ETV Bharat / business

ಲಾಕ್​ಡೌನ್ ಎಫೆಕ್ಟ್‌ ಹಿನ್ನೆಲೆ ರೈತರ ಪರ ನಿಲ್ಲಲು ಪ್ರಧಾನಿ ಮೋದಿ ಮಹತ್ವದ ಸಲಹೆ..

ಅಗತ್ಯ ವಸ್ತುಗಳ ಕೊರತೆಗೂ ಸಹ ಕಾರಣವಾಗಿದೆ. ನಗರಗಳಲ್ಲಿ ಬೇಗನೆ ಹಾಳಾಗುವ ವಸ್ತುಗಳ ಬೆಲೆಯ ಹೆಚ್ಚಳಕ್ಕೂ ಕಾರಣವಾಗಿದೆ. ರೈತರಿಗೆ ಸುಗ್ಗಿಯ ಸಮಯದಲ್ಲಿ ಸಾಕಷ್ಟು ತೊಂದರೆ ಆಗಿದ್ದು, ಕಾರ್ಮಿಕರ ಕೊರತೆ ಮತ್ತು ಲಾಜಿಸ್ಟಿಕ್ಸ್ ಸಂಪರ್ಕ ಇಲ್ಲದಂತಾಗಿದೆ.

PM Narendra Modi
ಪ್ರಧಾನಿ ಮೋದಿ
author img

By

Published : Apr 8, 2020, 5:09 PM IST

ನವದೆಹಲಿ : ದೇಶಾದ್ಯಂತ ಬಿಗಿಯಾದ ಲಾಕ್​ಡೌನ್ ಹೇರಲಾಗಿದೆ. ಕೃಷಿಕ ಸಮುದಾಯಕ್ಕೆ ನೆರವಾಗಲು ಹಾಗೂ ಕೃಷಿ ಉತ್ಪನ್ನಗಳನ್ನು ಸಗಟು ಮಾರುಕಟ್ಟೆಗಳಿಗೆ ಸಾಗಿಸಲು ಟ್ರಕ್‌ಗಳನ್ನು ಅಗ್ರಿಗೇಟರ್ ಮಾದರಿಯಲ್ಲಿ ಉತ್ತೇಜಿಸಲು ಸರ್ಕಾರ ಚಿಂತನೆ ನಡೆಸಿದೆ.

ರೈತರ ಕಲ್ಯಾಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಿದೆ. ಕೊಯ್ಲು ಋತುವಿನಲ್ಲಿ ರೈತರಿಗೆ ಸರ್ಕಾರವು ಎಲ್ಲಾ ರೀತಿಯ ಸಹಾಯ ನೀಡುತ್ತದೆ. ತಂತ್ರಜ್ಞಾನದ ಬಳಕೆ ಮತ್ತು ಆ್ಯಪ್ ಆಧಾರಿತ ಕ್ಯಾಬ್ ಸೇವೆಗಳ ಮೂಲಕ ರೈತರ ಉತ್ಪನ್ನಗಳನ್ನು ಮಂಡಿಗಳಿಗೆ ತಲುಪಿಸಲು ‘ಟ್ರಕ್ ಅಗ್ರಿಗೇಟರ್‌’ ಬಳಕೆಯಂತಹ ನವೀನ ಅನ್ವೇಷಣೆ ಉತ್ತೇಜಿಸಲು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಚಳಿಗಾಲ ಅಥವಾ ರಬಿ ಬೆಳೆಯಲ್ಲಿ ಮುಖ್ಯವಾಗಿ ಗೋಧಿ, ಕಡಲೆ, ಸಾಸಿವೆ, ಹಣ್ಣು ಮತ್ತು ತರಕಾರಿಗಳು ಕೊಯ್ಲುಗೆ ಸಜ್ಜಾಗಿವೆ. ಈ ವೇಳೆಯಲ್ಲಿ ಟ್ರಕ್ ಅಗ್ರಿಗೇಟರ್​ ಪರಿಕಲ್ಪನೆಯು ರೈತರ ನೆರವಿಗೆ ಬೆಂಬಲವಾಗಲಿದೆ ಎಂಬ ನಿರೀಕ್ಷಿಯಿದೆ. ಟ್ರಕ್ ಅಗ್ರಿಗೇಟರ್​ಗಳು ಮಧ್ಯವರ್ತಿಗಳ ನೆರವಿಲ್ಲದೆ ಉತ್ಪನ್ನಗಳನ್ನು ಮಾರುಕಟ್ಟೆಗೆ ಕೊಂಡೊಯ್ಯುವ ಸೇತುವೆ ಆಗಲಿದೆ. ಜೊತೆಗೆ ರೈತರಿಗೆ ಉತ್ತಮ ಬೆಲೆ ಪಡೆಯಲು ಸಹ ಸಹಾಯಕ್ಕೆ ಬರಲಿದೆ.

ಕೋವಿಡ್-19 ಹರಡುವಿಕೆ ಚೈನ್​ ಮುರಿಯಲು ಲಾಕ್​ಡೌನ್​ ವಿಧಿಸಲಾಗಿದೆ. ಆದರೆ, ಇದೇ ಲಾಕ್‌ಡೌನ್ ಪೂರೈಕೆಯ ಸರಪಳಿಗೆ ಅಡ್ಡಿಪಡಿಸುತ್ತಿದೆ. ಅಗತ್ಯ ವಸ್ತುಗಳ ಕೊರತೆಗೂ ಸಹ ಕಾರಣವಾಗಿದೆ. ನಗರಗಳಲ್ಲಿ ಬೇಗನೆ ಹಾಳಾಗುವ ವಸ್ತುಗಳ ಬೆಲೆಯ ಹೆಚ್ಚಳಕ್ಕೂ ಕಾರಣವಾಗಿದೆ. ರೈತರಿಗೆ ಸುಗ್ಗಿಯ ಸಮಯದಲ್ಲಿ ಸಾಕಷ್ಟು ತೊಂದರೆ ಆಗಿದ್ದು, ಕಾರ್ಮಿಕರ ಕೊರತೆ ಮತ್ತು ಲಾಜಿಸ್ಟಿಕ್ಸ್ ಸಂಪರ್ಕ ಇಲ್ಲದಂತಾಗಿದೆ.

ಇಂಡಿಯಾಟೆಕ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮೀಶ್ ಕೈಲಾಸಂ ಅವರು ಅಗ್ರಿಗೇಟರ್​ ಆಧಾರಿತ ಸೇವೆಗಳನ್ನು ಸ್ವಾಗತಿಸಿದ್ದಾರೆ. ಇದು ಜಮೀನಿನಿಂದ ಮಾರುಕಟ್ಟೆಯವರೆಗಿನ ಎಲ್ಲಾ ಯಾಂತ್ರಿಕೃತ ಸೇವೆಗಳು ರೈತನ ಕೈಗೆ ಎಟುಕಲಿದ್ದು, ಅವರು ಸುಲಭವಾಗಿ ಮಾರುಕಟ್ಟೆ ಪ್ರವೇಶಿಸಬಹುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.