ETV Bharat / business

ಉತ್ತಮ ಆರ್ಥಿಕ ಹೂಡಿಕೆ ಯೋಜನೆ ಮೂಲಕ ಸುರಕ್ಷಿತವಾಗಿರುವುದು ಹೇಗೆ? ಇಲ್ಲಿದೆ ಸಲಹೆ - ಹಣದುಬ್ಬರ ಭಾರತದಲ್ಲಿ

ಆರ್ಥಿಕ ಯೋಜನೆ ಮತ್ತು ಹೂಡಿಕೆ ಎರಡು ಒಂದೇ ಅಲ್ಲ. ಹೂಡಿಕೆ ಆರ್ಥಿಕ ಯೋಜನೆಯ ಒಂದು ಭಾಗ. ಜೀವನದ ವಿವಿಧ ಹಂತದಲ್ಲಿ ಅವಶ್ಯವಾದ ಹಣವನ್ನು ಹೇಗೆ ಸಂಗ್ರಹಿಸಬೇಕು ಎಂಬ ಯೋಜನೆ ರೂಪಿಸಬೇಕು.

Sound financial plans key to making sound investments
how-to-be-safe-with-a-good-financial-investment-plan
author img

By

Published : Dec 21, 2022, 12:40 PM IST

ಹೈದ್ರಾಬಾದ್​: ಯಾವುದೇ ಘಟನೆ ನಡೆಯುವುದರ ಹಿಂದೆ ಒಂದು ಕಾರಣ ಇರುತ್ತದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಷೇರು ಮಾರುಕಟ್ಟೆ ಹೊಸ ಏರಿಕೆ ಮತ್ತು ಬಡ್ಡಿ ದರ ಏರಿಕೆ ಕಾಣುತ್ತಿದೆ. ಬೇರೆ ದೇಶದಲ್ಲಿ ಕಾಣುತ್ತಿರುವಂತೆ ಹಣದುಬ್ಬರ ಭಾರತದಲ್ಲಿ ಕಾಣುವುದಿಲ್ಲ ಎಂಬುದು ತಜ್ಞರ ಮಾತು. ಆದ್ದರಿಂದ ಹಣಕಾಸಿನ ಯೋಜನೆಯಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕಿದೆ. ಆರ್ಥಿಕ ಗುರಿಗಳನ್ನು ರೂಪಿಸುವ ಮೂಲಕ ದೀರ್ಘಕಾಲಿನ ಉತ್ತಮ ಹೂಡಿಕೆ ಮಾಡಬಹುದಾಗಿದೆ.

ಇತ್ತೀಚಿನ ಅಂಕಿ ಅಂಶದ ಪ್ರಕಾರ, ದೀರ್ಘಕಾಲದ ಹೂಡಿಕೆಗೆ ಮ್ಯೂಚುವಲ್​ ಫಂಡ್​ ಉತ್ತಮ ಆಯ್ಕೆ. ಇದರಲ್ಲಿ ಕೆಲವು ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಆರ್ಥಿಕ ಯೋಜನೆ ಮತ್ತು ಹೂಡಿಕೆ ಎರಡು ಒಂದೇ ಅಲ್ಲ. ಹೂಡಿಕೆ ಆರ್ಥಿಕ ಯೋಜನೆಯ ಒಂದು ಭಾಗ. ಜೀವನದ ವಿವಿಧ ಹಂತದಲ್ಲಿ ಅವಶ್ಯವಾದ ಹಣವನ್ನು ಹೇಗೆ ಸಂಗ್ರಹಿಸಬೇಕು ಎಂಬ ಯೋಜನೆ ರೂಪಿಸಬೇಕು. ಇದು ಯಾವ ರೀತಿಯ ಹೂಡಿಕೆ ಮಾಡಬಹುದು ಎಂಬ ಆಯ್ಕೆಗೆ ಸ್ಪಷ್ಟತೆಯನ್ನು ನೀಡುತ್ತದೆ. ಜೊತೆಗೆ ಅಲ್ಪ ಮತ್ತು ದೀರ್ಘಾವಾಧಿಗೆ ಗುರಿ ಸಾಧಿಸಲು ಸಹಾಯ ಮಾಡುತ್ತದೆ.

ಆರ್ಥಿಕ ಗುರಿಗಳು ಅವಶ್ಯ: ಸರಿಯಾದ ಯೋಜನೆ ಇಲ್ಲದೇ ಹೋದರೆ, ಆದಾಯ, ಖರ್ಚು, ಹೂಡಿಕೆ ಮೇಲೆ ಯಾವುದೇ ನಿಯಂತ್ರಣವಿರುವುದಿಲ್ಲ. ಮೊದಲು ಜೀವನದಲ್ಲಿ ಆರ್ಥಿಕ ಗುರಿಗಳ ಬಗ್ಗೆ ಗಮನಹರಿಸಬೇಕು. ಮನೆ ಕೊಳ್ಳುವುದು, ಮಕ್ಕಳ ಉನ್ನತ ಶಿಕ್ಷಣ, ಮದುವೆ ಮತ್ತು ನಿವೃತ್ತಿ ಬಗ್ಗೆ ಯೋಜನೆ ರೂಪಿಸಬೇಕು. ಗುರಿಗಳನ್ನು ನಿರ್ಧರಿಸುವುದು ಮತ್ತು ಅವುಗಳಿಗೆ ಅಗತ್ಯವಿರುವ ಮೊತ್ತವನ್ನು ಅಂದಾಜು ಮಾಡುವುದು ಬಹಳ ಮುಖ್ಯ. ಈ ವಿಷಯಗಳನ್ನು ಮೊದಲೇ ಕಾಳಜಿವಹಿಸಬೇಕು. ಇದರಿಂದ ಸಮಯ ಬಂದಾಗ ಉತ್ತಮ ಫಲಿತಾಂಶವನ್ನು ಕಾಣಬಹುದಾಗಿದೆ.

ಆದ್ಯತೆ ಅನುಸಾರ ಹೂಡಿಕೆ: ಯಾವುದನ್ನು ಮೊದಲು ಮಾಡಬೇಕು. ಯಾವುದನ್ನು ಮುಂದೂಡಬೇಕು ಎಂದು ಗುರಿಗಳ ಆದ್ಯತೆ ನಿರ್ಧರಿಸುವುದು ಕಷ್ಟಕರವಾಗಿರುತ್ತದೆ. ಇರುವ ಸಂಪತ್ತು ಮತ್ತು ಭವಿಷ್ಯದ ಹೂಡಿಕೆ ಆಧಾರದ ಮೇಲೆ ಇದನ್ನು ನಿರ್ಧರಿಸಬೇಕು. ಎಲ್ಲಾ ಗುರಿಗಳಿಗೂ ಒಂದೇ ಸಮಯವಿರುವುದಿಲ್ಲ. ಕೆಲವರು 3-5 ವರ್ಷದಲ್ಲಿ ಮನೆ ಕೊಳ್ಳಲು ಯೋಚಿಸುತ್ತಾರೆ. ಇತರರಿಗೆ ಮಕ್ಕಳ ಶಿಕ್ಷಣ ಮತ್ತಿತರರು 30 ವರ್ಷದ ಬಳಿಕದ ನಿವೃತ್ತಿ ಬಗ್ಗೆ ಚಿಂತಿಸುತ್ತಾರೆ. ಕಡಿಮೆ ಅವಧಿ ಗುರಿಗಳಿಗಾಗಿ ದೀರ್ಘಾವಧಿ ಹೂಡಿಕೆಗಳನ್ನು ಮುಂದೂಡಬೇಡಿ. ಕೆಲವರು ಮಕ್ಕಳ ಶಿಕ್ಷಣಕ್ಕಾಗಿ ನಿವೃತ್ತಿ ಹೂಡಿಕೆ ಬಗ್ಗೆ ಗಮನಹರಿಸುವುದಿಲ್ಲ.

ದೀರ್ಘಾಕಾಲದ ಹೂಡಿಕೆಗೆ ಗಮನ: ಈಕ್ವಿಟಿಗಳು ದೀರ್ಘಕಾಲದ ಹೂಡಿಕೆಗಳಾಗಿವೆ. ಇದು ಹಣದುಬ್ಬರವನ್ನು ಮೀರಿದ ಆದಾಯ ನೀಡುತ್ತದೆ. ಮಾರುಕಟ್ಟೆಯಲ್ಲಿ ದೀರ್ಘ ಕಾಲ ಉಳಿಯಲು ಇವುಗಳನ್ನು ಅಯ್ಕೆ ಮಾಡಬೇಕು. ಕೆಲವರು ನೇರವಾಗಿ ಶೇರ್​ಗಳ ಮೇಲೆ ಹೂಡಿಕೆ ಮಾಡುತ್ತಾರೆ ಅಥವಾ ಈಕ್ವಿಟಿ ಫಂಡ್​ ಮೂಲಕ ಪರೋಕ್ಷವಾಗಿ ಹೂಡಿಕೆ ಮಾಡುತ್ತಾರೆ. ಸಣ್ಣ ಮತ್ತು ಮಧ್ಯಮದ ಗುರಿಗಳಿಗೆ ಕಡಿಮೆ ಅಪಾಯದಂತಹ ಬ್ಯಾಂಕ್​ಗಳ ನಿಶ್ಚಿತ ಠೇವಣಿ, ಬಾಂಡ್​ ಅಥವಾ ಸಾಲದ ಯೋಜನೆಯನ್ನು ಪಡೆಯಬಹುದು. ಹೂಡಿಕೆ ವೆಳೆ ತೆರಿಗೆ ಹೊರೆ, ಅವಧಿ ಮುಂತಾದವುಗಳ ಬಗ್ಗೆ ಗಮನಹರಿಸಬೇಕು.

ಖರ್ಚು-ವೆಚ್ಚದ ಲೆಕ್ಕಾಚಾರ: ಗುರಿಗಳನ್ನು ನಿರ್ಧರಿಸಿದ ಬಳಿಕ ಅವುಗಳನ್ನು ಆದ್ಯತೆ ಅನುಗುಣವಾಗಿ ಯೋಜನೆಗಳ ಅನುಸಾರ ಹೂಡಿಕೆ ಮಾಡಬೇಕು. ಹಣದುಬ್ಬರದಲ್ಲಿ ಪ್ರತಿಯೊಂದು ಖರ್ಚು-ವೆಚ್ಚಗಳನ್ನು ಲೆಕ್ಕಾಚಾರ ನಡೆಸಬೇಕು. ಸದ್ಯ ನಿಮ್ಮ ಮಗಳ ಮದುವೆಗೆ 25 ಲಕ್ಷ ಖರ್ಚಾಗುತ್ತದೆ ಎಂದರೆ 5ರಷ್ಟು ಹಣದುಬ್ಬರ ಲೆಕ್ಕ ಹಾಕಿ 21 ವರ್ಷಗಳ ನಂತರ ಎಷ್ಟಾಗಬಹುದು ಎಂಬುದನ್ನು ಲೆಕ್ಕ ಹಾಕಬೇಕಾಗುತ್ತದೆ. ಇದನ್ನು 12 ಪ್ರತಿಶತದ ರಿಟರ್ನ್​ ಯೋಜನೆ ಅನುಸಾರ ಹೂಡಿಕೆ ಮಾಡಬೇಕು. ಎಲ್ಲಾ ಅವಶ್ಯಕತೆಗಳನ್ನು ಇದೇ ರೀತಿ ಲೆಕ್ಕಾಚಾರ ನಡೆಸಬೇಕು.

ಮಾರುಕಟ್ಟೆಯಲ್ಲಿ ಏರಿಳಿತಗಳು ಸಾಮಾನ್ಯ. ದೀರ್ಘಾವಧಿ ಈಕ್ವಿಟಿ ಫಂಡ್​ಗಳನ್ನು ಆಯ್ಕೆ ಮಾಡಿದಾಗ ಕಡಿಮೆ ಅವಧಿಯ ನಷ್ಟದ ಬಗ್ಗೆ ನಿರ್ಲಕ್ಷ್ಯವಹಿಸಬೇಕು. ನಿಯಮಿತ ಹೂಡಿಕೆ ಮಾಡುವ ಮೂಲಕ ಆರ್ಥಿಕ ಶಿಸ್ತನ್ನು ಕಾಪಾಡುವುದು ಅವಶ್ಯ. ಹೂಡಿಕೆ ಮಾಡುವ ಮುನ್ನ ಪ್ರತಿಯೊಬ್ಬ ಗಳಿಕೆದಾರರು ತಮ್ಮ ವಾರ್ಷಿಕ ಆದಾಯ ಮತ್ತು ಹೊಣೆಗಾರಿಕೆಗಳಿಗೆ ಅನುಗುಣವಾಗಿ ಸೂಕ್ತ ಮೊತ್ತಕ್ಕೆ ಟರ್ಮ್ ಪಾಲಿಸಿಯನ್ನು ತೆಗೆದುಕೊಳ್ಳುವುದು ಅತ್ಯಗತ್ಯವಾಗಿರುತ್ತದೆ.

ಇದನ್ನೂ ಓದಿ: ಕ್ರೆಡಿಟ್​ ಕಾರ್ಡ್​ ಪಯೋಜನಗಳೇನು? ಮಿತಿಗಳೇನು?: ಹೇಗೆಲ್ಲ ಬಳಸಿದರೆ ಉತ್ತಮ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.