ETV Bharat / business

ಕ್ರಿಪ್ಟೊಕರೆನ್ಸಿ ನಿರ್ಬಂಧಕ್ಕೆ ಜಾಗತಿಕ ಒಮ್ಮತ ಅಗತ್ಯ: ಸಚಿವೆ ಸೀತಾರಾಮನ್ - FSB ವರದಿ ಮತ್ತು IMF ನ ವರದಿಯ

ಕ್ರಿಪ್ಟೊ ಕರೆನ್ಸಿಯ ಮೇಲೆ ನಿರ್ಬಂಧ ವಿಧಿಸಬೇಕಾದರೆ ಜಾಗತಿಕ ಒಮ್ಮತ ಅಗತ್ಯ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಪಾದಿಸಿದ್ದಾರೆ.

global-consensus-needed-to-ban-cryptocurrency-minister-sitharaman
ಕ್ರಿಪ್ಟೊಕರೆನ್ಸಿ ನಿರ್ಬಂಧಕ್ಕೆ ಜಾಗತಿಕ ಒಮ್ಮತ ಅಗತ್ಯ: ಸಚಿವೆ ಸೀತಾರಾಮನ್
author img

By

Published : Apr 23, 2023, 6:01 PM IST

ಬೆಂಗಳೂರು: ಜಾಗತಿಕ ಒಮ್ಮತವಿಲ್ಲದೆ ಕ್ರಿಪ್ಟೊಕರೆನ್ಸಿಯ ಮೇಲೆ ನಿರ್ಬಂಧ ಹೇರುವ ಕ್ರಮ ಪರಿಣಾಮಕಾರಿಯಾಗದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಕ್ರಿಪ್ಟೋ ನಿಯಂತ್ರಣಕ್ಕೆ ಜಾಗತಿಕ ಒಮ್ಮತ ಅಗತ್ಯ. ಭಾರತವು ಅದರ ಮೇಲೆ ಯಾವುದೇ ಕ್ರಮ ಕೈಗೊಳ್ಳುವ ಮೊದಲು ಜಾಗತಿಕ ಒಮ್ಮತವನ್ನು ಮೂಡಿಸಬೇಕಾಗಬಹುದು ಮತ್ತು ಇದಕ್ಕಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಅದನ್ನು ನಿಯಂತ್ರಿಸುವುದು ಪರಿಣಾಮಕಾರಿಯಾಗಿರುವುದಿಲ್ಲ ಎಂದಿದ್ದಾರೆ. ಆದರೆ ಹಾಗಂತ ಡಿಸ್ಟ್ರಿಬ್ಯೂಟೆಡ್ ಲೆಡ್ಜರ್ ತಂತ್ರಜ್ಞಾನ (ಕ್ರಿಪ್ಟೊ ತಂತ್ರಜ್ಞಾನ) ವನ್ನು ನಿಯಂತ್ರಿಸಬೇಕು ಎಂಬುದು ಇದರ ಅರ್ಥವಲ್ಲ ಎಂದು ಸಚಿವರು ಹೇಳಿದರು.

ಭಾರತವು ಪ್ರಸ್ತುತ ಅಧ್ಯಕ್ಷ ಸ್ಥಾನವನ್ನು ಹೊಂದಿರುವ G20 ಯಲ್ಲಿ ಇದು ಭಾರತದ ಪ್ರಸ್ತಾಪನೆಯಾಗಿದೆ ಮತ್ತು ಅದನ್ನು ಮಂಡಳಿಯಲ್ಲಿ ತೆಗೆದುಕೊಳ್ಳಲಾಗಿದೆ. ಈ ವಿಷಯವನ್ನು G20 ಈ ವರ್ಷದ ತನ್ನ ಕಾರ್ಯಸೂಚಿಯಲ್ಲಿ ಇಟ್ಟುಕೊಂಡಿರುವುದಕ್ಕೆ ಸಂತೋಷವಾಗಿದೆ. ಐಎಂಎಫ್ ಕ್ರಿಪ್ಟೋ ಕರೆನ್ಸಿ ಕುರಿತು ತನ್ನ ವರದಿಯನ್ನು ನೀಡಿದೆ. ಕ್ರಿಪ್ಟೊ ಸ್ಥೂಲ ಆರ್ಥಿಕ ಸ್ಥಿರತೆಯ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರಬಹುದು ಎಂಬುದನ್ನು ವರದಿಯಲ್ಲಿ ತಿಳಿಸಲಾಗಿದೆ. G20 ಸ್ಥಾಪಿಸಿದ ಹಣಕಾಸು ಸ್ಥಿರತೆ ಮಂಡಳಿ (ಎಫ್‌ಎಸ್‌ಬಿ) ಆರ್ಥಿಕ ಸ್ಥಿರತೆಯ ಬಗ್ಗೆಯೂ ಗಮನಹರಿಸುವ ವರದಿಯನ್ನು ನೀಡಲು ಒಪ್ಪಿಕೊಂಡಿದೆ ಎಂದು ಸೀತಾರಾಮನ್ ಹೇಳಿದರು.

ಹಣಕಾಸು ಮಂತ್ರಿಗಳು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್​ಗಳು ಜುಲೈನಲ್ಲಿ ನಡೆಯಲಿರುವ G20 ಸಭೆಯಲ್ಲಿ ಭೇಟಿಯಾಗಲಿದ್ದಾರೆ. ಆಗ ಅವರ FSB ವರದಿ ಮತ್ತು IMF ನ ವರದಿಯ ಬಗ್ಗೆ ಚರ್ಚಿಸಲಾಗುವುದು. ನಂತರ ಸೆಪ್ಟೆಂಬರ್​ನಲ್ಲಿ G20 ರಾಷ್ಟ್ರಗಳ ಪ್ರಧಾನ ಮಂತ್ರಿಗಳು ಮತ್ತು ಅಧ್ಯಕ್ಷರ ಶೃಂಗಸಭೆ ಭಾರತದಲ್ಲಿ ನಡೆಯಲಿದೆ ಎಂದು ಅವರು ಹೇಳಿದರು. ಕರ್ನಾಟಕದ ಚಿಂತಕರ ವೇದಿಕೆ (Thinkers Forum, Karnataka) ಸಂಘಟನೆಯೊಂದಿಗೆ ನಡೆಸಿದ ಸಂವಾದದಲ್ಲಿ ಸಚಿವೆ ಸೀತಾರಾಮನ್ ಕ್ರಿಪ್ಟೊ ಕರೆನ್ಸಿ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಕ್ರಿಪ್ಟೊ ಕರೆನ್ಸಿಗಳು ಸಂಪೂರ್ಣವಾಗಿ ಡಿಜಿಟಲ್ ಕರೆನ್ಸಿಗಳಾಗಿವೆ ಮತ್ತು ಸಂಪೂರ್ಣವಾಗಿ ತಂತ್ರಜ್ಞಾನ ಆಧರಿತವಾಗಿವೆ. ಇವುಗಳ ತಂತ್ರಜ್ಞಾನ ಎಷ್ಟೊಂದು ಸಂಕೀರ್ಣವಾಗಿದೆ ಎಂದರೆ ಕೆಲವೊಮ್ಮೆ ಇವುಗಳ ಗುರುತನ್ನು ಖಾತರಿಪಡಿಸುವುದು ಸಹ ಕಷ್ಟವಾಗುತ್ತದೆ. ಹೀಗಾಗಿ ಎಲ್ಲ ದೇಶಗಳು ಒಮ್ಮತಕ್ಕೆ ಬಂದರೆ ಮಾತ್ರ ಈ ವಿಷಯದಲ್ಲಿ ಏನಾದರೂ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಸಚಿವೆ ತಿಳಿಸಿದರು.

ತಂತ್ರಜ್ಞಾನ ಆಧರಿತ ಕ್ರಿಪ್ಟೊ ಆಸ್ತಿಗಳನ್ನು ಯಾವುದೇ ಒಂದು ದೇಶವು ಒಬ್ಬಂಟಿಯಾಗಿ ನಿಯಂತ್ರಿಸಲು ಸಾಧ್ಯವಿಲ್ಲ. ಏಕೆಂದರೆ ತಂತ್ರಜ್ಞಾನಕ್ಕೆ ಯಾವುದೇ ಗಡಿಗಳಿಲ್ಲ. ಅದು ಎಲ್ಲಿಗೆ ಬೇಕಾದರೂ ಸಾಗಬಹುದು. ಹಾಗಾಗಿ ಇದಕ್ಕಾಗಿ ಎಲ್ಲ ದೇಶಗಳು ಒಂದಾಗದಿದ್ದರೆ ಅದರ ಮೇಲೆ ಕೈಗೊಳ್ಳುವ ಯಾವುದೇ ಕ್ರಮ ಪರಿಣಾಮಕಾರಿಯಾಗಿರದು ಎಂದು ಅವರು ಹೇಳಿದರು. ಕೋವಿಡ್ ಸಾಂಕ್ರಾಮಿಕ ಬಿಕ್ಕಟ್ಟು, ರಷ್ಯಾ-ಉಕ್ರೇನ್ ಯುದ್ಧ ಮತ್ತು ಅದರ ಪರಿಣಾಮಗಳ ಮಧ್ಯೆ ತನ್ನದೇ ಆದ ಮಾರ್ಗದಲ್ಲಿ ಮುನ್ನಡೆದ ಭಾರತವನ್ನು ಜಾಗತಿಕ ಸಮುದಾಯ ಆಸಕ್ತಿಯಿಂದ ಗಮನಿಸುತ್ತಿದೆ ಎಂಬುದನ್ನು ಒತ್ತಿ ಹೇಳಿದ ಸೀತಾರಾಮನ್, ಇಂದು ಭಾರತದಲ್ಲಿ ಉಂಟಾಗಿರುವ ಹಣದುಬ್ಬರವು ಇಂಧನ ಮತ್ತು ರಸಗೊಬ್ಬರಗಳ ಕಾರಣದಿಂದ ಉಂಟಾಗಿದ್ದು, ಇದು ಹೊರಗಿನಿಂದ ಬಂದಿರುವ ಹಣದುಬ್ಬರವಾಗಿದೆ ಎಂದರು.

ಇದನ್ನೂ ಓದಿ : ಭಾರತೀಯ ರೂಪಾಯಿಯಲ್ಲಿಯೇ ಅಂತಾರಾಷ್ಟ್ರೀಯ ವ್ಯಾಪಾರ: ಸಚಿವ ಗೋಯಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.