ETV Bharat / business

ದುಬೈನಲ್ಲಿ ಶೇ 100ರಷ್ಟು ಸಸ್ಯ ಆಧಾರಿತ ಮಾಂಸ ಕಾರ್ಖಾನೆ ಓಪನ್​.. ಏನಿದು ಸಸ್ಯಾಧಾರಿತ ಮಾಂಸ?​ - local plant based meat products

ಆರೋಗ್ಯಕರ ಸ್ಥಳೀಯ ಸಸ್ಯ ಆಧಾರಿತ ಮಾಂಸ ಉತ್ಪನ್ನಗಳನ್ನು ಒದಗಿಸುವ ಕಾರ್ಖಾನೆಯನ್ನು ನಿನ್ನೆ ದುಬೈನಲ್ಲಿ ತೆರೆಯಲಾಗಿದೆ.

plant based meat
ಸಸ್ಯ ಆಧಾರಿತ ಮಾಂಸ ಕಾರ್ಖಾನೆ
author img

By

Published : Mar 18, 2023, 9:49 AM IST

ದುಬೈ: ಮಧ್ಯಪ್ರಾಚ್ಯದಲ್ಲಿ ಸುಸ್ಥಿರ ಮತ್ತು ಆರೋಗ್ಯಕರ ಆಹಾರ ಸರಪಳಿಯನ್ನು ಮುಂದುವರೆಸಿಕೊಂಡು ಹೋಗಲು ಪ್ರಯತ್ನಿಸಲಾಗುತ್ತಿದೆ. ಇದರ ಭಾಗವಾಗಿ ಪ್ರಮುಖ ಸಂಸ್ಕರಿತ ಆಹಾರ ಉತ್ಪಾದಕ ಇಫ್ಕೊ ಗ್ರೂಪ್ (IFFCO Group) ಮೊದಲ ಬಾರಿ ದುಬೈನಲ್ಲಿ ಶೇ 100 ಪ್ರತಿಶತ ಸಸ್ಯ ಆಧಾರಿತ ಮಾಂಸ ಉತ್ಪನ್ನಗಳನ್ನು ಒದಗಿಸುವ ಕಾರ್ಖಾನೆಯನ್ನ ಪ್ರಾರಂಭಿಸಿದೆ.

ದುಬೈ ಇಂಡಸ್ಟ್ರಿಯಲ್ ಸಿಟಿಯಲ್ಲಿರುವ THRYVE ಕಾರ್ಖಾನೆಯು ಮಧ್ಯಪ್ರಾಚ್ಯ ಪಾಕ ಪದ್ಧತಿಯ ವಿಶಿಷ್ಟ ಸುವಾಸನೆಯಿಂದ ಕೂಡಿದ ಸಮರ್ಥನೀಯ ಮತ್ತು ಆರೋಗ್ಯಕರ ಸ್ಥಳೀಯ ಸಸ್ಯ ಆಧಾರಿತ ಮಾಂಸ ಉತ್ಪನ್ನಗಳನ್ನು ಒದಗಿಸುತ್ತಿದೆ.

ಇದನ್ನೂ ಓದಿ : ಆರೋಗ್ಯಯುತ ಆಹಾರ ಆಯ್ಕೆ ಜೊತೆಗೆ ಅದನ್ನು ಸರಿಯಾದ ವಿಧಾನದಲ್ಲಿ ಬೇಯಿಸುವುದು ಅವಶ್ಯ

"ಶೇಕಡಾ 100 ರಷ್ಟು ಸಸ್ಯಾಧಾರಿತ ಮಾಂಸ ಕಾರ್ಖಾನೆಯು ಯುಎಇಯ ಆಹಾರ ಭದ್ರತಾ ಕಾರ್ಯತಂತ್ರಗಳು ಮತ್ತು ಹವಾಮಾನ ಬದಲಾವಣೆಯ ಪರಿಣಾಮವನ್ನು ತಗ್ಗಿಸುವ ನಮ್ಮ ಆದೇಶವನ್ನು ಬೆಂಬಲಿಸುತ್ತದೆ" ಎಂದು ಯುಎಇ ಹವಾಮಾನ ಬದಲಾವಣೆ ಮತ್ತು ಪರಿಸರ ಸಚಿವ ಮರಿಯಮ್ ಬಿಂಟ್ ಮೊಹಮ್ಮದ್ ಸಯೀದ್ ಹರೇಬ್ ಅಲ್ಮ್ಹೇರಿ ಹೇಳಿದ್ದಾರೆ.

ಇದನ್ನೂ ಓದಿ : ಪರೀಕ್ಷೆಗೆ ಮುನ್ನ ಯಾವ ರೀತಿ ಆಹಾರ ಸೇವನೆ ಮಾಡಬೇಕು: ಯಾಕೆ ಇದು ಮುಖ್ಯ?

ಇದೀಗ ನವೀನ ತಂತ್ರಜ್ಞಾನಗಳನ್ನು ಬಳಸಿಕೊಂಡು ಪ್ರಾರಂಭಿಸಲಾದ ಈ ಕಾರ್ಖಾನೆಯು ದೇಶದ ಪರಿಸರ ವ್ಯವಸ್ಥೆ ರಕ್ಷಿಸಲು ಮತ್ತು ಆಹಾರ ಹಾಗೂ ನೀರಿನ ಗುಣಮಟ್ಟ ಹೆಚ್ಚಿಸಲು ಅನುಕೂಲವಾಗಿದೆ. ನಮ್ಮ ಆಹಾರ ಮೂಲಗಳನ್ನು ವೈವಿಧ್ಯಮಯಗೊಳಿಸಲು ಸಹಕಾರಿಯಾಗಿದೆ. ಹೊಸ ಕಾರ್ಖಾನೆಯು ಆಹಾರ ಪೂರೈಕೆ ಸರಪಳಿಯಲ್ಲಿ ಸುಸ್ಥಿರತೆ ಕಾಯ್ದುಕೊಳ್ಳಲು ಮಹತ್ವದ ಕೊಡುಗೆ ನೀಡುತ್ತದೆ ಎಂದು ಅವರು ಹೇಳಿದರು.

ಇದನ್ನೂ ಓದಿ : ಫ್ರೈಡ್​ ಚಿಪ್ಸ್​ಗೆ ಪರ್ಯಾಯವಾಗಿ ಸೇವಿಸಿ ಈ ಆರೋಗ್ಯಕರ ಸ್ನಾಕ್ಸ್​

ದುಬೈ ಆರ್ಥಿಕ ಅಭಿವೃದ್ಧಿಗೆ ಕೊಡುಗೆ:"ಅತ್ಯಾಧುನಿಕ ಆಹಾರ ತಂತ್ರಜ್ಞಾನ ಬಳಸಿಕೊಂಡು ಅಭಿವೃದ್ಧಿಪಡಿಸಲಾದ THRYVE ಸಸ್ಯ ಆಧಾರಿತ ಉದ್ಯಮವು ಕನಿಷ್ಠ ಮೂರು UN SDG ಗಳಿಗೆ ಕೊಡುಗೆ ನೀಡುತ್ತದೆ. ಉತ್ತಮ ಆರೋಗ್ಯ ಮತ್ತು ಜವಾಬ್ದಾರಿಯುತ ಬಳಕೆ, ಉತ್ಪಾದನೆ ಮತ್ತು ಹವಾಮಾನ ಕ್ರಿಯೆಯ ಮೇಲೆ ಪ್ರಭಾವ ಬೀರಲಿದೆ. ಜೊತೆಗೆ, ದುಬೈ ಆರ್ಥಿಕ ಅಜೆಂಡಾ D33 ರ ಗುರಿ ಸಾಧಿಸಲು ಮಹತ್ವದ ಕೊಡುಗೆ ನೀಡುತ್ತದೆ. ಹಾಗೂ ದುಬೈ ಅನ್ನು ಅಗ್ರ ಮೂರು ಜಾಗತಿಕ ನಗರಗಳಲ್ಲಿ ಒಂದಾಗಿ ಬಲಪಡಿಸಲು ಉಪಕಾರಿಯಾಗಲಿದೆ" ಎಂದು ದುಬೈ ಆರ್ಥಿಕ ಅಭಿವೃದ್ಧಿ ನಿಗಮದ ಸಿಇಒ ಹಾದಿ ಬದ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಅಧಿಕ ಕೊಬ್ಬಿನ ಆಹಾರ ಪರಾವಲಂಬಿ ಜೀವಿ ತೊಡೆದು ಹಾಕಲು ನೆರವಾಗುತ್ತೆ: ಸಂಶೋಧನೆ

ಏನಿದು ಸಸ್ಯ ಆಧಾರಿತ ಮಾಂಸ ?: ಮಾಂಸಾಹಾರಿ ಆಹಾರದ ಕಡು ಬಯಕೆಯನ್ನು ಪೂರೈಸಲು ಸಸ್ಯ ಆಧಾರಿತ ಮಾಂಸವನ್ನು 1970 ರ ದಶಕದಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಯಿತು. ಇದು ಅಮೆರಿಕದಲ್ಲಿ ನಿರಂತರವಾಗಿ ಬೆಳೆಯುತ್ತಿರುವ ಮಾಂಸ ಮಾರುಕಟ್ಟೆ ಮತ್ತು ಪರಿಸರದ ಮೇಲೆ ಉಂಟಾಗುತ್ತಿರುವ ಹಾನಿಕಾರಕ ಪರಿಣಾಮಗಳನ್ನು ತಡೆಗಟ್ಟಲು ಕಂಡುಹಿಡಿದ ಪರ್ಯಾಯ ಆಹಾರದ ಮಾರ್ಗವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.