ETV Bharat / business

ಭಾರತದ ವಿದ್ಯುತ್ ಬಳಕೆ ಶೇ 9.4ರಷ್ಟು ಏರಿಕೆ; 984 ಶತಕೋಟಿ ಯುನಿಟ್​ಗೆ ಬೇಡಿಕೆ - ವಿದ್ಯುತ್ ಬಳಕೆ ಗಣನೀಯವಾಗಿ ಹೆಚ್ಚಾಗಿದೆ

ಈ ವರ್ಷದ ಏಪ್ರಿಲ್​ನಿಂದ ಅಕ್ಟೋಬರ್ ಅವಧಿಯಲ್ಲಿ ದೇಶದ ವಿದ್ಯುತ್ ಬಳಕೆಯು ಶೇ 9.4ರಷ್ಟು ಹೆಚ್ಚಾಗಿದೆ.

India's power consumption grows 9.4 pc to 984.39 billion units in April-October

author img

By ETV Bharat Karnataka Team

Published : Nov 5, 2023, 4:27 PM IST

ನವದೆಹಲಿ : ಆರ್ಥಿಕ ಚಟುವಟಿಕೆಗಳು ಮತ್ತು ಹವಾಮಾನ ಪರಿಸ್ಥಿತಿಗಳಲ್ಲಿನ ಸುಧಾರಣೆಯಿಂದಾಗಿ ಈ ಹಣಕಾಸು ವರ್ಷದ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಭಾರತದ ವಿದ್ಯುತ್ ಬಳಕೆಯು ಶೇ 9.4ರಷ್ಟು ಏರಿಕೆಯಾಗಿ ಸುಮಾರು 984.39 ಶತಕೋಟಿ ಯೂನಿಟ್​ಗಳಿಗೆ ತಲುಪಿದೆ. 2022-23ರ ಆರ್ಥಿಕ ವರ್ಷದ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ವಿದ್ಯುತ್ ಬಳಕೆ 899.95 ಬಿಲಿಯನ್ ಯುನಿಟ್ ಆಗಿತ್ತು ಎಂದು ಇಂಧನ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

ಹಾಗೆಯೇ ಗರಿಷ್ಠ ವಿದ್ಯುತ್ ಬೇಡಿಕೆಯು ಈ ಹಣಕಾಸು ವರ್ಷದ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಸುಮಾರು 241 ಗಿಗಾವ್ಯಾಟ್​ಗೆ ಏರಿದೆ. ಇದು 2022 ರ ಇದೇ ಅವಧಿಯಲ್ಲಿ 215.88 ಗಿಗಾವ್ಯಾಟ್​ ಆಗಿತ್ತು.

ದೇಶದ ವಿದ್ಯುತ್ ಬಳಕೆಯು ಅಕ್ಟೋಬರ್​ನಲ್ಲಿ ಸುಮಾರು 22 ಪ್ರತಿಶತದಷ್ಟು ಏರಿಕೆಯಾಗಿ 138.94 ಬಿಲಿಯನ್ ಯೂನಿಟ್​ಗಳಿಗೆ (ಬಿಯು) ತಲುಪಿದೆ. ಹಬ್ಬಗಳು ಮತ್ತು ಹೆಚ್ಚಿದ ಆರ್ಥಿಕ ಚಟುವಟಿಕೆಗಳಿಂದಾಗಿ ವಿದ್ಯುತ್ ಬೇಡಿಕೆಯಲ್ಲಿನ ಹೆಚ್ಚಳವನ್ನು ಇದು ಬಿಂಬಿಸುತ್ತದೆ. ಒಂದು ವರ್ಷದ ಹಿಂದೆ ಇದೇ ತಿಂಗಳಲ್ಲಿ, ವಿದ್ಯುತ್ ಬಳಕೆ 113.94 ಬಿಯು ಆಗಿತ್ತು. ಇದು 2021 ರ ಅಕ್ಟೋಬರ್​ನಲ್ಲಿ ದಾಖಲಾದ 112.79 ಬಿಲಿಯನ್ ಯೂನಿಟ್​ಗಳಿಗಿಂತ ಹೆಚ್ಚಾಗಿತ್ತು ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.

ಕಳೆದ ಎರಡು ತಿಂಗಳಲ್ಲಿ ವಿದ್ಯುತ್ ಬಳಕೆ ಗಣನೀಯವಾಗಿ ಹೆಚ್ಚಾಗಿದೆ ಎಂದು ಟಾಟಾ ಪವರ್ ದೆಹಲಿ ಡಿಸ್ಟ್ರಿಬ್ಯೂಷನ್ ಲಿಮಿಟೆಡ್​ನ ವಕ್ತಾರರು ತಿಳಿಸಿದ್ದಾರೆ. ಅಕ್ಟೋಬರ್ 2023 ರಲ್ಲಿ, ಟಾಟಾ ಪವರ್-ದೆಹಲಿ ಡಿಸ್ಟ್ರಿಬ್ಯೂಷನ್ ಲಿಮಿಟೆಡ್ ಕಾರ್ಯಾಚರಣೆಯ ಪ್ರದೇಶದಲ್ಲಿ ವಿದ್ಯುತ್ ಬಳಕೆಯು ಸುಮಾರು 10.16 ಪ್ರತಿಶತದಷ್ಟು ಏರಿಕೆಯಾಗಿ 845 ಎಂಯುಗಳಿಗೆ (ಮಿಲಿಯನ್ ಯೂನಿಟ್​ಗಳಿಗೆ) ತಲುಪಿದೆ.

ಬೇಸಿಗೆಯಲ್ಲಿ ದೇಶದ ವಿದ್ಯುತ್ ಬೇಡಿಕೆ 229 ಗಿಗಾವ್ಯಾಟ್ ತಲುಪಲಿದೆ ಎಂದು ಇಂಧನ ಸಚಿವಾಲಯ ಅಂದಾಜಿಸಿತ್ತು. ಅಕಾಲಿಕ ಮಳೆಯಿಂದಾಗಿ ಏಪ್ರಿಲ್-ಜುಲೈನಲ್ಲಿ ಬೇಡಿಕೆಯು ನಿರೀಕ್ಷಿತ ಮಟ್ಟವನ್ನು ತಲುಪಲಿಲ್ಲ. ಆದಾಗ್ಯೂ, ಗರಿಷ್ಠ ವಿದ್ಯುತ್ ಪೂರೈಕೆ ಜೂನ್​ನಲ್ಲಿ 224.1 ಗಿಗಾವ್ಯಾಟ್​ಗೆ ತಲುಪಿ ಜುಲೈನಲ್ಲಿ 209.03 ಗಿಗಾವ್ಯಾಟ್​ಗೆ ಇಳಿದಿದೆ. ಆಗಸ್ಟ್​ನಲ್ಲಿ ಗರಿಷ್ಠ ಬೇಡಿಕೆ 238.19 ಗಿಗಾವ್ಯಾಟ್ ತಲುಪಿದೆ. ಈ ವರ್ಷದ ಸೆಪ್ಟೆಂಬರ್​ನಲ್ಲಿ ಇದು ಸುಮಾರು 241 ಗಿಗಾವ್ಯಾಟ್ ಆಗಿತ್ತು.

ಈ ವರ್ಷದ ಮಾರ್ಚ್, ಏಪ್ರಿಲ್, ಮೇ ಮತ್ತು ಜೂನ್​ನಲ್ಲಿ ವ್ಯಾಪಕ ಮಳೆಯಿಂದಾಗಿ ವಿದ್ಯುತ್ ಬಳಕೆಯ ಮೇಲೆ ಪರಿಣಾಮ ಬೀರಿದೆ ಎಂದು ಉದ್ಯಮ ತಜ್ಞರು ತಿಳಿಸಿದ್ದಾರೆ. ಹಬ್ಬಗಳು ಮತ್ತು ಆರ್ಥಿಕ ಚಟುವಟಿಕೆಗಳ ಸುಧಾರಣೆಯಿಂದಾಗಿ ಮುಂಬರುವ ತಿಂಗಳುಗಳಲ್ಲಿ ವಿದ್ಯುತ್ ಬಳಕೆಯ ಬೆಳವಣಿಗೆ ಸ್ಥಿರವಾಗಿ ಉಳಿಯುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ಗೂಗಲ್ ಆಡ್​ಸೆನ್ಸ್ ನಿಯಮ ಬದಲು; 'ಪೇ ಪರ್ ಕ್ಲಿಕ್' ಬದಲಿಗೆ 'ಪೇ ಪರ್​ ಇಂಪ್ರೆಷನ್​'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.