ETV Bharat / city

ನ್ಯಾಯವಾದಿ ಹತ್ಯೆ ಪ್ರಕರಣ : ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಒತ್ತಾಯಿಸಲು ಎಎಬಿ ನಿರ್ಣಯ - ವಕೀಲರ ರಕ್ಷಣಾ ಕಾಯ್ದೆ

ನಗರದ ವಕೀಲರ ಭವನದಲ್ಲಿ ಇಂದು ಮಧ್ಯಾಹ್ನ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ವಿಶೇಷ ಸಭೆ ನಡೆಸಲಾಯಿತು. ಸಭೆಯ ಆರಂಭದಲ್ಲಿ ಹತ್ಯೆಗೀಡಾದ ವಕೀಲ ವೆಂಕಟೇಶ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಳಿಕ ವಕೀಲರ ಸುರಕ್ಷತೆಗೆ ಸಂಬಂಧಿಸಿದಂತೆ ಕೈಗೊಳ್ಳಬಹುದಾದ ಹಲವು ಕ್ರಮಗಳ ಕುರಿತು ಚರ್ಚಿಸಲಾಯಿತು.

AAB's decision to force the enactment of the Defense of Lawyers Act
aab
author img

By

Published : Mar 1, 2021, 9:52 PM IST

ಬೆಂಗಳೂರು : ಹೊಸಪೇಟೆ ನ್ಯಾಯಾಲಯದ ಆವರಣದಲ್ಲಿ ನಡೆದ ನ್ಯಾಯವಾದಿ ಡಾ. ತಾರಿಹಳ್ಳಿ ವೆಂಕಟೇಶ್ ಅವರ ಬರ್ಬರ ಹತ್ಯೆ ಪ್ರಕರಣ ಹಿನ್ನೆಲೆ ಇಂದು ಬೆಂಗಳೂರು ವಕೀಲರ ಸಂಘ (ಎಎಬಿ) ಸರ್ವ ಸದಸ್ಯರ ವಿಶೇಷ ಸಭೆ ನಡೆಸಿ, ವಕೀಲರ ರಕ್ಷಣಾ ಕಾಯ್ದೆ ಜಾರಿಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ತರಲು ನಿರ್ಣಯ ಕೈಗೊಂಡಿದೆ.

ನಗರದ ವಕೀಲರ ಭವನದಲ್ಲಿ ಇಂದು ಮಧ್ಯಾಹ್ನ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ವಿಶೇಷ ಸಭೆ ನಡೆಸಲಾಯಿತು. ಸಭೆಯ ಆರಂಭದಲ್ಲಿ ಹತ್ಯೆಗೀಡಾದ ವಕೀಲ ವೆಂಕಟೇಶ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಳಿಕ ವಕೀಲರ ಸುರಕ್ಷತೆಗೆ ಸಂಬಂಧಿಸಿದಂತೆ ಕೈಗೊಳ್ಳಬಹುದಾದ ಹಲವು ಕ್ರಮಗಳ ಕುರಿತು ಚರ್ಚಿಸಲಾಯಿತು.

ವಕೀಲರ ಸುರಕ್ಷತೆಗೆ ವಕೀಲರ ರಕ್ಷಣಾ ಕಾಯ್ದೆಯನ್ನು ತುರ್ತಾಗಿ ಜಾರಿಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ತರುವುದು, ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಹಾಗೂ ಭಾರತೀಯ ವಕೀಲರ ಪರಿಷತ್ತಿನ ಪ್ರತಿನಿಧಿಗಳ ಮೂಲಕ ಕೇಂದ್ರದ ಮೇಲೆ ಹೆಚ್ಚಿನ ಒತ್ತಡ ತರುವ ಕುರಿತು ನಿರ್ಧರಿಸಲಾಯಿತು.

ಇನ್ನು ರಾಷ್ಟ್ರ ಹಾಗೂ ರಾಜ್ಯದಲ್ಲಿ ವಕೀಲರ ಹತ್ಯೆಗಳನ್ನು ಖಂಡಿಸಿ ಹಾಗೂ ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಒತ್ತಾಯಿಸಿ ಮಾರ್ಚ್ 3ರಂದು ಹೈಕೋರ್ಟ್ ಗೋಲ್ಡನ್ ಗೇಟ್ ಮುಂಭಾಗ ಎಎಬಿ ಧರಣಿ ನಡೆಸುವುದು, ಜಿಲ್ಲಾ ವಕೀಲರ ಸಂಘಟನೆಗಳು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ, ತಾಲೂಕು ವಕೀಲರ ಸಂಘಗಳು ಧರಣಿ ನಡೆಸುವಂತೆ ಕೋರಲು ತೀರ್ಮಾನಿಸಲಾಯಿತು.

ಹಾಗೆಯೇ ನ್ಯಾಯಾಲಯಗಳ ಆವರಣದಲ್ಲಿ ವಕೀಲರ ಮೇಲೆ ಹಲ್ಲೆಗಳಾದಾಗ ತಕ್ಷಣ ಕ್ರಮ ಕೈಗೊಳ್ಳಲು ಪೂರಕವಾಗಿ ಸೂಕ್ತ ನಿಯಮಗಳನ್ನು ರೂಪಿಸಲು ರಾಜ್ಯ ಹೈಕೋರ್ಟ್​ಗೆ ಒತ್ತಾಯಿಸಲು ಹಾಗೂ ವಕೀಲರ ರಕ್ಷಣಾ ಕಾಯ್ದೆಯ ಕರಡು ಸಿದ್ದಪಡಿಸಲು ಹಿರಿಯ ವಕೀಲರಾದ ಉದಯ್ ಹೊಳ್ಳ, ಸಿ.ಎಚ್ ಹನುಮಂತರಾಯ, ಎ.ಎಸ್. ಪೊನ್ನಣ್ಣ ಮತ್ತು ಡಿ.ಆರ್. ರವಿಶಂಕರ್ ಅವರನ್ನೊಳಗೊಂಡ ಸಮಿತಿ ರಚಿಸಲು ಸಭೆ ತೀರ್ಮಾನಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.