ಬೆಂಗಳೂರು : ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನ ಪ್ರಾಣ 112 ಸಹಾಯವಾಣಿಯಿಂದ ಬಚಾವಾದ ಘಟನೆ ಜೆ.ಪಿನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಖಿನ್ನತೆಯಿಂದ ಬಳಲುತ್ತಿದ್ದ 24 ವರ್ಷದ ಯುವಕ ಜೆ.ಪಿ.ನಗರ ಠಾಣಾ ವ್ಯಾಪ್ತಿಯ ತನ್ನ ಪಿ.ಜಿಯಲ್ಲಿ ಯಾರೂ ಇರದಿದ್ದಾಗ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಆತ್ಮಹತ್ಯೆ ಯತ್ನಕ್ಕೂ ಮುನ್ನ ಸ್ನೇಹಿತನಿಗೆ ಡೆತ್ ನೋಟ್ ರವಾನಿಸಿದ್ದು, ಹೊರಗಡೆಯಿದ್ದ ಕಾರಣ ಯುವಕನ ಸ್ನೇಹಿತ 112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದ. ಮಾಹಿತಿ ಪಡೆದ ತಕ್ಷಣ ಪಿ.ಜಿಗೆ ತೆರಳಿದ ಜೆ.ಪಿ.ನಗರ ಠಾಣಾ ಹೊಯ್ಸಳ ಸಿಬ್ಬಂದಿ ಎಎಸ್ಐ ಚಂದ್ರಶೇಖರ್ ಹಾಗೂ ಹೆಡ್ ಕಾನ್ಸ್ಟೆಬಲ್ಬಿ.ರಮೇಶ್ ತೀವ್ರ ರಕ್ತಸ್ರಾವದಿಂದ ಅಸ್ವಸ್ಥನಾಗಿದ್ದ ಯುವಕನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಪೊಲೀಸರ ಸಮಯ ಪ್ರಜ್ಞೆ ಪ್ರಶಂಸೆಗೆ ಪಾತ್ರವಾಗಿದೆ.
ಇದನ್ನೂ ಓದಿ : ಸಾಂಗ್ಲಿಯಲ್ಲಿ 9 ಜನರ ಸಾವಿನ ಪ್ರಕರಣ : ನಿಧಿಗಾಗಿ ವಿಷಪ್ರಾಶನ ಮಾಡಿದ ರಾಕ್ಷಸರು