ETV Bharat / city

ಬೆಂಗಳೂರಿನಲ್ಲಿ ಕೋವಿಡ್​ ಹೆಚ್ಚಳ - ಕೆಲ ವ್ಯಾಪಾರಿಗಳ ಸ್ಥಳಾಂತರಕ್ಕೆ ನಿರ್ಧಾರ! - ಬೆಂಗಳೂರು ವ್ಯಾಪಾರಿಗಳ ಸ್ಥಳಾಂತರ

ಬಿಬಿಎಂಪಿ ಕೋವಿಡ್​ ತಡೆಗೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಬಾರಿ ಫುಟ್ ಪಾತ್ ವ್ಯಾಪಾರಿಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲು ಬಿಬಿಎಂಪಿ ನಿರ್ಧರಿಸಿದೆ.

covid effects on bangalore Merchants
ಫುಟ್ ಪಾತ್ ವ್ಯಾಪಾರಿಗಳ ಮೇಲೆ ಕೋವಿಡ್​​ ಎಫೆಕ್ಟ್​​
author img

By

Published : Jan 12, 2022, 1:29 PM IST

Updated : Jan 12, 2022, 1:50 PM IST

ಬೆಂಗಳೂರು: ಬೆಂಗಳೂರಿನಲ್ಲಿಂದು 15,617 ಮಂದಿಗೆ ಕೋವಿಡ್​ ತಗುಲಿರುವುದು ದೃಢಪಟ್ಟಿದ್ದು, ಕೊರೊನಾ ಭೀತಿ ಹೆಚ್ಚಿದೆ. ಹಾಗಾಗಿ ಬಿಬಿಎಂಪಿ ಕೋವಿಡ್​ ತಡೆಗೆ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಕಳೆದೆರಡು ಕೋವಿಡ್ ಅಲೆಗಳ ಸಂದರ್ಭದಲ್ಲಿ ನಗರದ ಹೃದಯ ಭಾಗದಲ್ಲಿದ್ದ ಕೆ.ಆರ್ ಮಾರ್ಕೆಟ್, ಕಲಾಸಿಪಾಳ್ಯ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಮುಚ್ಚಿ ನಗರದ ಹೊರಭಾಗಕ್ಕೆ ಸ್ಥಳಾಂತರಿಸಲಾಗಿತ್ತು.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ

ಆದ್ರೆ ಈ ಬಾರಿ ಫುಟ್​​​ಪಾತ್ ವ್ಯಾಪಾರಿಗಳನ್ನಷ್ಟೇ ಬೇರೆಡೆಗೆ ಸ್ಥಳಾಂತರ ಮಾಡಲು ಬಿಬಿಎಂಪಿ ನಿರ್ಧರಿಸಿದೆ. ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಇದ್ದರೂ ಇತರೆ ದಿನಗಳಲ್ಲಿ ಮಾರುಟ್ಟೆಗಳಲ್ಲಿ ಜನದಟ್ಟಣೆ ಆಗುತ್ತಿರುವುದಕ್ಕೆ ಬಿಬಿಎಂಪಿ ಈ ನಿರ್ಧಾರಕ್ಕೆ ಬಂದಿದೆ.

ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಮಾರುಕಟ್ಟೆಗಳಲ್ಲಿ ಹೆಚ್ಚಿನ ಜನದಟ್ಟಣೆ ಆಗುತ್ತಿದೆ. ಇಕ್ಕಟ್ಟು ಸ್ಥಳಗಳಲ್ಲಿ ಹೆಚ್ಚಿನ ಜನರು ಸೇರುತ್ತಿದ್ದಾರೆ.

ಹೀಗಾಗಿ ಮಾರುಕಟ್ಟೆಯ ಕೆಲವು ಫುಟ್ ಪಾತ್ ವ್ಯಾಪಾರಿಗಳನ್ನು ಮಾರ್ಕೆಟ್ ಸುತ್ತಲಿನ ರಸ್ತೆಗಳಿಗೆ ಸ್ಥಳಾಂತರಿಸಲಾಗುವುದು. ಪೊಲೀಸರ ಜೊತೆ ಹಾಗೂ ಸ್ಥಳೀಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ, ವ್ಯಾಪಾರಿಗಳನ್ನು ಒಂದು ಕಿ.ಮೀ ವ್ಯಾಪ್ತಿಯೊಳಗೆ ಸ್ಥಳಾಂತರಿಸಿ, ನಿಗದಿತ ಸ್ಥಳದಲ್ಲಿ ವ್ಯಾಪಾರಕ್ಕೆ ಅವಕಾಶ ಕೊಡಲಾಗುವುದು ಎಂದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ 15,617 ಜನರಿಗೆ ಕೋವಿಡ್​.. ಗೌರವ್ ಗುಪ್ತಾ ಹೇಳಿದ್ದೇನು?

ವ್ಯಾಪಾರಕ್ಕೆ ಅವಕಾಶ ನಿರಾಕರಿಸುವ ಬದಲು ಸುತ್ತಲಿನ ಪ್ರದೇಶಕ್ಕೆ ಚದುರಿಸಿ ವ್ಯಾಪಾರ ನಡೆಸಲು ಅವಕಾಶ ಕೊಡುತ್ತಿರುವುದು ವ್ಯಾಪಾರಿಗಳ ಪಾಲಿಗೂ ಸಮಾಧಾನಕರವಾಗಿದೆ. ಆದರೆ ಇದಕ್ಕೆ ಯಾವ ರೀತಿ ಸ್ಪಂದನೆ ಸಿಗಲಿದೆ, ಸುತ್ತಲಿನ ವಾಹನ ದಟ್ಟಣೆ ಮೇಲೆ ಯಾವ ಪರಿಣಾಮ ಬೀಳಲಿದೆ ಎಂಬುದು ಕಾದು ನೋಡಬೇಕಿದೆ.

Last Updated : Jan 12, 2022, 1:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.