ETV Bharat / city

ಡಿ.26ಕ್ಕೆ ಜನಸೇವಾ ವಿದ್ಯಾಕೇಂದ್ರದ ಪೂರ್ಣ ಮಂಡಲೋತ್ಸವ : ರಾಜ್ಯಪಾಲರಿಂದ ಉದ್ಘಾಟನೆ

author img

By

Published : Dec 4, 2021, 1:55 PM IST

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರೇರಣೆಯಿಂದ 1971ರಲ್ಲಿ “ಜನಸೇವಾ ಟ್ರಸ್ಟ್” ಹೆಸರಿನಲ್ಲಿ ಶೈಕ್ಷಣಿಕ ಚಟುವಟಿಕೆ ಪ್ರಾರಂಭಿಸಲಾಯಿತು. ಈಗ 50 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಇಡೀ ವರ್ಷ ಪೂರ್ಣ ಮಂಡಲೋತ್ಸವ (ಸ್ವರ್ಣ ಜಯಂತಿ ವರ್ಷ) ಆಚರಿಸಲು ನಿರ್ಧರಿಸಲಾಗಿದೆ..

50th year celebration for janaseva education trust
ಡಿ.26ಕ್ಕೆ ಜನಸೇವಾ ವಿದ್ಯಾಕೇಂದ್ರದ ಪೂರ್ಣ ಮಂಡಲೋತ್ಸವ

ಬೆಂಗಳೂರು : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರೇರಣೆಯಿಂದ 1971ರಲ್ಲಿ “ಜನಸೇವಾ ಟ್ರಸ್ಟ್” ಹೆಸರಿನಲ್ಲಿ ಶೈಕ್ಷಣಿಕ ಚಟುವಟಿಕೆ ಪ್ರಾರಂಭಿಸಲಾಯಿತು. ಈಗ 50 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಇಡೀ ವರ್ಷ ಪೂರ್ಣ ಮಂಡಲೋತ್ಸವ (ಸ್ವರ್ಣ ಜಯಂತಿ ವರ್ಷ) ಆಚರಿಸಲು ನಿರ್ಧರಿಸಲಾಗಿದೆ ಎಂದು ಆರ್​ಎಸ್​ಎಸ್​ನ ಕ್ಷೇತ್ರೀಯ ಕಾರ್ಯವಾಹಕ, ಜನಸೇವಾ ವಿಶ್ವಸ್ತಮಂಡಳಿ ನಿರ್ವಾಹಕ ಎನ್. ತಿಪ್ಪೇಸ್ವಾಮಿ ತಿಳಿಸಿದರು.

ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್

ರಾಜ್ಯಪಾಲರಿಂದ ಮಂಡಲೋತ್ಸವ ಕಾರ್ಯಕ್ರಮ ಉದ್ಘಾಟನೆ : ಮಾಗಡಿ ರಸ್ತೆಯಲ್ಲಿರುವ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಸ್ವರ್ಣ ಜಯಂತಿ ನಿಮಿತ್ತ ವರ್ಷ ಪೂರ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಡಿಸೆಂಬರ್ 26ರಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪೂರ್ಣ ಮಂಡಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ‌.

ರಾಮಕೃಷ್ಷಾಶ್ರಮದ ಅಧ್ಯಕ್ಷ ಮುಕ್ತಿದಾನಂದಜಿ, ಸಂಸ್ಕೃತ ಮಹಾವಿದ್ಯಾಲಯದ ಕುಲಪತಿ ದೇವನಾಥನ್, ಗೋಕುಲ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಎಂ.ಆರ್. ಜಯರಾಮ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಡಾ. ಇ.ವಿ. ರಮಣ ರೆಡ್ಡಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆಯವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ತಿಳಿಸಿದರು.

ವಿವಿಧ ಪ್ರಕಾರದ ಚಟುವಟಿಕೆಗಳ ಪ್ರಾರಭಕ್ಕೆ ನಿರ್ಧಾರ : ಸ್ವರ್ಣ ಜಯಂತಿ ಕಾರ್ಯಕ್ರಮದಡಿ ಶೈಕ್ಷಣಿಕ ಉನ್ನತೀಕರಣ, ಕನ್ನಡ ಮಾಧ್ಯಮದ ಅಧಿಶೀಲ ಶಿಕ್ಷಣ, ಗೋಶಾಲೆ, ಪ್ರಕೃತಿ ಚಿಕಿತ್ಸಾ ಕೇಂದ್ರ, ವರ್ಷಪೂರ್ತಿ ಬೇರೆ ಬೇರೆ ತಿಂಗಳುಗಳಲ್ಲಿ ಗುರುಕುಲದ ರಾಷ್ಟ್ರೀಯ ಸಮ್ಮೇಳನ, ಹಿರಿಯ ವಿದ್ಯಾರ್ಥಿ ಸಮಾವೇಶ, ತರುಣ ಶಕ್ತಿಯ ಸಮಾವೇಶ ಮತ್ತು ಸುತ್ತಲಿನ 50 ಗ್ರಾಮಗಳಲ್ಲಿ ವಿವಿಧ ಪ್ರಕಾರದ ಚಟುವಟಿಕೆಗಳನ್ನು ಪ್ರಾರಂಭಿಸಬೇಕೆಂದು ನಿಶ್ಚಯಿಸಲಾಗಿದೆ ಎಂದು ಹೇಳಿದರು.

600 ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಲಾಗುತ್ತಿದೆ : ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಜೊತೆಗೆ ದೇಶಭಕ್ತಿ, ಸಂಸ್ಕಾರ ಹಾಗೂ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಪ್ರಾರಂಭವಾದ ಜನಸೇವಾ ವಿದ್ಯಾಕೇಂದ್ರವು ಆರಂಭದಲ್ಲಿ ಬೆಂಗಳೂರಿನ ಗೋವಿಂದರಾಜನಗರದಲ್ಲಿ 13 ವಿದ್ಯಾರ್ಥಿಗಳಿಂದ ಪ್ರಾರಂಭವಾಯಿತು. ಅಂದಿನಿಂದ ಇಂದಿನವರೆಗೂ 5 ರಿಂದ 10ನೇ ತರಗತಿಯವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮ ಎರಡರಲ್ಲೂ ಶಿಕ್ಷಣ ನೀಡಲಾಗುತ್ತಿದೆ.

ಶಿಕ್ಷಣದೊಂದಿಗೆ ಯೋಗ, ದೇಶೀಯ ಆಟಗಳು, ಗೋಸೇವೆ, ಕೃಷಿ, ಗ್ರಾಮ ಸಂಪರ್ಕ ಹೀಗೆ ಬದುಕಿನ ಪಾಠಕ್ಕೆ ಸಂಬಂಧಿಸಿದಂತೆ ಕರ್ನಾಟಕದಾದ್ಯಂತ ಬಂದಿರುವ ಸುಮಾರು 600 ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದರು. 1996ರಲ್ಲಿ ರಜತ ಮಹೋತ್ಸವದ ನಿಮಿತ್ತವಾಗಿ ನಮ್ಮ ವೇದ, ಸಂಸ್ಕೃತಿ ಮತ್ತು ಭವ್ಯ ಪರಂಪರೆಯನ್ನು ಉಳಿಸಿ ಬೆಳಿಸಿ ಪ್ರಚುರಪಡಿಸಲು “ವೇದ ವಿಜ್ಞಾನ ಗುರುಕುಲ''ವನ್ನು ಪ್ರಾರಂಭಿಸಲಾಯಿತು. ಇದೀಗ 24 ವರ್ಷಗಳನ್ನು ಪೂರೈಸಿದ ಗುರುಕುಲ ತನ್ನ ಗುರಿ ಸಾಧಿಸುವಲ್ಲಿ ಸಫಲತೆಯನ್ನು ಕಂಡಿದೆ. ಮತ್ತು ಅದೇ ನಮ್ಮ ವೇದ ವಿಜ್ಞಾನ ಗುರುಕುಲ ಬೆಳ್ಳಿ ಹಬ್ಬವನ್ನು ಸ್ವರ್ಣಜಯಂತಿಯ ಅಂತರ್ಗತವಾಗಿ ಆಚರಿಸಲಾಗುತ್ತದೆ.

2006ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎರಡನೇ ಸರ ಸಂಘಚಾಲಕರಾದ ಗುರೂಜಿಯವರ ಜನ್ಮ ಶತಾಬ್ದಿಯ ನಿಮಿತ್ತ ಜನಸೇವಾ ಪದವಿಪೂರ್ವ ಕಾಲೇಜ್‌ ಅನ್ನು ಪ್ರಾರಂಭಿಸಲಾಯಿತು. 2010ರಲ್ಲಿ ವೇದ ವಿಜ್ಞಾನ ಗುರುಕುಲದ ಪಾದ ಮಂಡಲೋತ್ಸವ (12 ವರ್ಷಗಳು) ಸಂದರ್ಭದಲ್ಲಿ ವೇದ ವಿಜ್ಞಾನ ಶೋಧ ಸಂಸ್ಥಾನವೆಂಬ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಯಿತು. ಪ್ರಾಚೀನ ಗುರುಕುಲ ಪದ್ಧತಿಯಂತೆ ವೇದ ವಿಜ್ಞಾನ ಗುರುಕುಲದಲ್ಲಿ ಶಿಕ್ಷಣ, ವಸತಿ ಆಹಾರ ಮತ್ತು ಔಷಧವನ್ನು ನಿಶುಲ್ಕವಾಗಿ ನೀಡಲಾಗುತ್ತಿದ್ದು ಹಾಗೂ ಸಮಾಜದ ಎಲ್ಲಾ ವರ್ಗದ ಆಯ್ದ ವಿದ್ಯಾರ್ಥಿಗಳಿಗೆ ಇದರ ಪ್ರಯೋಜನವನ್ನು ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಗ್ರಾಮ ವಿಕಾಸ ಯೋಜನೆ : ಗ್ರಾಮ ವಿಕಾಸ ಯೋಜನೆ ಅಡಿಯಲ್ಲಿ ಮೂರು ಯೋಗ ಕೇಂದ್ರಗಳು, 4 ಭಜನಾ ಕೇಂದ್ರಗಳು, 10 ಕಲಿಕಾ ಕೇಂದ್ರಗಳು, 10 ಬಾಲ ಗೋಕುಲ ಕೇಂದ್ರಗಳನ್ನು ಸ್ಥಾಪಿಸಿ ಸುಮಾರು 94 ಗ್ರಾಮಗಳಲ್ಲಿ ನಿರಂತರ ಸಂಪರ್ಕ ಇಟ್ಟುಕೊಳ್ಳಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವದ ಸಂಭ್ರಮ..

ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಮಂಡಲೋತ್ಸವ ಕಾರ್ಯಕ್ರಮ ಸ್ವಾಗತ ಸಮಿತಿ ಗೌರವಾಧ್ಯಕ್ಷನಾಗಿರುವುದು ನನ್ನ ಸೌಭಾಗ್ಯ. ಮೊದಲಿನಿಂದಲೂ ಸಾಮಾಜಿಕ ಕಳಕಳಿಗೆ ಅರಮನೆ ಹೆಚ್ಚು ಒತ್ತು ನೀಡಿದೆ. ಹಾಗಾಗಿ, ಇದಕ್ಕೆ ಒಪ್ಪಿಕೊಂಡಿದ್ದೇನೆ ಎಂದರು.

ಇಂಥ ಒಂದು ಸಂಸ್ಥೆ ನಮ್ಮ ಭಾರತದ ಆದರ್ಶಗಳ ಬಗ್ಗೆ ಶಿಕ್ಷಣ ನೀಡುತ್ತಿರುವುದು ತುಂಬಾ ಸಂತೋಷದ ಸಂಗತಿ. ಇಡೀ ವರ್ಷ ನಡೆಯುವ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುತ್ತೇನೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.