎಐಟಿಯುಸಿ ರಾಜ್ಯಾಧ್ಯಕ್ಷ ಅನಂತ ಸುಬ್ಬುರಾವ್‌ರಿಂದ ಮಲ್ಲೇಶ್ವರಂನ ಕುವೆಂಪು ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.ಇದೇ ವೇಳೆ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸೋ ಹಕ್ಕು ಎಲ್ಲರಿಗೂ ಇದೆ. ಅದನ್ನು ಕಿತ್ತುಕೊಂಡು ಬಂಧಿಸಲು ಮೋದಿ ಯಾರು? ಕೂಡಲೇ ಬಂಧಿತರನ್ನ ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು.
ಈಗ ಜಾರಿಯಾಗಿರುವ ಕಾಯಿದೆ ದೇಶವನ್ನು ಹೊಡೆಯುವ ಕಾಯಿದೆಯಾಗಿದೆ. ಸರ್ವಜನಾಂಗದ ಶಾಂತಿಯ ತೋಟದ ಬಗ್ಗೆ ಬಿಜೆಪಿ ಪಕ್ಷಕ್ಕೆ, ಮೋದಿ ಮತ್ತು ಅಮಿತ್ ಷಾಗೆ ಗೊತ್ತಿಲ್ಲ ಅನ್ನಿಸುತ್ತೆ. ಯಾವುದೋ ಒಂದು ಜನಾಂಗದ ಹೆಸರಲ್ಲಿ ಪ್ರಭುತ್ವ ನಡೆಸಿಕೊಂಡು ಹೋಗುತ್ತಿದ್ದಾರೆ ಅಂತ ಆಕ್ರೋಶ ಹೊರಹಾಕಿದರು. ವೋಟು ಬ್ಯಾಂಕ್ ಜಾಸ್ತಿ ಮಾಡಿಕೊಳ್ಳಲು ಇಂತಹ ಕಾಯಿದೆ ಜಾರಿಗೆ ತರುತ್ತೀರಾ? ಅಂತ ಪ್ರಶ್ನಿಸಿದ್ರು.