ETV Bharat / city

ಬಡ ಕೂಲಿಕಾರ್ಮಿಕರಿಗಾಗಿ ಮಹಾತ್ಮ ಗಾಂಧೀಜಿ ಲೇಔಟ್... ವರ್ಷದಲ್ಲಿ ಮನೆ ಹಸ್ತಾಂತರ

author img

By

Published : Sep 10, 2020, 8:22 PM IST

ಬಡ ಕೂಲಿಕಾರ್ಮಿಕರು ಹಾಗೂ ನಿವೇಶನ ರಹಿತರಿಗೆ ಸುಸಜ್ಜಿತ ಮಹಾತ್ಮ ಗಾಂಧೀಜಿ ಲೇಔಟ್ ತಲೆಎತ್ತಲಿದ್ದು, ಇನ್ನೊಂದು ವರ್ಷದಲ್ಲಿ ಈ ಮನೆಗಳನ್ನು ಹಸ್ತಾಂತರಿಸಲಾಗುವುದು ಎಂದು ಪಾಲಿಕೆ ಆಯುಕ್ತೆ ಎಂ.ವಿ.ತುಷಾರಮಣಿ ತಿಳಿಸಿದ್ದಾರೆ.

Mahatma Gandhiji layout for poor workers in Bellaryi
ಮುಂಡರಗಿಯಲ್ಲಿ ಬಡ ಕೂಲಿಕಾರ್ಮಿಕರಿಗಾಗಿ ತಲೆಎತ್ತಲಿದೆ ಮಹಾತ್ಮ ಗಾಂಧೀಜಿ ಲೇಔಟ್

ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಮುಂಡರಗಿಯಲ್ಲಿ ಸುಸಜ್ಜಿತ ಮಹಾತ್ಮ ಗಾಂಧೀಜಿ ಲೇಔಟ್ ತಲೆ ಎತ್ತಲಿದ್ದು, ಇನ್ನೊಂದು ವರ್ಷದಲ್ಲಿ ಬಡ ಕೂಲಿಕಾರ್ಮಿಕರು ಹಾಗೂ ನಿವೇಶನ ರಹಿತರಿಗೆ ಈ ಮನೆಗಳನ್ನು ಹಸ್ತಾಂತರಿಸಲು ಪಾಲಿಕೆ ನಿರ್ಧರಿಸಿದೆ.

ನಗರದಲ್ಲಿನ ಕೂಲಿಕಾರ್ಮಿಕರು, ಬಡವರು ಹಾಗೂ ನಿವೇಶನ ರಹಿತರು ಪ್ರತಿ ತಿಂಗಳು ಬಾಡಿಗೆ ಕಟ್ಟಲಾಗದೇ ಪರದಾಡುತ್ತಿರುವುದನ್ನು ಮನಗಂಡ ಮಹಾನಗರ ಪಾಲಿಕೆ, ಮಹಾತ್ಮ ಗಾಂಧೀಜಿಯವರ ಹೆಸರಿನಲ್ಲಿ ಜಿ + 2 ವಿನ್ಯಾಸದಡಿ ಮನೆಗಳನ್ನು ನಿರ್ಮಿಸಲು ಮುಂದಾಗಿದೆ. ಅಂದಾಜು 5,200 ಮನೆಗಳು ಈ ಪ್ರದೇಶದಲ್ಲಿ ನಿರ್ಮಾಣವಾಗುತ್ತಿದ್ದು, ಸಕಾಲದಲ್ಲಿ ವಂತಿಗೆ ಪಾವತಿಸುವ ಅರ್ಹ ಫಲಾನುಭವಿಗಳಿಗೆ ಈ ಮನೆಗಳ ಹಂಚಿಕೆ ಮಾಡಲಾಗುತ್ತದೆ. ಜಿ + 2 ಮಾದರಿಯ 180 ಮನೆಗಳು ಈಗಾಗಲೇ ರೆಡಿಯಾಗಿವೆ.

ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತೆ ಎಂ.ವಿ.ತುಷಾರಮಣಿ, ಜಿ+ 2 ಮಾದರಿಯ ಮನೆಗಳ ನಿರ್ಮಾಣ ಕಾರ್ಯ ಇನ್ನೊಂದು ವರ್ಷದಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ‌ಯಾರ್ಯಾರು ವಂತಿಗೆ ಪಾವತಿಸಿಲ್ಲ ಅವರಿಗೆ ವಂತಿಗೆ ಪಾವತಿಸಲು ಸಮಯಾವಕಾಶ ಕಲ್ಪಿಸಲಾಗಿದೆ. ಸಕಾಲದಲ್ಲಿ ವಂತಿಗೆ ಪಾವತಿಸಿದರೆ ಮನೆಗಳ ಹಂಚಿಕೆ ಬಹುಬೇಗನೇ ಮಾಡಲಾಗುವುದು. ಈ ಕೋವಿಡ್ ಸಂದರ್ಭದಲ್ಲಿ ಮನೆಗಳ ನಿರ್ಮಾಣ ಕಾರ್ಯ ಆಮೆ ಗತಿಯಲ್ಲಿ ಸಾಗಿತ್ತು.‌ ಕಾರ್ಮಿಕರ ಸಮಸ್ಯೆ, ಹಣಕಾಸಿನ ಸಮಸ್ಯೆಯೂ ಇತ್ತು. ಅದನ್ನ ಸಮರ್ಥವಾಗಿ ನಿಭಾಯಿಸುವ ಕಾರ್ಯವನ್ನು ಮಹಾನಗರ ಪಾಲಿಕೆ ಮಾಡಿದೆ ಎಂದರು.

ನಾಗಾರ್ಜುನ ಕನ್ಸ್​ಸ್ಟ್ರಕ್ಷನ್ ಎಂಜಿನಿಯರ್ ಹರ್ಷವರ್ಧನ ಮಾತನಾಡಿ, ಅತ್ಯಂತ ಸುಸಜ್ಜಿತ ಲೇಔಟ್ ಇದಾಗಲಿದೆ.‌ ಎರಡು ವರ್ಷದ ಅವಧಿಯಲ್ಲಿ ಈ ಪ್ರಾಜೆಕ್ಟ್ ನಿರ್ಮಾಣ ಕಾರ್ಯವು ಪೂರ್ಣಗೊಳ್ಳಬೇಕಿತ್ತು. ಈಗಾಗಲೇ ಅಂದಾಜು 180 ಮನೆಗಳು ಪೂರ್ಣಗೊಂಡಿವೆ.‌ ಇನ್ನೊಂದು ವರ್ಷದಲ್ಲಿ ಈ ಲೇಔಟ್ ಚಿತ್ರಣವೇ ಬದಲಾಗಲಿದೆ. ಇಲ್ಲಿ ಮಿನಿ ಟೌನ್​ಶಿಫ್ ತಲೆಎತ್ತಲಿದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.