ಹೈದರಾಬಾದ್: ಆರ್ಬಿಐ ಬಡ್ಡಿದರ ಹೆಚ್ಚಿಸಿದ್ದಕ್ಕೆ ಬ್ಯಾಂಕ್‌ಗಳು, ಎನ್‌ಬಿಎಫ್‌ಸಿಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಠೇವಣಿ ಹಣವನ್ನೂ ಪರಿಷ್ಕರಿಸುತ್ತಿವೆ. ಅದರಲ್ಲೂ ಕಾರ್ಪೊರೇಟ್ ಸಂಸ್ಥೆಗಳು ಹಣಕಾಸಿನ ಅಗತ್ಯ ಪೂರೈಸಲು ಅಲ್ಪಾವಧಿಯ ಠೇವಣಿಗಳನ್ನು ಘೋಷಿಸುತ್ತಿವೆ. ನಾವು ಈ ಠೇವಣಿಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು. ಕಾರಣ ಈ ಠೇವಣಿಗಳು ಹೆಚ್ಚಿನ ಬಡ್ಡಿದರವನ್ನು ಹೊಂದಿರುತ್ತವೆ.
ಕಾರ್ಪೊರೇಟ್ಗಳಲ್ಲಿ ಠೇವಣಿ ಹೂಡಿಕೆ ಮಾಡುವ ಮೊದಲು ಕ್ರೆಡಿಟ್ ರೇಟಿಂಗ್‌ಗಳನ್ನು ಪರಿಶೀಲಿಸುವುದು ಉತ್ತಮ. ಕಾರ್ಪೊರೇಟ್‌ಗಳು ಪಾವತಿಸುವ ಬಡ್ಡಿ ಕೂಡ ತುಲನಾತ್ಮಕವಾಗಿ ತುಸು ಕಮ್ಮಿ ಇರುತ್ತದೆ. ಕಡಿಮೆ ರೇಟಿಂಗ್ ಹೊಂದಿರುವ ಸಂಸ್ಥೆಗಳು ಹೆಚ್ಚಿನ ಬಡ್ಡಿ ದರ ನೀಡಿದರೂ, ಇದು ಸ್ವಲ್ಪ ರಿಸ್ಕಿಯಾಗಿರುತ್ತದೆ.
ಹೀಗಾಗಿ ಹೂಡಿಕೆದಾರರು ಮೊದಲು ಸಿಆರ್ಐಎಸ್ಐಎಲ್, ಐಸಿಆರ್ಎ ಮತ್ತು ಸಿಎಆರ್ಇ ಇಂತಹ ಕಾರ್ಪೋರೇಟ್ಗಳಿಗೆ ನೀಡಿರುವ ರೇಟಿಂಗ್‌ಗಳನ್ನು ಪರಿಶೀಲಿಸಬೇಕು. ಉತ್ತಮ ರೇಟಿಂಗ್ ಹೊಂದಿರುವ ಸಂಸ್ಥೆಗಳಲ್ಲಿ ಇರುವ ಠೇವಣಿಗಳು ಗ್ರಾಹಕರಿಗೆ ಲಾಭದಾಯಕ ಮತ್ತು ಸುರಕ್ಷಿತ ಎಂದು ಪರಿಗಣಿಸಬಹುದು. ಎಎಎ ರೇಟಿಂಗ್ ಪಡೆದ ಸಂಸ್ಥೆಗಳು ನೀವಿಟ್ಟ ಠೇವಣಿಗೆ ಕಡಿಮೆ ಬಡ್ಡಿ ನೀಡಿದರೂ ನಿಮ್ಮ ಹಣ ಇಲ್ಲಿ ಸುರಕ್ಷಿತವಾಗಿರುತ್ತದೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ.
ಹೆಚ್ಚಿನ ಹಣಕ್ಕಾಗಿ ಅಲ್ಪಾವಧಿ ಠೇವಣಿ ಬೆಸ್ಟ್: ಠೇವಣಿ ಇಡುವಾಗ ನಾವು ಹೆಚ್ಚಿನ ಬಡ್ಡಿ ದರ ನೀಡುವ ಯೋಜನೆಯನ್ನೇ ಆಯ್ಕೆ ಮಾಡಿಕೊಳ್ಳುತ್ತೇವೆ. ಠೇವಣಿ ಹಣ ತ್ವರಿತ ರೀತಿಯಲ್ಲಿ ವೃದ್ಧಿಯಾಗಬೇಕು ಅಂತ ಅಂದುಕೊಂಡಿದ್ದರೆ, ನೀವು ದೀರ್ಘಾವಧಿಯ ಠೇವಣಿಗಳನ್ನು ಆಯ್ಕೆ ಮಾಡಬೇಡಿ. ಇದಕ್ಕಾಗಿ ಅಲ್ಪಾವಧಿ ಠೇವಣಿಗಳಲ್ಲಿ ಹೂಡಿಕೆ ಮಾಡುವುದು ಒಳಿತು.
ನೀವಿಡುವ ಠೇವಣಿಗೆ ಅಂದುಕೊಂಡಷ್ಟು ಬಡ್ಡಿದರ ಸಿಕ್ಕ ಬಳಿಕ ಅದನ್ನು ದೀರ್ಘಾವಧಿಯ ಠೇವಣಿಗಳಾಗಿ ಪರಿವರ್ತಿಸಿ. ಠೇವಣಿಗಳ ಮೇಲೆ ಬಂದ ಬಡ್ಡಿ ಹಣವನ್ನು ಒಟ್ಟು ಆದಾಯದಲ್ಲಿ ಸೇರಿಸಬೇಕು. ಅದಕ್ಕೆ ಅನ್ವಯವಾಗುವ ಸ್ಲ್ಯಾಬ್‌ಗಳ ಆಧಾರದ ಮೇಲೆ ತೆರಿಗೆಯನ್ನು ಪಾವತಿಸಬೇಕು. ಠೇವಣಿ ಮೇಲೆ ಬರುವ ಬಡ್ಡಿ 5 ಸಾವಿರ ರೂಪಾಯಿಗೂ ಹೆಚ್ಚಿದ್ದರೆ ಇದಕ್ಕೆ ಟಿಡಿಎಸ್ ಅನ್ವಯಿಸುತ್ತದೆ. ಆಗ ನಾವು ಫಾರ್ಮ್ 15G/15H ಅನ್ನು ಸಲ್ಲಿಸಬೇಕಾಗುತ್ತದೆ.
ಎರಡರಿಂದ ಮೂರು ತಿಂಗಳಲ್ಲಿ ಹಣವನ್ನು ಹಿಂಪಡೆಯ ಬಯಸುವವರು ನಿಮಗೆ ಅನುಕೂಲವಾಗುವ ಅವಧಿಯ ಯೋಜನೆಯ ಆಯ್ದುಕೊಂಡು ಬ್ಯಾಂಕ್ ಠೇವಣಿಗಳನ್ನು ಆರಿಸಿಕೊಳ್ಳಬೇಕು. ಪ್ರತಿ ಠೇವಣಿಗೆ ನಾಮಿನಿ ಮಾಡುವುದನ್ನು ಮರೆಯಬೇಡಿ. ಕೆಲವು ಸಣ್ಣ ಬ್ಯಾಂಕುಗಳು ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತವೆ. ಆದ್ದರಿಂದ, ದೊಡ್ಡ ಬ್ಯಾಂಕ್‌ಗಳು, ಸಣ್ಣ ಬ್ಯಾಂಕ್‌ಗಳು ಅಥವಾ ಕಾರ್ಪೊರೇಟ್ ವಲಯದಲ್ಲಿ ಹೂಡಿಕೆ ಮಾಡಬೇಕೆ ಎಂಬುದನ್ನು ಕೂಲಂಕಷವಾಗಿ ಅರಿತು ಠೇವಣಿಯನ್ನು ಇಡಬೇಕು.
ಓದಿ: ಸಣ್ಣ ಹೂಡಿಕೆಯೇ ಇರಲಿ.. ಭವಿಷ್ಯದಲ್ಲಿ ಇದು ದೊಡ್ಡ ಮೊತ್ತ ಕೊಡಬಹುದು.. ಈಗಿನಿಂದಲೇ ಉಳಿತಾಯ ಮಾಡಿ!