ನವದೆಹಲಿ: ತೆರಿಗೆ ಕಾನೂನುಗಳ (ತಿದ್ದುಪಡಿ) ಮಸೂದೆ-2021ಯನ್ನು ಲೋಕಸಭೆಯಲ್ಲಿ ಅಂಗೀಕರಿಸುವ ಮೂಲಕ ಹಿಂದಿನ ತೆರಿಗೆ ನೀತಿಯನ್ನ ಸರ್ಕಾರ ಕೊನೆಗೊಳಿಸುವ ಗುರಿಯನ್ನು ಹೊಂದಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ತೆರಿಗೆ ಕಾನೂನುಗಳ (ತಿದ್ದುಪಡಿ) ಮಸೂದೆ-2021 ಅನ್ನು ಇಂದು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ಇದನ್ನು ರಾಜ್ಯಸಭೆಯು ಅಂಗೀಕರಿಸಿದಾಗ, 2012ರ ಮೇ 28 ಕ್ಕಿಂತ ಮುಂಚಿತವಾಗಿ ಭಾರತೀಯ ಆಸ್ತಿಗಳ ಪರೋಕ್ಷ ವರ್ಗಾವಣೆ ಕುರಿತು 2012ರ ಶಾಸನವನ್ನು ಬಳಸಿಕೊಂಡು ಕೈರ್ನ್ ಎನರ್ಜಿ ಮತ್ತು ವೊಡಾಫೋನ್ ನಂತಹ ಕಂಪನಿಗಳ ಮೇಲಿನ ಎಲ್ಲ ತೆರಿಗೆ ಬೇಡಿಕೆಗಳನ್ನು ಹಿಂಪಡೆಯಲಾಗುತ್ತದೆ.
ರೆಟ್ರೋಸ್ಪೆಕ್ಟಿವ್ ಟ್ಯಾಕ್ಸ್ (ವೊಡಾಫೋನ್) ವಾಪಸಾತಿಯಿಂದ 8 ವರ್ಷಗಳಿಂದ ನಮ್ಮನ್ನು ಕಾಡುತ್ತಿರುವ ಸಮಸ್ಯೆಯನ್ನು ನಾವು ಕೊನೆಗೊಳಿಸಿದ್ದಕ್ಕೆ ನನಗೆ ಸಂತೋಷವಾಗಿದೆ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.
-
On the withdrawal of the Retrospective Tax (Vodafone), I am glad that we have put an end to an issue that has been troubling us for 8 years.
— P. Chidambaram (@PChidambaram_IN) August 6, 2021 " class="align-text-top noRightClick twitterSection" data="
">On the withdrawal of the Retrospective Tax (Vodafone), I am glad that we have put an end to an issue that has been troubling us for 8 years.
— P. Chidambaram (@PChidambaram_IN) August 6, 2021On the withdrawal of the Retrospective Tax (Vodafone), I am glad that we have put an end to an issue that has been troubling us for 8 years.
— P. Chidambaram (@PChidambaram_IN) August 6, 2021
ಆದಾಯ ತೆರಿಗೆ-1961ರ ಕಾಯ್ದೆಗೆ ಹಣಕಾಸು ಕಾಯ್ದೆ-2012 ವಿವಿಧ ನಿಬಂಧನೆಗಳ ತಿದ್ದುಪಡಿ ಮಾಡಲಾಗಿತ್ತು ಎಂಬ ಅಂಶವನ್ನು ಅವರು ಇದೇ ವೇಳೆ ಪ್ರಸ್ತಾಪಿಸಿದ್ದಾರೆ.