ETV Bharat / city

ವಿಜಯನಗರ : ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕೆ ಸ್ನೇಹಿತನ ಕೊಲೆ - ವಿಜಯನಗರದಲ್ಲಿ ಕೊಲೆ

ವಿಜಯನಗರದಲ್ಲಿ ವ್ಯಕ್ತಿ ಕೊಲೆ ಪ್ರಕರಣ- ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕೆ ಹತ್ಯೆ- ಸ್ನೇಹಿತನನ್ನೇ ಕೊಂದು ರೈಲ್ವೆ ಹಳಿ ಬಳಿ ಎಸೆದ ಆರೋಪಿ ಅಂದರ್

Vijayanagara friend murder for a petty reason
ಕೊಲೆ
author img

By

Published : Jul 5, 2022, 3:48 PM IST

ಬಳ್ಳಾರಿ: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಹತ್ಯೆ ಮಾಡಿ ರೈಲ್ವೆ ಹಳಿಯ ಬಳಿ ಎಸೆದು ಹೋಗಿರುವ ಘಟನೆ ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿಯಲ್ಲಿ ನಡೆದಿದೆ. ಯಮನೂರ(43) ಕೊಲೆಯಾದ ವ್ಯಕ್ತಿ. ಘಟನೆಗೆ ಸಂಬಂಧಿಸಿ ಆರೋಪಿಯಾದ ಚಿರಂಜೀವಿಯನ್ನು ಮರಿಯಮ್ಮನಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಜುಲೈ 1 ರಂದು ಸ್ನೇಹಿತರು ಇಬ್ಬರು ಸೇರಿ ಪಾರ್ಟಿ ಮಾಡಿದ್ದಾರೆ. ಈ ವೇಳೆ ಕುಟುಂಬದ ವಿಚಾರದಲ್ಲಿ ಯಮನೂರ ಹಗುರವಾಗಿ ಮಾತನಾಡಿದ್ದಾನೆ. ಈ ಹಿಂದೆಯೂ ಯಮನೂರ ಚಿರಂಜೀವಿಯ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡಿದ್ದ. ಈ ಎಲ್ಲಾ ವಿಚಾರಗಳಿಂದ ಬೆಸರಗೊಂಡಿದ್ದ ಆರೋಪಿ ಕುಡಿತದ ಅಮಲಿನಲ್ಲಿ ಮಚ್ಚಿನಿಂದ ಯಮನೂರ ಮೇಲೆ ಹಲ್ಲೆ ಮಾಡಿ ಕೊಲೆಗೈದಿದ್ದಾನೆ ಎಂದು ತಿಳಿದುಬಂದಿದೆ.

ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕೆ ಸ್ನೇಹಿತನ ಕೊಲೆ

ಕೊಲೆ ಮಾಡಿದ ನಂತರ ಪಾರ್ಟಿ ಮಾಡಿದ ವಸ್ತುಗಳು ಮತ್ತು ಮಚ್ಚನ್ನು ರೈಲ್ವೆ ಹಳಿಯ ಪಕ್ಕಕ್ಕೆ ಎಸೆದು ಹೋಗಿದ್ದಾನೆ. ಮೃತದೇಹ ಸಿಕ್ಕ ಸ್ಥಳದಲ್ಲಿ ಸಿಕ್ಕ ಸಾಕ್ಷ್ಯಾಧಾರಗಳಿಂದ ಮರಿಯಮ್ಮನಹಳ್ಳಿ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ರೈಲ್ವೆ ಹಳಿಯ ಪಕ್ಕ ಶವ ಸಿಕ್ಕಿದ್ದರಿಂದ ಆರೋಪಿಯನ್ನು ರೈಲ್ವೆ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿಯ ಖಾಸಗಿ ಹೋಟೆಲ್​ನಲ್ಲಿ ವಾಸ್ತುತಜ್ಞ ಚಂದ್ರಶೇಖರ್ ಗುರೂಜಿ ಬರ್ಬರ ಕೊಲೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.