ನವದೆಹಲಿ: ಆಹಾರ ಪದಾರ್ಥಗಳು ದುಬಾರಿಯಾಗಿದ್ದರೂ ಸಹ ಸಗಟು ಬೆಲೆ ಆಧಾರಿತ ಹಣದುಬ್ಬರವು ಜುಲೈನಲ್ಲಿ ಶೇ 0.58ರಷ್ಟು ಕುಸಿದಿದೆ.
ಜೂನ್‌ನಲ್ಲಿ ಡಬ್ಲ್ಯುಪಿಐ ಹಣದುಬ್ಬರವು ಶೇ -1.81ರಷ್ಟಿದ್ದರೆ, ಮೇ ಮತ್ತು ಏಪ್ರಿಲ್ ತಿಂಗಳಲ್ಲಿ ಕ್ರಮವಾಗಿ ಶೇ -3.37 ಮತ್ತು ಶೇ -1.57ರಷ್ಟಿತ್ತು. ಮಾಸಿಕ ಡಬ್ಲ್ಯುಪಿಐ ಆಧಾರಿತ ವಾರ್ಷಿಕ ಹಣದುಬ್ಬರ ದರ (ಸಗಟು ಬೆಲೆ ಸೂಚ್ಯಂಕ), 2020ರ ಜುಲೈ ತಿಂಗಳಲ್ಲಿ ಶೇ -0.58ರಷ್ಟಕ್ಕೆನಿಂತಿದೆ. ಹಿಂದಿನ ವರ್ಷದ ಇದೇ ತಿಂಗಳಲ್ಲಿ ಶೇ 1.17ರಷ್ಟಿತ್ತು.
ಜುಲೈನಲ್ಲಿ ಆಹಾರ ಪದಾರ್ಥಗಳ ವಿಭಾಗದ ಹಣದುಬ್ಬರವು ಶೇ 4.08ರಷ್ಟಿದ್ದರೆ, ಜೂನ್‌ನಲ್ಲಿ ಇದು ಶೇ 2.04ರಷ್ಟಿತ್ತು. ಇಂಧನ ಮತ್ತು ವಿದ್ಯುತ್ ವಿಭಾಗದ ಹಣದುಬ್ಬರವು ಜುಲೈನಲ್ಲಿ ಶೇ 9.84ರಷ್ಟು ಕುಸಿದಿದೆ. ಇದು ಹಿಂದಿನ ತಿಂಗಳಲ್ಲಿ ಶೇ 13.60ರಷ್ಟಿತ್ತು.
ತಯಾರಿಸಿದ ಉತ್ಪನ್ನಗಳು ಜುಲೈನಲ್ಲಿ ಶೇ 0.51ರಷ್ಟು ಹಣದುಬ್ಬರ ಕಂಡಿದ್ದು, ಜೂನ್‌ನಲ್ಲಿ ಶೇ 0.08ರಷ್ಟಿತ್ತು.
ಕಳೆದ ವಾರ ಆರ್‌ಬಿಐ ತನ್ನ ನೀತಿ ಪರಿಶೀಲನೆಯಲ್ಲಿ ಬಡ್ಡಿದರಗಳನ್ನು ಬದಲಾಯಿಸದೆ ಯಥಾವತ್ತಾಗಿ ಇರಿಸಿಕೊಂಡಿತ್ತು. ಅಕ್ಟೋಬರ್-ಮಾರ್ಚ್ ಅವಧಿಯಲ್ಲಿ ಚಿಲ್ಲರೆ ಹಣದುಬ್ಬರವು ಮಧ್ಯಮ ಪ್ರಮಾಣದಲ್ಲಿ ಇರಲಿದೆ ಎಂದು ಅಪೆಕ್ಸ್ ಬ್ಯಾಂಕ್ ಅಂದಾಜಿಸಿತ್ತು.