ಬೆಳಗಾವಿ: ಕೊರೊನಾ ಕಂಟಕದ ನಡುವೆ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಜ್ಯೋತಿಬಾ ಫುಲೆ ಅವರ 1930ನೇ ಜಯಂತ್ಯುತ್ಸವವನ್ನ ಸರಳವಾಗಿ ಆಚರಣೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಯುವ ಕಮಿಟಿ ಅಧ್ಯಕ್ಷ ರವಿ ಬಡಕಂಬಿ, ಅಥಣಿ ತಾಲೂಕಿನಲ್ಲಿ ಫುಲೆಯವರ ಮಾಳಿ ಸಮುದಾಯ ಕಾರಣಾಂತರಗಳಿಂದಾಗಿ ಹಿಂದುಳಿಯುತ್ತಿದೆ. ಫುಲೆ ಸಮುದಾಯದ ಪ್ರತಿಯೊಬ್ಬರೂ ಫುಲೆಯವರ ತತ್ವಾದರ್ಶಗಳನ್ನ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.
ಬಳಿಕ ಮಾತನಾಡಿದ ಅಥಣಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಪ್ರಶಾಂತ ತೋಡಕರ, ಫುಲೆ ಅವರು ಪುಣೆಯ ಮೊದಲ ಸ್ಥಳೀಯ ಬಾಲಕಿಯರ ಶಾಲೆ ಪ್ರಾರಂಭಿಸಿ ಮಹಿಳಾ ಶಿಕ್ಷಣ ಪ್ರಾರಂಭಿಸಿದರು. ಆ ಮೂಲಕ ಕೆಳ ವರ್ಗದ ಮಹಿಳೆಯರಿಗೂ ಶಿಕ್ಷಣ ದೊರೆಯುವಂತೆ ಮಾಡಿದ್ರು. ಇಂತಹ ಮಹನೀಯರ ಆದರ್ಶ ಮುಂದೆ ಇಟ್ಟುಕೊಂಡು ಮುನ್ನುಗ್ಗಿದರೆ ಅಭಿವೃದ್ಧಿ ಸಾಧ್ಯ ಎಂದರು.