ETV Bharat / city

ಪರಿಹಾರ ವಿಳಂಬ.. ಅಥಣಿ ತಾಲೂಕು ಕಚೇರಿ ಎದುರು ಬೊಬ್ಬೆ ಹಾಕಿದ ನೆರೆ ಸಂತ್ರಸ್ತರು..

author img

By

Published : Oct 19, 2019, 7:14 PM IST

ಪ್ರವಾಹದ ಸೆಳೆತಕ್ಕೆ ಸಿಲುಕಿ ನೀರು ಪಾಲಾದ ತೀರ್ಥ ಗ್ರಾಮದ ಬಾಲಕ ಬಸವರಾಜ ಮಾನಿಕ ಕಾಂಬಳೆ ಕುಟುಂಬಕ್ಕೆ ಇನ್ನೂ ಪರಿಹಾರ ಧನ ಸಿಕ್ಕಿಲ್ಲ. ಪರಿಹಾರ ವಿತರಣೆಯಲ್ಲಿ ಅಥಣಿ ತಾಲೂಕು ಆಡಳಿತ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ತಹಶೀಲ್ದಾರ್ ಕಚೇರಿ ಮುಂದೆ ನೆರೆ ಸಂತ್ರಸ್ತರು ಬೊಬ್ಬೆ ಹಾಕಿ ಪ್ರತಿಭಟನೆ ನಡೆಸಿದರು.

ನೆರೆ ಸಂತ್ರಸ್ಥರ ಪ್ರತಿಭಟನೆ

ಅಥಣಿ: ಪ್ರವಾಹಕ್ಕೆ ಸಿಲುಕಿ ಜೀವಹಾನಿ ಆದಂತ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಹಣ ನೀಡಬೇಕೆಂಬ ರಾಜ್ಯ ಸರ್ಕಾರದ ಆದೇಶವಿದ್ದರೂ ಅಥಣಿ ತಾಲೂಕು ಆಡಳಿತ ಮಾತ್ರ ಪರಿಹಾರ ಧನ ನೀಡದೆ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ತಹಶೀಲ್ದಾರ್ ಕಚೇರಿ ಮುಂದೆ ನೆರೆಸಂತ್ರಸ್ತರು ಬೊಬ್ಬೆ ಹಾಕಿ ಪ್ರತಿಭಟನೆ ನಡೆಸಿದರು.

ಅಥಣಿ ತಾಲೂಕು ಕಚೇರಿ ಎದುರು ಬೊಬ್ಬೆ ಹಾಕಿ ನೆರೆ ಸಂತ್ರಸ್ತರ ಪ್ರತಿಭಟನೆ

ಕೃಷ್ಣಾ ನದಿ ಪ್ರವಾಹ ಬಂದು 80 ದಿನಗಳೇ ಕಳೆದರೂ ಪರಿಹಾರ ವಿತರಣೆಯಲ್ಲಿ ತಾರತಮ್ಯವನ್ನು ಖಂಡಿಸಿ 'ಬದುಕಿಸಿ ಇಲ್ಲವೇ ಮುಳುಗಿಸಿ ಸಂಕಲ್ಪದೆಡೆಗೆ ಸಂತ್ರಸ್ತರ ನಡಿಗೆ' ಎಂಬ ವೇದವಾಕ್ಯದೊಂದಿಗೆ ದರೂರ ಗ್ರಾಮದ ಸೇತುವೆಯಿಂದ ತಹಶೀಲ್ದಾರ್ ಕಚೇರಿವರೆಗೆ ನೆರೆ ಸಂತ್ರಸ್ತರು ಬೃಹತ್ ಪಾದಯಾತ್ರೆ ಕೈಗೊಂಡಿದ್ದರು.

Flood victims protest in Athani
ಬಸವರಾಜ ಮಾನಿಕ ಕಾಂಬಳೆ(ಪ್ರವಾಹದ ಸೆಳೆತಕ್ಕೆ ಸಿಲುಕಿ ನೀರು ಪಾಲಾದ ಬಾಲಕ)

ಪ್ರವಾಹದ ಸೆಳೆತಕ್ಕೆ ಸಿಲುಕಿ ನೀರು ಪಾಲಾದ ತೀರ್ಥ ಗ್ರಾಮದ ಬಾಲಕ ಬಸವರಾಜ ಮಾನಿಕ ಕಾಂಬಳೆ ಕುಟುಂಬಕ್ಕೆ ಇನ್ನೂ ಪರಿಹಾರ ಧನ ಸಿಕ್ಕಿಲ್ಲ. ಈ ಬಡ ಕುಟುಂಬಕ್ಕೆ ತಾಂತ್ರಿಕ ನೆಪಗಳನ್ನೊಡ್ಡಿ ಪರಿಹಾರ ವಿತರಿಸದೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದು, ಈ ಕೂಡಲೇ 5 ಲಕ್ಷ ರೂ. ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿದರು.

ಮೈಕ್ರೋ ಫೈನಾನ್ಸ್​​ ಕಂಪನಿಗಳಿಂದ ಬಡವರು ಪಡೆದಿರುವ ಸಾಲ ವಸೂಲಾತಿಗಾಗಿ ಕಂಪನಿಗಳ ಪ್ರತಿನಿಧಿಗಳು ದಿನನಿತ್ಯ ಕಿರುಕುಳ ನೀಡುತ್ತಿದ್ದು, ಮೈಕ್ರೋ ಫೈನಾನ್ಸ್ ಕಂಪನಿಗಳ ಎಲ್ಲ ಸಾಲಗಳು ಮನ್ನಾ ಆಗಬೇಕು ಹಾಗೂ ಕಾನೂನು ಬಾಹಿರ ಸಾಲ ವಸೂಲಾತಿಗೆ ಬರುವ ಕಂಪನಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದರು.

Intro:ರಾಜ್ಯ ಸರ್ಕಾರದ ಆದೇಶದಂತೆ ಪ್ರವಾಹಕ್ಕೆ ಸಿಲುಕಿ ಜೀವಹಾನಿ ಆದಂತ ಕುಟುಂಬಕ್ಕೆ 5 ಲಕ್ಷ ಪರಿಹಾರ ಹಣ ನೀಡಬೇಕೆಂಬ ಆದೇಶವಿದ್ದರೂ

ಪ್ರವಾಹದ ಸೆಳೆತಕ್ಕೆ ಸಿಲುಕಿ ನೀರು ಪಾಲಾದ ತೀರ್ಥ ಗ್ರಾಮದ ಪರಿಶಿಷ್ಟ ಜಾತಿಯ ಬಾಲಕ
ಬಸವರಾಜ ಮಾನಿಕ ಕಾಂಬಳೆ ಇದುವರೆಗೆ ತಾಲೂಕು ಆಡಳಿತ ಪರಿಹಾರ ಧನ ನೀಡದೆ ವಿಳಂಬ ನೀತಿಯಿಂದ ನೆರೆಸಂತ್ರಸ್ತರ ತಾಲೂಕು ಆಡಳಿತ ಎದಕ್ಕೆ ಬೊಬ್ಬೆ ಹಾಕಿದರುBody:ಅಥಣಿ:

*ಅಥಣಿ ತಾಲೂಕು ಆಡಳಿತ ಎದುರು ಬೊಬ್ಬೆ ಹಾಕಿದ ನೆರೆ ಸಂತ್ರಸ್ಥರು*

ಕೃಷ್ಣಾ ನದಿ ಪ್ರವಾಹ ಬಂದು ೮೦ದಿನಗಳು ಕಳೆದರು ಜಿಲ್ಲಾ ಆಡಳಿತ ನೆರೆ ಸಂತ್ರಸ್ತರ ಪರಿಹಾರ ವಿತರಣೆಯಲ್ಲಿ ತಾರತಮ್ಯವನ್ನು ಖಂಡಿಸಿ ಇಂದು ದರೂರ ಗ್ರಾಮದಿಂದ
ಬದುಕಿಸಿ ಇಲ್ಲವೇ ಮುಳುಗಿಸಿ ಸಂಕಲ್ಪದೆಡೆಗೆ ಸಂತ್ರಸ್ಥರ ನಡಿಗೆ ಎಂಬ ವೇದವಾಕ್ಯ ದೊಂದಿಗೆ ದರೂರ ಸೇತುವೆಯಿಂದ ಅಥಣಿ ತಹಸಿಲ್ದಾರ್ ಕಛೇರಿವರಗೆ ಬೃಹತ್ ಪಾದಯಾತ್ರೆ ಕೈಗೊಂಡ ನೆರೆ ಸಂತ್ರಸ್ತರು.

ಪ್ರವಾಹದ ಸೆಳೆತಕ್ಕೆ ಸಿಲುಕಿ ನೀರು ಪಾಲಾದ ತೀರ್ಥ ಗ್ರಾಮದ ಪರಿಶಿಷ್ಟ ಜಾತಿಯ ಬಾಲಕ
ಬಸವರಾಜ ಮಾನಿಕ ಕಾಂಬಳೆ ಈ ಬಡ ಕುಟುಂಬಕ್ಕೆ ತಾಂತ್ರಿಕ ನೆಪಗಳನ್ನೊಡ್ಡಿ
ಇನ್ನುವರೆಗು ಪರಿಹಾರ ವಿತರಿಸದೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದು, ಈ ಕೂಡಲೆ ಸದರಿ ಕುಟುಂಬಕ್ಕೆ 5 ಲಕ್ಷ ರೂಪಾಯಿಗಳ ಪರಿಹಾರದ ವಿತರಿಸಬೇಕು ಹಾಗೂ ವಿಳಂಬ ನೀತಿ ಅನುಸರಿಸುತ್ತಿರುವ ಅಧಿಕಾರಿಗಳ ಮೇಲೆ ಯೋಗ್ಯ ಕ್ರಮ ಕೈಗೊಳ್ಳಬೇಕು,

ಹಾಗೂ ಮೈಕ್ರೋ ಫೈನಾನ್ಯ ಕಂಪನಿಗಳಿಂದ ಬಡವರು ಪಡೆದಿರುವ ಸಾಲ ವಸೂಲಾತಿ ಕಂಪನಿಗಳ ಪ್ರತಿನಿಧಿಗಳು ದಿನನಿತ್ಯ ಕಿರುಕುಳ ನೀಡುತ್ತಿದ್ದ, ಮೈಕ್ರೋ ಫೈನಾನ್ಸ್ ಕಂಪನಿಗಳ ಎಲ್ಲಾ ಸಾಲಗಳು ಮನ್ನಾ ಆಗಬೇಕು ಹಾಗೂ ಕಾನೂನು ಬಾಹಿರವಾಗಿ ಸಾಲ ವಸೂಲಾತಿ ಬರುವ ಮೈಕ್ರೋ ಫೈನಾನ್ಸ್ ಕಂಪನಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು

ಎಂದು ಪ್ರತಿಭಟನೆ ಮಾಡುತ್ತಿರುವ ನೆರೆ ಸಂತ್ರಸ್ತರು ತಾಲೂಕು ಆಡಳಿತ ಎದುರು ಬೊಬ್ಬೆ ಹಾಕಿದರು ರಾಜ್ಯದ ಸರ್ಕಾರ ಮತ್ತು ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಬೊಬ್ಬೆ ಹಾಕೋದು ನೋಡಿ ಸ್ಥಳಕ್ಕೆ ಬಂದ ಉಪ ತಹಶೀಲ್ದಾರ್ ರಾಜು ಬುರ್ಲಿ ಸಮಸ್ಯೆ ಆಲಿಸಿದ ಕಾನೂನಿನ ನಿಯಮಾನುಸಾರ ಮೃತ ಬಾಲಕರ ಪೋಷಕರಿಗೆ ಆದಷ್ಟು ಬೇಗ ಪರಿಹಾರ ಧನ ವಿತರಣೆ ಮಾಡುತ್ತೇವೆ ಎಂದು ಹೇಳಿದರು

.

Conclusion:ವರದಿ ಶಿವರಾಜ್ ನೇಸರ್ಗಿ ಅಥಣಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.