ETV Bharat / city

ಮದುವೆ ಆತುರ.. ಮಾಯಾಂಗಿನಿಯ ಬಲೆಗೆ ಬಿದ್ದು ಲಕ್ಷಾಂತರ ರೂ. ಕಳೆದುಕೊಂಡ ಬೆಳಗಾವಿ ಯುವಕ! - ಬೆಳಗಾವಿ ಮ್ಯಾಟ್ರಿಮೋನಿಯಲ್ ಸೈಟ್​ ವಂಚನೆ ಪ್ರಕರಣ

ಮ್ಯಾಟ್ರಿಮೋನಿಯಲ್​ ಸೈಟ್​ನ ಮಾಯಾಂಗಿನಿಯನ್ನು ನಂಬಿದ ಯುವಕನೋರ್ವ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾನೆ. ಕೊನೆಗೆ ತಾನು ಮೋಸ ಹೋಗಿರುವುದು ಗೊತ್ತಾದಾಗ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾನೆ. ಬೆಳಗಾವಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

belagavi-youth-lost-his-money-from-matrimony-site
ಮ್ಯಾಟ್ರಿಮೋನಿಯಲ್ ಸೈಟ್
author img

By

Published : Jun 15, 2021, 7:56 PM IST

Updated : Jun 15, 2021, 8:12 PM IST

ಬೆಳಗಾವಿ : ಮ್ಯಾಟ್ರಿಮೋನಿಯಲ್ ಸೈಟ್​ನಲ್ಲಿ ಪರಿಚಯವಾದ ಸುಂದರಿ ಮದುವೆಯಾಗುವ ಮಾತುಗಳನ್ನಾಡಿ ಯುವಕನಿಂದ 1.17 ಲಕ್ಷ ರೂ. ದೋಚಿರುವ ಘಟನೆ ಕುಂದಾನಗರಿಯಲ್ಲಿ ನಡೆದಿದೆ. ಮೋಸದ ಜಾಲಕ್ಕೆ ಬಿದ್ದ ವಿಷಯ ತಿಳಿದ ಯುವಕ ನ್ಯಾಯಕ್ಕಾಗಿ ಪೊಲೀಸ್​​ ಠಾಣೆಯ ಮೆಟ್ಟಿಲೇರಿದ್ದಾನೆ.

ನಗರದ ಮಾಳಮಾರುತಿ ಠಾಣಾ ವ್ಯಾಪ್ತಿಯಲ್ಲಿ ಸ್ವಂತ ಉದ್ಯೋಗ ಮಾಡಿಕೊಂಡಿದ್ದ ಯುವಕ, ಗೆಳೆಯನ ಸಲಹೆ ಮೇರೆಗೆ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ಫೆಬ್ರವರಿಯಲ್ಲಿ ಪ್ರೋಫೈಲ್ ಕ್ರಿಯೇಟ್ ಮಾಡಿದ್ದ. ಮಾರ್ಚ್ ಮೊದಲನೇ ವಾರ ಯುವಕನಿಗೆ ರಿಕ್ವೆಸ್ಟ್ ಮೆಸೇಜ್ ಒಂದು ಬಂದಿತ್ತು. ನನ್ನ ಹೆಸರು ಮಾಯಾ ಅನ್ವೇಕರ್, ಇಂಗ್ಲೆಂಡ್​ನಲ್ಲಿ ಕೆಲಸ ಮಾಡುತ್ತಿದ್ದು, ಒಳ್ಳೆಯ ಎಜುಕೇಟೆಡ್ ರಿಚ್ ಫ್ಯಾಮಿಲಿಯಲ್ಲಿ ಬೆಳೆದಿದ್ದೇನೆ. ಸದ್ಯ ಮದುವೆಯಾಗಲು ವರ ಹುಡುಕುತ್ತಿದ್ದು, ನಿಮ್ಮ ಪ್ರೊಫೈಲ್ ಇಷ್ಟವಾಯ್ತು. ಅದಕ್ಕೆ ಮೆಸೇಜ್ ಮಾಡಿದ್ದೇನೆ. ನನ್ ಈಮೇಲ್ ಐಡಿಗೆ ನಿಮ್ಮ ವಾಟ್ಸ್‌ಆ್ಯಪ್ ನಂಬರ್ ಕಳ್ಸಿ, ನಾನು ನನ್ನ ಫೋಟೋ ವಿವರ ಕಳುಹಿಸ್ತೇನಿ ಅಂತ ಮೆಸೇಜ್ ಹಾಕಿದ್ದಾಳೆ.

ಇದನ್ನ ನಂಬಿದ ಯುವಕ ಅವಳಿಗೆ ವಾಟ್ಸ್‌ಆ್ಯಪ್ ನಂಬರ್ ಕಳ್ಸಿ ಮೆಸೇಜ್ ಸ್ಟಾರ್ಟ್ ಮಾಡಿದ್ದಾನೆ. ಹೀಗೆ ಒಂದು ತಿಂಗಳ ಕಾಲ ವಾಟ್ಸ್‌ಆ್ಯಪ್ ಚಾಟಿಂಗ್ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾಳೆ. ಬಳಿಕ ಮಾರ್ಚ್ ಮೊದಲನೇ ವಾರದಲ್ಲಿ ತಾನೂ ಇಂಡಿಯಾಗೆ ಬರ್ತಿದ್ದು, ಭೇಟಿಯಾಗೋಣ ಅಂತ ತಿಳಿಸಿದ್ದಾಳೆ. ಬಳಿಕ ಎಲ್ಲಿ ಮೀಟ್ ಆಗೋದು ಅಂತ ವಿಚಾರಿಸಿದಾಗ ಬೆಳಗಾವಿಗೆ ಗೋವಾ ಹತ್ತಿರವಾಗುತ್ತೆ ಅಲ್ಲೇ ಮೀಟ್ ಆಗೋಣ ಅಂದಿದ್ದಾರೆ.

ಆದ್ರೇ, ವಿಮಾನದ ಸೌಕರ್ಯ ಇಲ್ಲದ ಕಾರಣ ಮುಂಬೈಗೆ ಬಂದು ಅಲ್ಲಿಂದ ಗೋವಾಗೆ ಬರ್ತೇನಿ ಅಂತ ತಿಳಿಸಿದ್ದಾಳೆ‌. ಮಾರ್ಚ್ 8ರಂದು ಈತನಿಗೆ ಗೋವಾಗೆ ಬರಲು ತಿಳಿಸಿದ್ದಾಳೆ. ಆಕೆಯ ಮಾತು ನಂಬಿ ಈತ ಗೋವಾಗೆ ಹೋಗಿದ್ದಾನೆ. ಇನ್ನೂ ಐನಾತಿ ಲೇಡಿ ಈತನಿಗೆ ಕರೆ ಮಾಡಿ ತಾನೂ ಮುಂಬೈ ಏರ್ಪೋರ್ಟ್ ತಲುಪಿರುವುದಾಗಿ ತಿಳಿಸಿದ್ದಾಳೆ. ಇದಾದ ಕೆಲ ಹೊತ್ತಿನಲ್ಲಿ ಯುವಕನಿಕೆ ಕಸ್ಟಮರ್ ಕೇರ್ ಮಾದರಿಯ ನಂಬರ್‌ನಿಂದ ಕರೆ ಬಂದಿದೆ. ತಮಗೆ ಭೇಟಿಯಾಗಬೇಕು ಅಂತ ಮಾಯಾ ಅನ್ವೇಕರ್ ಎಂಬುವರು ಬಂದಿದ್ದು, ಅನುಮತಿ ಇಲ್ಲದೇ ಫಾರಿನ್ ಕರೆನ್ಸಿ ಇಟ್ಟುಕೊಂಡು ಬಂದಿದ್ದಾರೆ.

ಅದಕ್ಕೆ ಟ್ಯಾಕ್ಸ್ ಕಟ್ಟಿದ್ರೇ ಮಾತ್ರ ಅವರನ್ನ ಬಿಡ್ತೇವಿ ಅಂತ ತಿಳಿಸಿದ್ದಾರೆ. ಇನ್ನೂ ಆ ಕರೆಯನ್ನ ನಂಬಿದ ಯುವಕ ಎಷ್ಟು ದುಡ್ಡು ಕಟ್ಟಬೇಕು ಅಂತ ಕೇಳಿದ್ದಾನೆ.‌ ₹85 ಸಾವಿರ ಅಂತ ತಿಳಿಸಿದಾಗ ಕೂಡಲೇ ಅವರು ನೀಡಿದ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾನೆ. ಇದಾದ ಕೆಲವೇ ನಿಮಿಷಗಳಲ್ಲಿ ಅದೇ ನಂಬರ್‌ನಿಂದ ಮತ್ತೊಂದು ಕರೆ ಬಂದಿದೆ. ಈ ವೇಳೆ ಇನ್ನೂ ₹32 ಸಾವಿರ ಹಣ ಸೇರಿಸಬೇಕು ಅಂತ ಹೇಳಿದ್ದಾರೆ. ಆಗಲೂ ಕೂಡ ಹಿಂದೆ ಮುಂದೆ ವಿಚಾರ ಮಾಡದೇ ಈತ ಹಣ ವರ್ಗಾವಣೆ ಮಾಡಿದ್ದಾನೆ.

ಮ್ಯಾಟ್ರಿಮೋನಿಯಲ್​ ಸುಂದರಿಯ ಬೆಣ್ಣೆ ಮಾತಿಗೆ ಮರುಳಾಗಿ 1.17 ಲಕ್ಷ ರೂ. ಕಳೆದುಕೊಂಡ ಯುವಕ

ಇದಾದ ಒಂದು ಗಂಟೆ ಬಳಿಕ ಮತ್ತೆ ಕರೆ ಬಂದು ಮಾಯಾ ಬಳಿ ಎರಡು ಕೋಟಿ ರೂಪಾಯಿ ಚೆಕ್ ಇದ್ದು, ಅದನ್ನ ಕನ್ವರ್ಟ್ ಮಾಡೋಕೆ ಇನ್ನೂ ಒಂದು ಲಕ್ಷ ತೊಂಬತ್ತು ಸಾವಿರ ಹಣ ಹಾಕಿ ಅಂದಿದ್ದಾರೆ. ಇದರಿಂದ ಸಂಶಯಗೊಂಡ ಯುವಕ ಕೂಡಲೇ ತನ್ನ ಗೆಳೆಯನಿಗೆ ಕರೆ ಮಾಡಿ ವಿಚಾರ ಹೇಳಿದ್ದಾನೆ. ಆತ ಇದೆಲ್ಲವೂ ಫೇಕ್ ಇದೆ, ನೀನು ಬೆಳಗಾವಿಗೆ ಹೊರಟ ಬಿಡು ಅಂದಿದ್ದಾನೆ. ಬಳಿಕ ಬಂದ ದಾರಿಗೆ ಸುಂಕರ ಇಲ್ಲ ಅಂತ ಬೆಳಗಾವಿಗೆ ವಾಪಸ್ ಆದ ಬಳಿಕ ಯುವತಿ ಮೆಸೇಜ್ ಮಾಡ್ತಿದ್ದ ನಂಬರ್ ಕರೆ ಮತ್ತು ವಾಟ್ಸ್‌ಆ್ಯಪ್ ಮೆಸೇಜ್ ಕಳ್ಸಿದ್ದಾನೆ‌.

ಇನ್ನು, ಈತನಿಂದ ಹಣ ಸಿಗಲ್ಲ ಅಂತ ಗೊತ್ತಾದ ಬಳಿಕ ಆತನ ನಂಬರ್ ಬ್ಲಾಕ್ ಮಾಡಿದ್ದಾಳೆ. ಕೆಲ ದಿನಗಳ ಬಳಿಕ ಈತ ಬೆಳಗಾವಿಯ ಸಿಇಎನ್ ಪೊಲೀಸರಿಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ರೀತಿ ಆನ್‌ಲೈನ್ ವಂಚಕರಿಂದ ಎಚ್ಚರವಿರಿ ಅಂತ ಡಿಸಿಪಿ ಸಲಹೆ ನೀಡಿದ್ದಾರೆ.

ಮದುವೆ ಆಸೆಗೆ 10 ಲಕ್ಷ ರೂ. ಕಳೆದುಕೊಂಡ ಯುವಕ

ಒಂದು ಕಡೆ ಯುವಕ ಮದುವೆ ಆಸೆಗೆ ಬಿದ್ದು ಹಣ ಕಳೆದುಕೊಂಡಿದ್ರೇ ಇನ್ನೊಂದು ಕಡೆ ಬೆಳಗಾವಿ ತಾಲೂಕಿನ ಕಂಗ್ರಾಳಿ ಕೆ ಹೆಚ್ ಗ್ರಾಮದ ಯಲ್ಲಪ್ಪ ಜಾಧವ್ ಆನ್‌ಲೈನ್ ವಂಚಕರಿಂದ ಬರೋಬ್ಬರಿ 10 ಲಕ್ಷ ರೂ. ಕಳೆದುಕೊಂಡಿದ್ದಾನೆ. ಈತ ಒಂದಲ್ಲಾ ಎರಡಲ್ಲಾ 102 ಬಾರಿ ಓಟಿಪಿ ನಂಬರ್ ಹೇಳಿ ತನಗೆ ತಾನೇ ದೋಖಾ ತಂದುಕೊಂಡಿದ್ದಾನೆ. ಒಟ್ಟಾರೆ ಲಾಕ್‌ಡೌನ್ ವೇಳೆ ಆನ್‌ಲೈನ್‌ನಲ್ಲಿ ಕೆಲವರು ವಂಚನೆಗಿಳಿದ್ದಾರೆ. ಅಪರಿಚಿತರೊಂದಿಗೆ ಆನ್‌ಲೈನ್‌ನಲ್ಲಿ ವ್ಯವಹರಿಸಬೇಕಾದ್ರೆ ಪೂರ್ವಾಪರ ವಿಚಾರಿಸದೇ ಮೋಸ ಹೋಗಬೇಡಿ ಎಂದು ಡಿಸಿಪಿ ವಿಕ್ರಮ್​ ಆಮಟೆ ಸಲಹೆ ನೀಡಿದ್ದಾರೆ.

Last Updated : Jun 15, 2021, 8:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.