ETV Bharat / business

ನಿಮ್ಮ ಮಕ್ಕಳ ಶಿಕ್ಷಣಕ್ಕಾಗಿ ಮಾಡುವ ವೆಚ್ಚದಿಂದಲೂ ನೀವು ತೆರಿಗೆ ಉಳಿಸಬಹುದು! - ಆದಾಯ ತೆರಿಗೆ ಕಾಯಿದೆ ಸೆಕ್ಷನ್ 10

ಮಕ್ಕಳ ಶಿಕ್ಷಣಕ್ಕಾಗಿ ಪಾವತಿಸುವ ಬೋಧನಾ ಶುಲ್ಕಕ್ಕೆ ಆದಾಯ ತೆರಿಗೆ ವಿನಾಯಿತಿ ಪಡೆಯಬಹುದು. ಅಲ್ಲದೇ, ಕಂಪನಿಗಳು ಪಾವತಿಸುವ ಶೈಕ್ಷಣಿಕ ಸಾಲಗಳು ಮತ್ತು ಮಕ್ಕಳ ಭತ್ಯೆಗಳ ಮೇಲಿನ ಬಡ್ಡಿಯ ಮೇಲೆಯೂ ವಿನಾಯಿತಿಗಳನ್ನು ಪಡೆಯಬಹುದು. ಹಣಕಾಸಿನ ವರ್ಷ 2022-`23 ಶೀಘ್ರವಾಗಿ ಅಂತ್ಯಗೊಳ್ಳುತ್ತಿರುವುದರಿಂದ ಗರಿಷ್ಠ ಸಂಭವನೀಯ ತೆರಿಗೆಯನ್ನು ಉಳಿಸಲು ಈ ಎಲ್ಲಾ ಅಂಶಗಳನ್ನು ಪರಿಶೀಲಿಸುವುದು ಉತ್ತಮ.

How to save tax with your children's education
ನಿಮ್ಮ ಮಕ್ಕಳ ಶಿಕ್ಷಣಕ್ಕಾಗಿ ಮಾಡುವ ವೆಚ್ಚದಿಂದಲೂ ನೀವು ತೆರಿಗೆ ಉಳಿಸಬಹುದು!
author img

By

Published : Feb 3, 2023, 9:10 AM IST

ಹೈದರಾಬಾದ್: ಮಕ್ಕಳಿಗೆ ಉಜ್ವಲ ಭವಿಷ್ಯ ರೂಪಿಸಲು ಪ್ರತಿಯೊಬ್ಬರೂ ಮಕ್ಕಳ ಶಿಕ್ಷಣಕ್ಕಾಗಿ ಗಣನೀಯ ಹೂಡಿಕೆ ಮಾಡುತ್ತಾರೆ. ಸರ್ಕಾರಗಳು ಸಹ ತೆರಿಗೆ ಪಾವತಿದಾರರಿಗೆ ಮಕ್ಕಳ ಶಿಕ್ಷಣದ ವೆಚ್ಚದ ಮೇಲೆ ಹೆಚ್ಚಿನ ವಿನಾಯಿತಿಗಳನ್ನು ನೀಡುತ್ತವೆ. ಆರ್ಥಿಕ ವರ್ಷವು ಶೀಘ್ರದಲ್ಲೇ ಕೊನೆಗೊಳ್ಳಲಿರುವುದರಿಂದ ಈ ವಿನಾಯಿತಿಯನ್ನು ಸಂಪೂರ್ಣವಾಗಿ ಹೇಗೆ ಕ್ಲೈಮ್ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಇಲ್ಲಿದೆ ಕೆಲ ಇಂಟ್ರೆಸ್ಟಿಂಗ್​ ಮಾಹಿತಿ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ವಿನಾಯಿತಿಗೆ ಅಗತ್ಯವಿರುವ ಹೂಡಿಕೆಗಳನ್ನು ಮಾಡಲು ಮಾರ್ಚ್ 31, 2023 ಕೊನೆಯ ದಿನಾಂಕವಾಗಿದೆ. ನೀವು ತೆರಿಗೆ ವಿನಾಯಿತಿಗಳಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಕಚೇರಿಗೆ ಸಲ್ಲಿಸಿರಬಹುದು. ಒಮ್ಮೆ ಅವೆಲ್ಲವೂ ಸರಿಯಾಗಿವೆಯೇ ಮತ್ತು ಸಂಪೂರ್ಣ ತೆರಿಗೆ ವಿನಾಯಿತಿಗಳು ಲಭ್ಯವಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳುವುದು ಒಳಿತು.

ನಿಮ್ಮ ಮಕ್ಕಳ ಬೋಧನಾ ಶುಲ್ಕದ ಮೇಲೆಯೂ ವಿನಾಯಿತಿ: ಹೂಡಿಕೆಯ ಹೊರತಾಗಿ ತೆರಿಗೆ ವಿನಾಯಿತಿಗಾಗಿ ಕೆಲವು ವೆಚ್ಚಗಳನ್ನು ಸಹ ಪಡೆಯಬಹುದು. ಅದರಲ್ಲಿ ಮಕ್ಕಳ ಬೋಧನಾ ಶುಲ್ಕವೂ ಒಂದು. ಮಾನ್ಯತೆ ಪಡೆದ ಶಾಲೆಗಳು, ಕಾಲೇಜುಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನಕ್ಕಾಗಿ ಪಾವತಿಸಿದ ಶುಲ್ಕವನ್ನು ಈ ಉದ್ದೇಶಕ್ಕಾಗಿ ತೋರಿಸಬಹುದು. ಇದು ಗರಿಷ್ಠ ಎರಡು ಮಕ್ಕಳಿಗೆ ಅನ್ವಯಿಸುತ್ತದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ ಪ್ರಕಾರ ಈ ವಿನಾಯಿತಿಯನ್ನು 1,50,000 ರೂ. ವರೆಗೆ ಪಡೆಯಬಹುದು.

ಈ ವಿನಾಯಿತಿ ಸೌಲಭ್ಯವು ಪ್ರತಿಯೊಬ್ಬ ತೆರಿಗೆದಾರರಿಗೂ ಲಭ್ಯವಿದೆ. ಆದರೆ, ವಿದೇಶದಲ್ಲಿ ಓದುತ್ತಿರುವ ಮಕ್ಕಳಿಗೆ ಪಾವತಿಸುವ ಶುಲ್ಕಕ್ಕೆ ಇದು ಅನ್ವಯಿಸುವುದಿಲ್ಲ. ಮಕ್ಕಳ ಕಲ್ಯಾಣಕ್ಕಾಗಿ ಉದ್ಯೋಗದಾತರು ನೀಡುವ ಯಾವುದೇ ವಿಶೇಷ ಭತ್ಯೆಗೂ ವಿನಾಯಿತಿ ನೀಡಲಾಗಿದೆ. ಆದರೆ, ಇದು ನಿರ್ದಿಷ್ಟ ಮಿತಿಗಳಿಗೆ ಒಳಪಟ್ಟಿರುತ್ತದೆ. ಆದಾಯ ತೆರಿಗೆ ಕಾಯಿದೆ ಸೆಕ್ಷನ್ 10 ರ ಪ್ರಕಾರ ವರ್ಷಕ್ಕೆ 1,200 ರೂ.ಗಿಂತ ಹೆಚ್ಚಿನ ವಿನಾಯಿತಿಯನ್ನು ಶಿಕ್ಷಣ ಭತ್ಯೆ ಅಡಿ ಮತ್ತು ರೂ 3,600 ಹಾಸ್ಟೆಲ್ ಭತ್ಯೆಯ ಅಡಿಯೂ ಪಡೆಯಬಹುದು.

ಭತ್ಯೆ ಹಾಗೂ ಶುಲ್ಕದ ನಡುವೆ ವ್ಯತ್ಯಾಸವಿದೆ; ಭತ್ಯೆಗಳು ಮತ್ತು ಬೋಧನಾ ಶುಲ್ಕಗಳ ನಡುವೆ ವ್ಯತ್ಯಾಸವಿದೆ. ಬೋಧನಾ ಶುಲ್ಕದ ಮೇಲಿನ ವಿನಾಯಿತಿಗಳನ್ನು ಸೆಕ್ಷನ್ 80C ಅಡಿ ಕ್ಲೈಮ್ ಮಾಡಬಹುದು. ಆದರೆ, ಶಿಕ್ಷಣ ಭತ್ಯೆಗಳಿಗೆ ಸೆಕ್ಷನ್ 10 ರ ಅಡಿಯಲ್ಲಿ ವಿನಾಯಿತಿ ಪಡೆಯಬಹುದು. ಅದೇ ರೀತಿ, ಶಿಕ್ಷಣ ಸಾಲದ ಮೇಲಿನ ವಿನಾಯಿತಿಯನ್ನು ಮತ್ತೊಂದು ವಿಭಾಗದ ಅಡಿಯಲ್ಲಿ ಕ್ಲೈಮ್ ಮಾಡಬಹುದು.

ನೀವು ಶೈಕ್ಷಣಿಕ ಸಾಲವನ್ನು ತೆಗೆದುಕೊಂಡಿದ್ದರೆ, ಆರ್ಥಿಕ ವರ್ಷದಲ್ಲಿ ಅದಕ್ಕೆ ಪಾವತಿಸಿದ ಬಡ್ಡಿಯ ಮೇಲೆ ಸಂಪೂರ್ಣ ವಿನಾಯಿತಿಯನ್ನು ಕೂಡಾ ಪಡೆಯಬಹುದು. ಸೆಕ್ಷನ್ '80E' ಅಡಿಯಲ್ಲಿ ಕ್ಲೈಮ್ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ತಮ್ಮ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಸಾಲ ಪಡೆಯುತ್ತಿದ್ದಾರೆ. ನಮ್ಮ ದೇಶದಲ್ಲಿ ಅಥವಾ ವಿದೇಶದಲ್ಲಿ ಓದಲು ಸಾಲ ತೆಗೆದುಕೊಂಡರೂ ಈ ವಿನಾಯಿತಿ ಲಭ್ಯವಿದೆ.

ಶೈಕ್ಷಣಿಕ ಸಾಲಗಳ ಬಡ್ಡಿಯ ಮೇಲಿನ ವಿನಾಯಿತಿಯು ಬಡ್ಡಿ ಪಾವತಿಯ ಪ್ರಾರಂಭದ ನಂತರ ಎಂಟು ವರ್ಷಗಳವರೆಗೆ ಅನ್ವಯಿಸುತ್ತದೆ. ಅಲ್ಲದೇ, ತೆರಿಗೆ ಪಾವತಿದಾರನು ತನ್ನ ಸ್ವಂತ ಶಿಕ್ಷಣಕ್ಕಾಗಿ, ತನ್ನ ಸಂಗಾತಿ ಮತ್ತು ಮಕ್ಕಳಿಗಾಗಿ ಶಿಕ್ಷಣವನ್ನು ತೆಗೆದುಕೊಳ್ಳಬಹುದು.

ಇದನ್ನು ಓದಿ:ಅದಾನಿ ಗ್ರೂಪ್​​ನೊಂದಿಗಿನ ವ್ಯವಹಾರದ ಮಾಹಿತಿ ನೀಡುವಂತೆ ಎಲ್ಲ ಬ್ಯಾಂಕ್​ಗಳಿಗೆ ಆರ್​ಬಿಐ ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.