ನವದೆಹಲಿ: ಐಫೋನ್ ತಯಾರಕ 10:28 PM 25-08-2020ಆ್ಯಪಲ್ ಭಾರತದಲ್ಲಿ ತನ್ನ ದೀರ್ಘಾವಧಿಯ ಆನ್‌ಲೈನ್ ಮಾರಾಟ ಮಳಿಗೆಯನ್ನು ಶೀಘ್ರದಲ್ಲೇ ತೆರೆಯಲು ಸಜ್ಜಾಗಿದೆ. ಈ ವರ್ಷದ ಹಬ್ಬದ ಋತುವಿನಲ್ಲಿ ತನ್ನ ಮಾರಾಟ ಪಾಲು ಪಡೆಯುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕಂಪನಿಯಿಂದ ಇನ್ನೂ ಯಾವುದೇ ಅಧಿಕೃತ ದೃಢೀಕರಣ ಹೊರ ಬಿದ್ದಿಲ್ಲದಿದ್ದರೂ ಬ್ಲೂಮ್‌ಬರ್ಗ್ ವರದಿಯು ಆ್ಯಪಲ್ ಮುಂದಿನ ತಿಂಗಳ ಆರಂಭದಲ್ಲಿ ದೇಶದಲ್ಲಿ ಆನ್‌ಲೈನ್ ಸ್ಟೋರ್ ತೆರೆಯಲು ಸಿದ್ಧತೆ ನಡೆಸಿದೆ ಎಂದು ಹೇಳಿದೆ.
ಕಳೆದ ವರ್ಷ ಸಿಂಗಲ್-ಬ್ರಾಂಡ್ ಚಿಲ್ಲರೆ ವ್ಯಾಪಾರದಲ್ಲಿ (ಎಸ್‌ಬಿಆರ್‌ಟಿ) ಶೇ 30ರಷ್ಟು ಸ್ಥಳೀಯ ಸಂಪನ್ಮೂಗಳ ಜತೆ ಹೂಡಿಕೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟ ನಿರ್ಧರಿಸಿತ್ತು. ಕಂಪನಿಯು ಭಾರತೀಯ ಗ್ರಾಹಕರಿಗೆ ಆನ್‌ಲೈನ್ ಮತ್ತು ಸ್ಟೋರ್ಗಳಲ್ಲಿ ತನ್ನ ಸೇವೆ ಸಲ್ಲಿಸಲು ಉತ್ಸುಕವಾಗಿದೆ. ಪ್ರಪಂಚದಾದ್ಯಂತದ ಆ್ಯಪಲ್ ಗ್ರಾಹಕರು ನಮ್ಮ ಉತ್ಪನ್ನಗಳ ಸೇವೆಯನ್ನು ಆನಂದಿಸಬಹುದು ಎಂದು ಹೇಳಿದೆ.
ಇದನ್ನು ಸಾಧ್ಯವಾಗಿಸಿದ ಪ್ರಧಾನಿ ಮೋದಿ ಮತ್ತು ಅವರ ತಂಡದ ಬೆಂಬಲ ಹಾಗೂ ಕಠಿಣ ಪರಿಶ್ರಮವನ್ನು ನಾವು ಪ್ರಶಂಸಿಸುತ್ತೇವೆ. ಭಾರತದ ಮೊದಲ ಆ್ಯಪಲ್ ಚಿಲ್ಲರೆ ಅಂಗಡಿಗೆ ಗ್ರಾಹಕರನ್ನು ಸ್ವಾಗತಿಸಲು ನಾವು ಆ ಒಂದು ದಿನವನ್ನು ಎದುರು ನೋಡುತ್ತಿದ್ದೇವೆ ಎಂದು ಕಂಪನಿ ತಿಳಿಸಿದೆ.
ಸಿಂಗಲ್ ಬ್ರಾಂಡ್ಗೆ ಇದ್ದ ನಿರ್ಬಂಧ ತೆಗೆದುಹಾಕಿದ ಕೆಲವೇ ತಿಂಗಳಲ್ಲಿ ಆ್ಯಪಲ್ ಆನ್‌ಲೈನ್ ಮಾರಾಟವನ್ನು ಪ್ರಾರಂಭಿಸಲು ಯೋಜಿಸಿತ್ತು. ಕೋವಿಡ್ -19 ಸಾಂಕ್ರಾಮಿಕವು ಆ ಯೋಜನೆಗಳನ್ನು ವಿಳಂಬಗೊಳಿಸಿತು ಎಂದು ಮ್ಯಾಕ್‌ರೂಮರ್ಸ್ ವರದಿ ಮಾಡಿದೆ.
ಈಗಾಗಲೇ ಭಾರತದಲ್ಲಿ ಕೆಲವು ಐಫೋನ್ ಮಾದರಿಗಳನ್ನು ತಯಾರಿಸಲು ಪ್ರಾರಂಭಿಸಿರುವ ಆ್ಯಪಲ್, ಈಗಾಗಲೇ ದೇಶದ ಚಿಲ್ಲರೆ ಅಂಗಡಿಗಳಿಗೆ ಸ್ಥಳಗಳನ್ನು ರೂಪಿಸಿದೆ ಎಂದು ವರದಿಯಾಗಿದೆ.
ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಆ್ಯಪಲ್ ತನ್ನ ಸಾಧನಗಳ ಅಧಿಕೃತ ನೇರ ಮಾರಾಟ ಪ್ರಾರಂಭಿಸಲು ಭಾರತದಲ್ಲಿ ಆನ್‌ಲೈನ್ ಅಂಗಡಿ ತೆರೆಯಲಿದೆ ಎಂದು ಟೆಕ್ಕ್ರಂಚ್ ಮೊದಲು ವರದಿ ಮಾಡಿದೆ.
ಆ್ಯಪಲ್ ಮುಂದಿನ ವರ್ಷ ಮುಂಬೈನಲ್ಲಿ ತನ್ನ ಮೊದಲ ಅಂಗಡಿ ತೆರೆಯುವ ಸಾಧ್ಯತೆಯಿದೆ. ಭಾರತದಲ್ಲಿ ಅದರ ಬೆಳವಣಿಗೆ ಹೆಚ್ಚಿಸಿಲಿದೆ. ಆ್ಯಪಲ್ ಸಿಇಒ ಟಿಮ್ ಕುಕ್ ಅವರು, ಫೆಬ್ರವರಿಯಲ್ಲಿ ಕಂಪನಿಯು ತನ್ನ ಮೊದಲ ಬ್ರಾಂಡ್ ಚಿಲ್ಲರೆ ಅಂಗಡಿಯನ್ನು 2021ರಲ್ಲಿ ದೇಶದಲ್ಲಿ ತೆರೆಯಲು ಸಿದ್ಧವಾಗಿದೆ ಎಂದು ಹೇಳಿದ್ದರು.
ಬೇರೊಬ್ಬರು ನಮಗೆ ಬ್ರ್ಯಾಂಡ್ ಚಲಾಯಿಸಲು ನಾನು ಬಯಸುವುದಿಲ್ಲ ಎಂದು ಕುಕ್ ವಾರ್ಷಿಕ ಷೇರುದಾರರ ಸಭೆಯಲ್ಲಿ ಹೂಡಿಕೆದಾರರಿಗೆ ತಿಳಿಸಿದರು.
ನಾವು ಚಿಲ್ಲರೆ ವ್ಯಾಪಾರದಲ್ಲಿ ಉತ್ತಮ ಪಾಲುದಾರರಾಗುವುದಿಲ್ಲ. ನಾವು ನಮ್ಮದೆ ಆದ ರೀತಿಯಲ್ಲಿ ಕೆಲಸಗಳನ್ನು ಮಾಡಲು ಇಷ್ಟಪಡುತ್ತೇವೆ ಎಂದಿದ್ದರು.