ETV Bharat / business

ಮೊದಲ ಸಂಬಳದಿಂದಲೇ ಉಳಿತಾಯ ಆರಂಭಿಸಿ: ಜೀವನ ಸುಭದ್ರವಾಗಿಸಿ

ಯೌವನದಲ್ಲಿ ದುಡಿಯಲು ಪ್ರಾರಂಭಿಸಿದ ಸಮಯದಲ್ಲಿಯೇ ಮುಂದಿನ ಹಣಕಾಸು ಜೀವನದ ಬಗ್ಗೆ ಯೋಜನೆ ರೂಪಿಸಿ ಅದರಂತೆ ಮುನ್ನಡೆಯುವುದು ಉತ್ತಮ. ಇದರಿಂದ ಜೀವನದಲ್ಲಿ ಆರ್ಥಿಕ ಮುಗ್ಗಟ್ಟು ಎದುರಿಸುವುದು ತಪ್ಪುತ್ತದೆ ಹಾಗೂ ವೃದ್ಧಾಪ್ಯ ಜೀವನ ಸುಭದ್ರವಾಗುತ್ತದೆ.

author img

By

Published : Apr 5, 2023, 12:29 PM IST

ಮೊದಲ ಸಂಬಳದಿಂದಲೇ ಉಳಿತಾಯ ಆರಂಭಿಸಿ; ಜೀವನ ಸುಭದ್ರವಾಗಿಸಿ
Savings culture and financial planning lacking in majority youth of India

ಹೈದರಾಬಾದ್ : ಯೌವನದಲ್ಲಿರುವ ಧೈರ್ಯದ ಮುಂದೆ ಯಾವುದೂ ಸಾಟಿಯಲ್ಲ. ಆಗ ಏನು ಬೇಕಾದರೂ ಮಾಡಬಲ್ಲೆ, ಅಂದುಕೊಂಡಿದ್ದನ್ನು ಸಾಧಿಸಬಲ್ಲೆ ಎಂಬ ಹುಮ್ಮಸ್ಸಿರುತ್ತದೆ. ಯುವಕರಾಗಿದ್ದಾಗ ಕುಟುಂಬದ ಜವಾಬ್ದಾರಿಗಳು ಜಾಸ್ತಿ ಇರುವುದಿಲ್ಲ. ಹೀಗಾಗಿ ಆದಾಯ ಕಮ್ಮಿ ಇದ್ದರೂ ಅಂಥ ಕಷ್ಟವೇನೂ ಆಗಲ್ಲ. ಆದರೆ ಆವಾಗಲೇ ಮುಂದಿನ ಜೀವನಕ್ಕಾಗಿ ಹಣಕಾಸು ಯೋಜನೆಗಳನ್ನು ಸೂಕ್ತವಾಗಿ ಪ್ಲ್ಯಾನ್ ಮಾಡಬೇಕಾಗುತ್ತದೆ. ಹಾಗೆ ಮಾಡಿದರೆ ಮಾತ್ರ ನೀವು ದುಡಿಯುವ ದುಡ್ಡು ಕೂಡ ನಿಮಗಾಗಿ ದುಡಿಯಲಾರಂಭಿಸುತ್ತದೆ. ನಿಮ್ಮ ದುಡ್ಡು ನಿಮಗೆ ಸಂಪತ್ತು ಸೃಷ್ಟಿಸುತ್ತದೆ. ಹಾಗಾದರೆ ಜೀವನದಲ್ಲಿ ಹಣಕಾಸು ಪ್ಲ್ಯಾನಿಂಗ್ ಮಾಡುವುದು ಹೇಗೆ ತಿಳಿಯೋಣ ಬನ್ನಿ.

ನಮ್ಮದು ಯುವಕರ ರಾಷ್ಟ್ರ. ದೇಶದ ಶೇ 65 ರಷ್ಟು ಜನಸಂಖ್ಯೆ 35 ವರ್ಷಕ್ಕಿಂತ ಕಡಿಮೆ ವಯೋಮಾನದವರು. ಆದರೆ, ಹಣಕಾಸು ಯೋಜನೆಗೆ ಸಂಬಂಧಿಸಿದಂತೆ ಹೆಚ್ಚಿನವರು ಕಾಳಜಿ ವಹಿಸುವುದಿಲ್ಲ ಎಂದು ವರದಿಗಳು ಹೇಳುತ್ತವೆ. ಏನೇ ಆದರೂ ಜೀವನದಲ್ಲಿ ಹಣಕಾಸು ಯೋಜನೆಯಂಥ ಒಳ್ಳೆಯ ಅಭ್ಯಾಸಗಳನ್ನು ಆದಷ್ಟು ಬೇಗ ಆರಂಭಿಸಬೇಕು. ಓದುವಾಗ ನಾವು ನಮ್ಮ ತಂದೆ ತಾಯಿಯ ಮೇಲೆ ಅವಲಂಬಿತರಾಗಿರುತ್ತೇವೆ. ಆದರೆ ಗಳಿಸಲು ಪ್ರಾರಂಭಿಸಿದ ನಂತರ, ನೀವು ಗಳಿಸುವ ಪ್ರತಿ ರೂಪಾಯಿಯನ್ನು ಖರ್ಚು ಮಾಡುವ ಮೊದಲು ನೀವು ಎಚ್ಚರಿಕೆಯಿಂದ ಯೋಚಿಸಬೇಕು.

ಮೊದಲ ಸಂಬಳದ ಸಮಯದಿಂದಲೇ 50:50 ಸಿದ್ಧಾಂತವನ್ನು ಅಳವಡಿಸಿಕೊಳ್ಳುವುದು ಬೆಸ್ಟ್​. ನಿಮ್ಮ ಆದಾಯದ ಶೇಕಡಾ 50 ರಷ್ಟನ್ನು ಉಳಿತಾಯಕ್ಕಾಗಿ ಮೀಸಲಿಡಿ. ಇನ್ನುಳಿದ ಅರ್ಧ ಹಣದಲ್ಲಿ ಮೊದಲು ಅಪಾಯ ಮುಕ್ತ ಯೋಜನೆಗಳಲ್ಲಿ ಹೂಡಿಕೆ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಬಳಿ ಹಣ ಸಂಗ್ರಹವಾಗಲಾರಂಭಿಸುತ್ತದೆ. ನಿಮ್ಮ ಹಣಕಾಸಿನ ಗುರಿಗಳು ಮತ್ತು ಎಷ್ಟು ಅಪಾಯಕ್ಕೆ ಒಡ್ಡಿಕೊಳ್ಳಬಹುದು ಎಂಬ ಬಗ್ಗೆ ನೀವು ತಿಳಿವಳಿಕೆಯನ್ನು ಹೊಂದಿದ್ದರೆ, ನೀವು ಹೆಚ್ಚಿನ ಆದಾಯ ನೀಡುವ ಯೋಜನೆಗಳತ್ತ ನೋಡಬಹುದು.

ನಿಮ್ಮ ಹಣಕಾಸಿನ ಗುರಿಗಳನ್ನು ಸ್ಪಷ್ಟವಾಗಿ ನಿರ್ಧರಿಸಿಕೊಳ್ಳಿ. ಹೂಡಿಕೆಯು ನಿರ್ದಿಷ್ಟ ಗುರಿಯೊಂದಿಗೆ ಮುನ್ನಡೆದಾಗ ಮಾತ್ರ ಆ ಯೋಜನೆ ದೀರ್ಘಕಾಲ ಉಳಿಯುತ್ತದೆ. ಇಲ್ಲವಾದರೆ ಶುರು ಮಾಡಿ ಮಧ್ಯದಲ್ಲಿ ನಿಲ್ಲಿಸುವುದು ಅಭ್ಯಾಸವಾಗುತ್ತದೆ. ಆದ್ದರಿಂದ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಗುರಿಗಳನ್ನು ಗುರುತಿಸಿ. ಅವುಗಳನ್ನು ಸಾಧಿಸಲು, ಸೂಕ್ತವಾದ ಹೂಡಿಕೆ ಮಾರ್ಗಗಳನ್ನು ಆಯ್ಕೆಮಾಡಿ ಮತ್ತು ಹೂಡಿಕೆಯನ್ನು ಪ್ರಾರಂಭಿಸಿ. ಅಗತ್ಯವಿರುವಷ್ಟು ಬೇಗ ನಗದಾಗಿ ಪರಿವರ್ತಿಸುವ ಯೋಜನೆಗಳನ್ನು ಆಯ್ಕೆ ಮಾಡಲು ಹಲವರು ಬಯಸುತ್ತಾರೆ. ಅಲ್ಪಾವಧಿಯ ಗುರಿಗಳಿಗೆ ಇವು ಸೂಕ್ತವಾಗಿವೆ.

ಚಿಕ್ಕ ವಯಸ್ಸಿನವರಿಗೆ ಕುಟುಂಬದ ಪ್ರಮುಖ ಜವಾಬ್ದಾರಿಗಳಿಲ್ಲದಿರಬಹುದು. ಆದಾಗ್ಯೂ ಕೆಲವೊಮ್ಮೆ ನೀವೇ ಕುಟುಂಬದ ಪ್ರಮುಖ ಆದಾಯದ ಆಧಾರ ಸ್ತಂಭವಾಗಿರಬಹುದು. ವಯಸ್ಸಾದ ಪೋಷಕರು ಮತ್ತು ಒಡಹುಟ್ಟಿದವರು ನಿಮ್ಮ ಮೇಲೆ ಅವಲಂಬಿತರಾಗಿರಬಹುದು. ಅಂಥ ಸಂದರ್ಭಗಳಲ್ಲಿ, ಅವರನ್ನು ಆರ್ಥಿಕವಾಗಿ ಬೆಂಬಲಿಸಲು ವಿಮಾ ಪಾಲಿಸಿಯನ್ನು ತೆಗೆದುಕೊಳ್ಳಬೇಕು. ಇದು ಕುಟುಂಬಕ್ಕೆ ರಕ್ಷಣಾತ್ಮಕ ಗುರಾಣಿ ಎಂಬುದನ್ನು ಮರೆಯಬೇಡಿ. ನೀವು ಚಿಕ್ಕ ವಯಸ್ಸಿನಲ್ಲಿ ವಿಮಾ ಪಾಲಿಸಿ ತೆಗೆದುಕೊಂಡರೆ, ಪ್ರೀಮಿಯಂ ಕಡಿಮೆ ಇರುತ್ತದೆ. ಹೀಗಾಗಿ ಹೆಚ್ಚು ಮೊತ್ತದ ವಿಮಾ ಪಾಲಿಸಿಯನ್ನು ಆಯ್ಕೆ ಮಾಡಬಹುದು.

ಹಣಕಾಸು ಯೋಜನೆ ಎಂಬುದು ಒಂದೇ ದಿನದಲ್ಲಿ ಮಾಡಿ ಮುಗಿಸುವಂಥದ್ದಲ್ಲ. ಲಭ್ಯವಿರುವ ಸಂಪನ್ಮೂಲಗಳನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ ಎಂಬುದನ್ನು ಇದು ನಿರ್ಧರಿಸುತ್ತದೆ. ನಿಮ್ಮ ಮದುವೆ, ಮಕ್ಕಳು, ವಿದ್ಯಾಭ್ಯಾಸ, ಇತರ ಅಗತ್ಯತೆಗಳು ಮತ್ತು ನಿವೃತ್ತಿ ಈ ಎಲ್ಲವೂಗಳ ಬಗ್ಗೆ ದೀರ್ಘಾವಧಿಯ ದೃಷ್ಟಿಕೋನ ಹೊಂದಿರಬೇಕು. 30-40 ವರ್ಷ ಸಂಪಾದಿಸಿ ಅದರಲ್ಲಿ ಒಂದಿಷ್ಟು ಉಳಿತಾಯ ಮಾಡುವುದು ಒಂದು ಲೆಕ್ಕಾಚಾರದ ಪ್ರಕಾರ ನಡೆಯಬೇಕು. ಅಗತ್ಯವಿದ್ದರೆ ಆರ್ಥಿಕ ತಜ್ಞರ ಸಲಹೆ ಪಡೆಯಿರಿ.

ಹೂಡಿಕೆಗಾಗಿ ಆಯ್ಕೆ ಮಾಡಿದ ಯೋಜನೆಗಳು ವೈವಿಧ್ಯಮಯವಾಗಿರಬೇಕು. ತುಂಬಾ ಸುರಕ್ಷಿತ ಅಥವಾ ಒಂಚೂರು ಅಪಾಯವಿಲ್ಲದ ಸ್ಕೀಮ್‌ಗಳನ್ನು ಆಯ್ಕೆ ಮಾಡುವುದರಿಂದ ಪೋರ್ಟ್‌ಫೋಲಿಯೊ ಬ್ಯಾಲೆನ್ಸ್‌ಗೆ ತೊಂದರೆಯಾಗುತ್ತದೆ. ಆದರೆ ಹೂಡಿಕೆಯನ್ನು ವೈವಿಧ್ಯಮಯಗೊಳಿಸಿದಾಗ ಕಳೆದುಕೊಳ್ಳುವ ಅಪಾಯ ಕಡಿಮೆ. ಬದಲಾಗುತ್ತಿರುವ ಹಣಕಾಸಿನ ಪರಿಸ್ಥಿತಿಗಳು, ಜವಾಬ್ದಾರಿಗಳು ಮತ್ತು ಇತರ ಅಂಶಗಳ ಆಧಾರದ ಮೇಲೆ ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ಕಾಲಕಾಲಕ್ಕೆ ಮೇಲ್ವಿಚಾರಣೆ ಮಾಡಬೇಕು. ಮಾರುಕಟ್ಟೆ ಕಾರ್ಯಕ್ಷಮತೆಯ ಆಧಾರದ ಮೇಲೆ ನಿಮ್ಮ ಹೂಡಿಕೆಗಳನ್ನು ಪರಿಶೀಲಿಸಿ. ಪೋರ್ಟ್​ಫೋಲಿಯೊವನ್ನು ನಿಯಮಿತವಾಗಿ ಪರಿಷ್ಕರಿಸಿ.

ಇದನ್ನೂ ಓದಿ : 1 ಡಾಲರ್​ಗೆ 288 ರೂ.: ಪಾತಾಳಕ್ಕೆ ಕುಸಿದ ಪಾಕಿಸ್ತಾನ ರೂಪಾಯಿ ಮೌಲ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.