ಚಿಕ್ಕೋಡಿ: ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶಗಳಾದ ಕೊಯ್ನಾ, ನವಜಾ, ಮಹಾಬಳೇಶ್ವರ, ವಾರಣಾದಲ್ಲಿ ಕಳೆದ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದಾಗಿ ಮಹಾರಾಷ್ಟ್ರದ ಗಡಿ ಪ್ರದೇಶದಲ್ಲಿ ಆತಂಕದ ಕಾರ್ಮೋಡವಿದೆ.
ಮಹಾರಾಷ್ಟ್ರದ ಮಳೆ ವಿವರ:
ಕೊಯ್ನಾ 242 ಮಿ.ಮೀ, ನವಜಾ 196 ಮಿ.ಮೀ, ಮಹಾಬಳೇಶ್ವರ 252 ಮಿ.ಮೀ, ವಾರಣಾ 230 ಮಿ.ಮೀ ನಷ್ಟು ಮಳೆಯಾಗಿದೆ. ಈಗಾಗಲೇ 2 ಲಕ್ಷ 40 ಸಾವಿರ ಕ್ಯೂಸೆಕ್ ನೀರು ಕೃಷ್ಣಾ ನದಿಯಿಂದ ರಾಜ್ಯಕ್ಕೆ ಹರಿದು ಬರುತ್ತಿದ್ದು, ಕೊಯ್ನಾ ಜಲಾಶಯ ಈಗಾಗಲೇ ಶೇ 90 ರಷ್ಟು ಭರ್ತಿಯಾಗಿದೆ.
ಇಂದು ಸಂಜೆಯಿಂದ ಕೃಷ್ಣೆಗೆ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲು ಮಹಾರಾಷ್ಟ್ರ ಸರ್ಕಾರ ತಯಾರಿ ನಡೆಸಿದ್ದು, ಕರ್ನಾಟಕ ಗಡಿ ಗ್ರಾಮಗಳಲ್ಲಿ ಹಾಗೂ ನದಿ ತೀರದ ಗ್ರಾಮಗಳಲ್ಲಿ ಬೆಳಗಾವಿ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ. ಯಾವುದೇ ಅವಘಡ ಸಂಭವಿಸದಂತೆ ಎಲ್ಲ ಕಡೆಗೂ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.