ETV Bharat / business

ಕಚ್ಚಾ ತೈಲ ದರ ಕುಸಿದರೂ ಭಾರತದಲ್ಲಿ 5-6 ರೂ. ಕಡಿತ ಆಗಲು 10 ದಿನ ಬೇಕು... ಕಾರಣ? - ದೆಹಲಿಯಲ್ಲಿ ಡೀಸೆಲ್ ದರ

ಭಾರತೀಯ ತೈಲ ಕಂಪನಿಗಳು ಕಳೆದ 15 ದಿನಗಳ ಸರಾಸರಿ ದರವನ್ನು ಆಧರಿಸಿ ಪೆಟ್ರೋಲ್‌ ಮತ್ತು ಡೀಸೆಲ್‌ ಚಿಲ್ಲರೆ ದರವನ್ನು ನಿರ್ಣಯಿಸುತ್ತವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪೆಟ್ರೋಲ್ ವಿತರಣಾ ಕಂಪೆನಿಗಳು ಹಾಗೂ ಸ್ಥಳದಿಂದ ಸ್ಥಳಕ್ಕೆ ಸ್ವಲ್ಪ ವ್ಯತ್ಯಾಸ ಇರುತ್ತದೆ. ಹೀಗಾಗಿ, ಸೋಮವಾರ ಇಳಿಕೆಯಾದ ಕಚ್ಚಾ ತೈಲದ ಲಾಭವು ಭಾರತೀಯ ಗ್ರಾಹಕರಿಗೆ ವರ್ಗಾವಣೆ ಆಗಬೇಕಾದರೆ ಕನಿಷ್ಠ 10 ದಿನ ಆದರ ಕಾಯಬೇಕಿದೆ.

Fuel
ತೈಲ
author img

By

Published : Mar 11, 2020, 4:33 PM IST

ನವದೆಹಲಿ: ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ತೈಲ ಬೆಲೆ ಸೋಮವಾರ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ದೇಶಿಯ ಪೆಟ್ರೋಲ್ ಹಾಗೂ ಡೀಸೆಲ್​ ಚಿಲ್ಲರೆ ಖರೀದಿಯ ಲಾಭ ಪಡೆಯ ಬಯಸುವ ಗ್ರಾಹಕರು ಇನ್ನೂ 10 ದಿನಗಳ ವರೆಗೆ ಕಾಯಬೇಕಿದೆ.

ಕೊರೊನಾ ಭೀತಿಯಿಂದ ಕುಸಿದ ಬೆಲೆ ನಿಯಂತ್ರಿಣಕ್ಕೆ ಒಪೆಕ್ ರಾಷ್ಟ್ರಗಳು ಉತ್ಪಾದನೆ ಕಡಿತದ ಇಂಗಿತ ವ್ಯಕ್ತಪಡಿಸಿದವು. ಇದಕ್ಕೆ ರಷ್ಯಾ ಆಕ್ಷೇಪ ವ್ಯಕ್ತಪಡಿಸಿ, ಉತ್ಪಾದನೆಯನ್ನು ಯಥಾವತ್ತಾಗಿ ಮುಂದುವರಿಸುವುದಾಗಿ ಹೇಳಿತ್ತು.

ರಷ್ಯಾದ ನಿರ್ಧಾರಕ್ಕೆ ಪ್ರತಿಯಾಗಿ ಅತಿ ಹೆಚ್ಚು ತೈಲ ಸಂಸ್ಕರಣೆ ಮಾಡುವ ಸೌದಿ ಅರೇಬಿಯಾ ದಿಢೀರನೆ ಶೇ 20ರಷ್ಟು ಬೆಲೆ ಇಳಿಕೆ ಮಾಡಿತು. ಇದರಿಂದ ಕಚ್ಚಾ ತೈಲವು ಏಕಾಏಕಿ ಶೇ 30ರಷ್ಟು ಇಳಿಕೆಯಾಗಿ ಪ್ರತಿ ಬ್ಯಾರೆಲ್ 35 ಡಾಲರ್​ನಲ್ಲಿ ಮಾರಾಟ ಆಯಿತು.

ಭಾರತೀಯ ತೈಲ ಕಂಪನಿಗಳು ಕಳೆದ 15 ದಿನಗಳ ಸರಾಸರಿ ದರವನ್ನು ಆಧರಿಸಿ ಪೆಟ್ರೋಲ್‌ ಮತ್ತು ಡೀಸೆಲ್‌ ಚಿಲ್ಲರೆ ದರವನ್ನು ನಿರ್ಣಯಿಸುತ್ತವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪೆಟ್ರೋಲ್ ವಿತರಣಾ ಕಂಪೆನಿಗಳು ಹಾಗೂ ಸ್ಥಳದಿಂದ ಸ್ಥಳಕ್ಕೆ ಸ್ವಲ್ಪ ವ್ಯತ್ಯಾಸ ಇರುತ್ತದೆ.

ಗ್ರಾಹಕರು ಪೆಟ್ರೋಲ್ ಹಾಗೂ ಡೀಸೆಲ್ ದರವು ತಗ್ಗಲು ಅಥಾವ ದೊಡ್ಡ ಆಗಲು ಕಡಿಮೆ ಎಂದರು ಹತ್ತು ದಿನಗಳು ಆದರು ಕಾಯಲೇಬೇಕು. ಮುಂದಿನ ವಾರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್​ ದರದಲ್ಲಿ ₹ 5-6 ಕಡಿತ ಆಗುವ ಸಂಭವವಿದೆ. ರಾಷ್ಟ್ರ ರಾಜಧಾನಿ ನದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಕ್ರಮವಾಗಿ ₹ 70.29 ಮತ್ತು ₹ 63.01 ಮಾರಾಟ ಆಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.