ETV Bharat / city

ರಾಜ್ಯದಲ್ಲಿ ಆಪರೇಷನ್​​ ಕಮಲ ನಡೆಯುತ್ತಿಲ್ಲ: ಶಾಸಕ ಉಮೇಶ್​​ ಕತ್ತಿ - undefined

ನಮ್ಮ ನಾಯಕರ ಮಾರ್ಗದರ್ಶನದಲ್ಲಿ‌ ನಾವು ನಡೆಯುತ್ತಿದ್ದೇವೆ. ರಾಜ್ಯದಲ್ಲಿ ಯಾವುದೇ ಆಪರೇಷನ್ ಕಮಲ ನಡೆಯುತ್ತಿಲ್ಲ. ಆದರೆ ಸರ್ಕಾರ ಬಿದ್ದು ಹೋದರೆ ರಾಜ್ಯದಲ್ಲಿ ನಾವು ಹೊಸ ಸರ್ಕಾರ ಮಾಡೇ ಮಾಡುತ್ತೇವೆ ಎಂದು ಶಾಸಕ ಉಮೇಶ್​​ ಕತ್ತಿ ಹೇಳಿದರು.

ಹುಕ್ಕೇರಿ ಬಿಜೆಪಿ ಶಾಸಕ ಉಮೇಶ ಕತ್ತಿ
author img

By

Published : Jul 1, 2019, 4:53 PM IST

ಚಿಕ್ಕೋಡಿ: ಕರ್ನಾಟಕದಲ್ಲಿ ಯಾವುದೇ ಆಪರೇಷನ್ ಕಮಲ ನಡೆಯುತ್ತಿಲ್ಲ ಎಂದು ಬಿಜೆಪಿಯ ರಾಷ್ಟ್ರೀಯ ನಾಯಕರೇ ಹೇಳಿದ್ದಾರೆ ಎಂದು ಹುಕ್ಕೇರಿ ಬಿಜೆಪಿ ಶಾಸಕ ಉಮೇಶ್​ ಕತ್ತಿ ಹೇಳಿದರು.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ಸೇತುವೆ ಉದ್ಘಾಟಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಆಪರೇಷನ್ ಕಮಲ ನಡೆಯುತ್ತಿಲ್ಲ. ಅದು ತಾನಾಗಿ‌ ನಡೆದರೆ ಆಪರೇಷನ್​ ಕಮಲ ಆಗುವುದಿಲ್ಲ. ನಮ್ಮ ನಾಯಕರ ಮಾರ್ಗದರ್ಶನದಲ್ಲಿ‌ ನಾವು ನಡೆಯುತ್ತಿದ್ದೇವೆ. ಸರ್ಕಾರ ಬಿದ್ದು ಹೋದರೆ ರಾಜ್ಯದಲ್ಲಿ ನಾವು ಹೊಸ ಸರ್ಕಾರ ಮಾಡೇ ಮಾಡುತ್ತೇವೆ ಎಂದರು.

ಹುಕ್ಕೇರಿ ಬಿಜೆಪಿ ಶಾಸಕ ಉಮೇಶ್​ ಕತ್ತಿ

ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ರಾಜ್ಯದ ಸಿಎಂ ರಾಜೀನಾಮೆ ಕೊಟ್ಟು ಹೋಗಬೇಕಿತ್ತು. ಆದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ನಾಚಿಕೆ, ಬುದ್ಧಿ ಇಲ್ಲ. ಸಿಎಂ ಸರ್ಕಾರ ನಡೆಸಿದರೆ ನಾವೇನು ಮಾಡಬೇಕು? ಮುಂದೆ‌ ಬರುವ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಿತ ಎಂದರು. ಇದೇ ವೇಳೆ ಯಡಿಯೂರಪ್ಪನವರು ಯಾವಾಗ ಸಿಎಂ ಆಗೋರು ಎಂಬ ಪ್ರಶ್ನೆಗೆ, ಇನ್ನೊಂದು 25 ವರ್ಷದಲ್ಲಿ ಎಂದು ಹೇಳಿದರು.

Intro:ರಾಷ್ಟ್ರೀಯ ನಾಯಕರು ಹೇಳಿದ್ದಾರೆ ಆಪರೇಷನ್ ಕಮಲ ನಡೆಯುತ್ತಿಲ್ಲ : ಉಮೇಶ ಕತ್ತಿ Body:

ಚಿಕ್ಕೋಡಿ :

ರಾಷ್ಟ್ರೀಯ ನಾಯಕರು ಹೇಳಿದ್ದಾರೆ ಕರ್ನಾಟಕದಲ್ಲಿ ಯಾವುದೇ ಆಪರೇಷನ್ ಕಮಲ ನಡೆಯುತ್ತಿಲ್ಲ ಎಂದು ಹುಕ್ಕೇರಿ ಬಿಜೆಪಿ ಶಾಸಕ ಉಮೇಶ ಕತ್ತಿ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸುಲ್ತಾನಪೂರ ಗ್ರಾಮದಲ್ಲಿ ಸೇತುವೆ ಉದ್ಘಾಟಿಸಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು ರಾಜ್ಯದಲ್ಲಿ ಯಾವುದೇ ಆಪರೇಷನ್ ಕಮಲ ನಡೆಯುತ್ತಿಲ್ಲ ಅದು ತಾನಗಿ‌ ನಡೆದರೆ ಅಪರೇಶನ ಕಮಲ ಆಗುವುದಿಲ್ಲ. ನಮ್ಮ ನಾಯಕರ ಮಾರ್ಗದರ್ಶನದಲ್ಲಿ‌ ನಾವು ನಡೆಯುತ್ತಿದ್ದೇವೆ.

ಸರಕಾರ ಬಿದ್ದು ಹೋದರೆ ರಾಜ್ಯದಲ್ಲಿ ಹೊಸ ಸರಕಾರ ನಾವು ಮಾಡೇ ಮಾಡುತ್ತೇವೆ. ಲೋಕಸಭಾ ಚುನಾವಣಾ ಫಲಿತಾಂಶ ಬಳಿಕ ರಾಜ್ಯದ ಸಿಎಂ ರಾಜೀನಾಮೆ ಕೊಟ್ಟು ಹೋಗಬೇಕಿತ್ತು . ಆದರೆ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರಕಾರಕ್ಕೆ ನಾಚಿಕೆ, ಬುದ್ದಿ ಇಲ್ಲ. ಸಿಎಂ ಸರಕಾರ ನಡೆಸಿದರೆ ನಾವೇನು ಮಾಡಬೇಕು. ಮುಂದೆ‌ ಬರತಕ್ಕಂಥ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಿತ.

ಯಡಿಯೂರಪ್ಪನವರು ಯಾವಾಗ ಸಿಎಂ ಆಗೋರು ಎಂಬ ಪ್ರಶ್ನೆಗೆ ಕತ್ತಿ ವ್ಯಂಗ್ಯವಾಗಿ 25 ವರ್ಷದ ಬಳಿಕ ಸಿಎಂ ಆಗಲಿದ್ದಾರೆ ಎಂದು ವ್ಯಂಗ್ಯ ಉತ್ತರ ನೀಡಿದ್ದಾರೆ.
Conclusion:
ಸಂಜಯ ಕೌಲಗಿ
ಚಿಕ್ಕೋಡಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.