ETV Bharat / city

ದೆಹಲಿ ತಬ್ಲೀಘಿ ಜಮಾತ್​ನಲ್ಲಿ ಪಾಲ್ಗೊಂಡಿದ್ದ 34 ವಿದೇಶಿಯರು ಕರ್ನಾಟಕದಲ್ಲಿ ಪತ್ತೆ! - ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ

ದೇಶದೆಲ್ಲೆಡೆ ಕೊರೊನಾ ವೈರಸ್​ ಹರಡುವ ಭೀತಿ ಮೂಡಿಸಿರುವ ದೆಹಲಿಯ ತಬ್ಲೀಘಿ ಜಮಾತ್ ಸಭೆ ಈಗ ಕರ್ನಾಟಕಕ್ಕೂ ಆತಂಕ ತಂದಿದೆ. ಜಮಾತ್​ನಲ್ಲಿ ಪಾಲ್ಗೊಂಡಿದ್ದ 34 ವಿದೇಶಿಯರು ರಾಜ್ಯದಲ್ಲಿ ಪತ್ತೆಯಾಗಿದ್ದು, ಅವರನ್ನು ಕ್ವಾರಂಟೈನ್​​ನಲ್ಲಿರಿಸಲಾಗಿದೆ.

ತಬ್ಲೀಘಿ ಜಮಾತ್, 34 ವಿದೇಶಿಯರು
ಬಸವರಾಜ ಬೊಮ್ಮಾಯಿ
author img

By

Published : Mar 31, 2020, 2:44 PM IST

ಬೆಂಗಳೂರು: ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದಿದ್ದ ತಬ್ಲೀಘಿ ಜಮಾತ್​ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ 34 ವಿದೇಶಿಯರು ಕರ್ನಾಟಕದಲ್ಲಿ ಪತ್ತೆಯಾಗಿದ್ದು, ಭಾರಿ ಆತಂಕ ಮೂಡಿಸಿದೆ. ತಬ್ಲೀಘಿ ಜಮಾತ್​ನಲ್ಲಿ ಪಾಲ್ಗೊಂಡಿದ್ದ 34 ವಿದೇಶಿಯರು ರಾಜ್ಯದಲ್ಲಿ ಪತ್ತೆಯಾಗಿರುವ ವಿಷಯವನ್ನು ಸ್ವತಃ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರೇ ಖಚಿತಪಡಿಸಿದ್ದಾರೆ.

ತಬ್ಲೀಘಿ ಜಮಾತ್​ ಸಭೆ ಕೊರೊನಾ ಹರಡುವ ಪ್ರಮುಖ ಕೇಂದ್ರವಾಗಿ ಗುರುತಿಸಲ್ಪಟ್ಟ ಹಿನ್ನೆಲೆಯಲ್ಲಿ ಎಲ್ಲ ರಾಜ್ಯ ಸರ್ಕಾರಗಳು ಅದರಲ್ಲಿ ಭಾಗಿಯಾಗಿ ಮರಳಿ ಬಂದವರ ಹುಡುಕಾಟದಲ್ಲಿ ತೊಡಗಿವೆ. ಈ ಸಭೆಯ ನಂತರ ರಾಜ್ಯಕ್ಕೆ ಬಂದಿರುವ ವಿದೇಶಿಗರನ್ನು ಪೊಲೀಸರು ಪತ್ತೆ ಮಾಡಿ ವಿಚಾರಿಸಿದಾಗ 34 ಜನ ಜಮಾತ್​ನಲ್ಲಿ ಪಾಲ್ಗೊಂಡಿರುವುದು ಬೆಳಕಿಗೆ ಬಂದಿದೆ. ಸದ್ಯ ಇವರೆಲ್ಲರನ್ನು ಈಗ ಕ್ವಾರಂಟೈನ್​ನಲ್ಲಿರಿಸಲಾಗಿದ್ದು, ಇನ್ನೂ ಕೆಲವರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಸಚಿವ ಬೊಮ್ಮಾಯಿ ತಿಳಿಸಿದ್ದಾರೆ.

34 ವಿದೇಶಿಯರಲ್ಲಿ ಮಲೇಶಿದ 10, ಕಿರ್ಗಿಸ್ತಾನದ 10, ಇಂಡೋನೇಷ್ಯಾದ 11, ಫ್ರಾನ್ಸ್​ನ 1, ಕೀನ್ಯಾದ 1, ಬ್ರಿಟನ್​ನ ಓರ್ವ ಪ್ರಜೆ ಸೇರಿದ್ದಾರೆ. ಇವರು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ಭೇಟಿ ನೀಡಿದ್ದರು. ಸುಮಾರು 50 ವಿದೇಶಿಯರು ಕರ್ನಾಟಕಕ್ಕೆ ಬಂದಿರುವ ಮಾಹಿತಿ ಇದ್ದು, ಇನ್ನುಳಿದವರ ಶೋಧ ಕಾರ್ಯ ಮುಂದುವರೆದಿದೆ. ಹಾಗೆಯೇ ರಾಜ್ಯದಿಂದಲೂ ಕೆಲವರು ಜಮಾತ್​ನಲ್ಲಿ ಭಾಗಿಯಾಗಿದ್ದು, ಅವರನ್ನೂ ಪತ್ತೆ ಮಾಡಲಾಗುತ್ತಿದೆ ಎಂದು ಸಚಿವ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.