ETV Bharat / business

ಆಮದು ಕುಸಿತ ಎಫೆಕ್ಟ್​; ನವೆಂಬರ್​ನಲ್ಲಿ ಭಾರತದ ಸರಕು ವ್ಯಾಪಾರ ಕೊರತೆ ಇಳಿಕೆ - ತೈಲ ಆಮದು

India's trade deficit: ಭಾರತದ ಸರಕು ವ್ಯಾಪಾರ ಕೊರತೆಯು ನವೆಂಬರ್​ನಲ್ಲಿ ಇಳಿಕೆಯಾಗಿದೆ.

India's trade deficit declines in November as imports dip

author img

By ETV Bharat Karnataka Team

Published : Dec 15, 2023, 6:16 PM IST

ನವದೆಹಲಿ: ಭಾರತದ ಸರಕು ವ್ಯಾಪಾರ ಕೊರತೆಯು ನವೆಂಬರ್​ನಲ್ಲಿ 20.58 ಶತಕೋಟಿ ಡಾಲರ್​ಗೆ ಇಳಿಕೆಯಾಗಿದೆ ಎಂದು ಶುಕ್ರವಾರ ಬಿಡುಗಡೆ ಮಾಡಲಾದ ಸರಕಾರದ ಅಂಕಿಅಂಶಗಳು ತಿಳಿಸಿವೆ. ಮುಖ್ಯವಾಗಿ, ಚಿನ್ನ ಮತ್ತು ತೈಲ ಆಮದು ಕಡಿಮೆಯಾಗಿದ್ದರಿಂದ ವ್ಯಾಪಾರ ಕೊರತೆ ಕಡಿಮೆಯಾಗಿದೆ. ಆದಾಗ್ಯೂ ರಫ್ತು ಪ್ರಮಾಣ ಶೇಕಡಾ 2.8ರಷ್ಟು ತೀವ್ರವಾಗಿ ಇಳಿದು 33.90 ಬಿಲಿಯನ್ ಡಾಲರ್​ಗೆ ತಲುಪಿದೆ. ಒಟ್ಟಾರೆ ಆಮದು ಶೇಕಡಾ 4.3ರಷ್ಟು ಇಳಿಕೆಯಾಗಿದ್ದು, ಕಳೆದ ವರ್ಷ ಇದೇ ತಿಂಗಳಲ್ಲಿ ಇದ್ದ ಆಮದು ಪ್ರಮಾಣ 56.95 ಬಿಲಿಯನ್ ಡಾಲರ್​ಗೆ ಹೋಲಿಸಿದರೆ ಪ್ರಸ್ತುತ 54.48 ಬಿಲಿಯನ್ ಡಾಲರ್​ಗೆ ಇಳಿಕೆಯಾಗಿದೆ.

ಅಕ್ಟೋಬರ್​ನಲ್ಲಿ 7.2 ಬಿಲಿಯನ್ ಡಾಲರ್ ಇದ್ದ ಚಿನ್ನದ ಆಮದು ನವೆಂಬರ್​ನಲ್ಲಿ 3.45 ಬಿಲಿಯನ್ ಡಾಲರ್​ಗೆ ಇಳಿದಿದೆ. ಹಾಗೆಯೇ ಕಚ್ಚಾ ತೈಲ ಬೆಲೆಗಳ ಕುಸಿತದಿಂದಾಗಿ ತೈಲ ಆಮದು ಹಿಂದಿನ ತಿಂಗಳಿಗೆ ಹೋಲಿಸಿದರೆ ನವೆಂಬರ್​ನಲ್ಲಿ ಶೇಕಡಾ 22ರಷ್ಟು ಇಳಿಕೆಯಾಗಿ 13.71 ಬಿಲಿಯನ್ ಡಾಲರ್​ಗೆ ತಲುಪಿದೆ. ಎಲೆಕ್ಟ್ರಾನಿಕ್ ಸರಕುಗಳ ಆಮದು ಕೂಡ ಶೇಕಡಾ 17ರಷ್ಟು ಇಳಿಕೆಯಾಗಿ 6.49 ಬಿಲಿಯನ್ ಡಾಲರ್​ಗೆ ತಲುಪಿದೆ.

ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ನವೆಂಬರ್ ಅವಧಿಯ ಅಂಕಿಅಂಶಗಳು ರಫ್ತು ಶೇಕಡಾ 6.51ರಷ್ಟು ಕುಸಿತವಾಗಿ 278.8 ಬಿಲಿಯನ್ ಡಾಲರ್​ಗೆ ತಲುಪಿದೆ ಎಂದು ತೋರಿಸಿವೆ. ಎಂಟು ತಿಂಗಳ ಅವಧಿಯಲ್ಲಿ ಆಮದು ಶೇಕಡಾ 8.67 ರಷ್ಟು ಇಳಿದು 445.15 ಬಿಲಿಯನ್ ಡಾಲರ್​ಗೆ ತಲುಪಿದೆ. ಜಾಗತಿಕ ಮಂದಗತಿಯ ಹೊರತಾಗಿಯೂ ಭಾರತದ ರಫ್ತು ವಲಯ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವಾಣಿಜ್ಯ ಕಾರ್ಯದರ್ಶಿ ಸುನಿಲ್ ಬಾರ್ತ್ವಾಲ್ ಹೇಳಿದ್ದಾರೆ.

ಅಕ್ಟೋಬರ್​ನಲ್ಲಿ ಸರಕುಗಳ ರಫ್ತು ಪ್ರಮಾಣ ಶೇಕಡಾ 6.21ರಷ್ಟು ಏರಿಕೆಯಾಗಿ 33.57 ಬಿಲಿಯನ್ ಡಾಲರ್​ಗೆ ತಲುಪಿತ್ತು. ಆದಾಗ್ಯೂ ವ್ಯಾಪಾರ ಕೊರತೆಯು ಆ ತಿಂಗಳಲ್ಲಿ ದಾಖಲೆಯ ಗರಿಷ್ಠ 31.46 ಬಿಲಿಯನ್ ಡಾಲರ್​ಗೆ ತಲುಪಿತ್ತು. ಜಾಗತಿಕ ಆರ್ಥಿಕ ಕುಸಿತ ಮತ್ತು ರಷ್ಯಾ-ಉಕ್ರೇನ್ ಯುದ್ಧ ಮತ್ತು ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷದ ಹಿನ್ನೆಲೆಯಲ್ಲಿ ಅನಿಶ್ಚಿತ ಭೌಗೋಳಿಕ ರಾಜಕೀಯ ಪರಿಸ್ಥಿತಿಯಿಂದಾಗಿ ರಫ್ತುಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ಒಂದು ದೇಶ ಮಾಡಿಕೊಳ್ಳುವ ಆಮದುಗಳು ಒಂದು ಹಣಕಾಸು ವರ್ಷದಲ್ಲಿ ಆ ದೇಶ ಮಾಡಿದ ರಫ್ತುಗಳಿಗಿಂತ ಹೆಚ್ಚಾದಾಗ ಅದನ್ನು ವ್ಯಾಪಾರ ಕೊರತೆ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ಸ್ವಿಗ್ಗಿ- 2023: ಈ ವರ್ಷವೂ ಬಿರಿಯಾನಿಯೇ ಟಾಪ್ ಟ್ರೆಂಡಿಂಗ್: ಕೇಕ್ ಕ್ಯಾಪಿಟಲ್ ಬೆಂಗಳೂರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.