ನವದೆಹಲಿ: ಕೈನೆಟಿಕ್ ಗ್ರೀನ್ ಎನರ್ಜಿ ಆ್ಯಂಡ್ ಪವರ್ ಸಲ್ಯೂಷನ್, 'ಕೈನೆಟಿಕ್ ಸಫರ್ ಸ್ಟಾರ್' ಹೆಸರಿನ ನೂತನ ಎಲೆಕ್ಟ್ರಿಕ್ ಆಟೋ ಬಿಡುಗಡೆಗೊಳಿಸಿದೆ.
ಸಂಪೂರ್ಣವಾಗಿ ಸ್ಟೀಲ್ನಿಂದ ತಯಾರಿಸಲಾದ ಸರಕು ಆಟೋ, 400 ಕೆ.ಜಿ.ಯಷ್ಟು ಸಾಮಗ್ರಿಗಳನ್ನು ಹೊತ್ತೊಯ್ಯಲಿದೆ. ವಾಯು ಮತ್ತು ಶಬ್ದ ಮಾಲಿನ್ಯ ಹೆಚ್ಚಳವಿರುವ ನಗರ ಪ್ರದೇಶಗಳಲ್ಲಿ ಸರಕು ಸಾಗಣೆ ಮಾದರಿ ವಾಹನವಾಗಿದೆ. ಕೈನೆಟಿಕ್ ಸಫರ್ ಸ್ಟಾರ್ನ ಬೆಲೆ ₹ 2.20 ಲಕ್ಷ (ಎಕ್ಸ್ಶೋ ರೂಮ್) ನಿಗದಿಪಡಿಸಲಾಗಿದೆ.
ಕೈನೆಟಿಕ್ ಗ್ರೀನ್ ಎನರ್ಜಿ ಮತ್ತು ಪವರ್ ಸಲ್ಯೂಷನ್ಸ್‌ನ ಸ್ಥಾಪಕ ಮತ್ತು ಸಿಇಒ ಸುಲಾಜ್ಜಾ ಫಿರೋಡಿಯಾ ಮೋಟ್ವಾನಿ ಮಾತನಾಡಿ, ಶಬ್ದ ಮತ್ತು ಮಾಲಿನ್ಯ ಮುಕ್ತ ನೂತನ ಎಲೆಕ್ಟ್ರಿಕ್ ವಾಹನವು ಇ-ಕಾಮರ್ಸ್ ಮತ್ತು ಎಫ್‌ಎಂಸಿಜಿ ವಲಯಕ್ಕೆ ಸೂಕ್ತವಾಗಿದೆ. ಇದು ಕೊನೆ ಹಂತದ ಗ್ರಾಹಕರ ಸರಕು (ಲಾಸ್ಟ್ ಮೈಲಿ ಡಿಲಿವರಿ) ವಿತರಣೆಯಲ್ಲಿ ಕ್ರಾಂತಿಯನ್ನು ಉಂಟುಮಾಡುವ ಸಾಮರ್ಥ್ಯ ಹೊಂದಿದೆ. ಸರಕುಗಳು ಮತ್ತು ನಗರಗಳ ತ್ಯಾಜ್ಯ ಸಂಗ್ರಹಕ್ಕೂ ನೆರವಾಗಲಿದೆ ಎಂದರು.
ಡೀಸೆಲ್ ಬಳಕೆಯ ಆಟೋಗಳಿಗೆ ಹೋಲಿಸಿದರೆ ಇದರ ಸಾಗಣೆ ಸೇವಾ ವೆಚ್ಚ ತೀರಾ ಕಡಿಮೆಯಾಗಿದೆ. ಡೀಸೆಲ್ ಚಾಲಿತ ಆಟೋ ಪ್ರತಿ ಕಿ.ಮೀ.ಗೆ 3 ರೂ. ಸೇವಾ ಶುಲ್ಕ ವಿಧಿಸಿದರೇ ಸಫರ್ ಸ್ಟಾರ್ 50 ಪೈಸೆಯಷ್ಟು ಆಗಲಿದೆ ಎಂದರು.
ಸಫರ್ ಸ್ಟಾರ್ ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಲಿಥಿಯಂ ಅಯಾನ್ ಬ್ಯಾಟರಿಯು 48 ವಿ ಜೊತೆಗೆ 150 ಎಎಚ್ ಪವರ್ನಿಂದ ಸಿಂಗಲ್ ಚಾರ್ಜ್ಗೆ 130 ಕಿ.ಮೀ. ದೂರದವರೆಗೂ ಸಂಚರಿಸಲಿದೆ. ಎರಡು ಸ್ಪೀಡ್ ಬ್ರೇಕ್ ಹೊಂದಿದ್ದು, ಬ್ಯಾಟರಿ ಬಾಳಿಕೆಯನ್ನು 3 ವರ್ಷಗಳವರೆಗೆ ವಾಯ್ದೆ ನೀಡುತ್ತಿದೆ.