ETV Bharat / business

ಬ್ಯಾಂಕ್​ಗಳು 3 ತಿಂಗಳ ಇಎಂಐ ಮುಕ್ತಿ ನೀಡಿವೆಯಾ?:  RBIಗೆ ಸುಪ್ರೀಂಕೋರ್ಟ್​ ತಾಕೀತು - ಸಾಲ ವಿನಾಯತಿ

ಕೊರೊನಾ ವೈರಸ್ ಬಿಕ್ಕಟ್ಟು ಹಿನ್ನೆಲೆಯಲ್ಲಿ ಮಾರ್ಚ್ 1 ಮತ್ತು ಮೇ 31ರ ನಡುವೆ ಸಾಲ ಮರುಪಾವತಿಯ ಮೂರು ತಿಂಗಳ ವಿನಾಯಿತಿ ನೀಡಿ, ಮಾರ್ಚ್ 27ರಂದು ಆರ್​ಬಿಐ, ಎಲ್ಲ ಬ್ಯಾಂಕ್​ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಸುತ್ತೋಲೆ ಹೊರಡಿಸಿತ್ತು.

Reserve Bank of India
ಆರ್​ಬಿಐ
author img

By

Published : Apr 30, 2020, 4:32 PM IST

ನವದೆಹಲಿ: ಲಾಕ್‍ಡೌನ್ ಹಿನ್ನೆಲೆಯಲ್ಲಿ ಮೂರು ತಿಂಗಳ ಮಟ್ಟಿಗೆ ಸಾಲದ ಕಂತು ಪಾವತಿಸುವುದಿಂದ ವಿನಾಯತಿ ಘೋಷಿಸಿದ ಭಾರತೀಯ ರಿಸರ್ವ್​ ಬ್ಯಾಂಕ್​ನ ಸುತ್ತೋಲೆಯನ್ನು ಸಹವರ್ತಿ ಬ್ಯಾಂಕ್​ಗಳು ಅನುಸರಿಸುತ್ತಿರುವ ಬಗ್ಗೆ ಪರಿಶೀಲಿಸುವಂತೆ ಸುಪ್ರೀಂಕೋರ್ಟ್ ಆರ್​ಬಿಐಗೆ ಸೂಚಿಸಿದೆ.

ಕೊರೊನಾ ವೈರಸ್ ಬಿಕ್ಕಟ್ಟು ಹಿನ್ನೆಲೆಯಲ್ಲಿ ಮಾರ್ಚ್ 1 ಮತ್ತು ಮೇ 31ರ ನಡುವೆ ಸಾಲ ಮರುಪಾವತಿಯ ಮೂರು ತಿಂಗಳ ವಿನಾಯತಿ ನೀಡಿ, ಮಾರ್ಚ್ 27ರಂದು ಆರ್​ಬಿಐ, ಎಲ್ಲ ಬ್ಯಾಂಕ್​ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಸುತ್ತೋಲೆ ಹೊರಡಿಸಿತ್ತು. ಬ್ಯಾಂಕ್​ಗಳು ಇದನ್ನು ಎಷ್ಟರ ಮಟ್ಟಿಗೆ ಅನುಸರಿಸುತ್ತಿವೆ. ಅದರ ಕುರಿತು ಪರಿಶೀಲನೆ ನಡೆಸುವಂತೆ ಕೇಂದ್ರೀಯ ಬ್ಯಾಂಕ್​ಗೆ ನ್ಯಾಯಾಲಯ ಆದೇಶಿಸಿದೆ.

ಇದು ಪಿಐಎಲ್ ವಿವಾದವಲ್ಲ. ಆದರೆ, ಹಲವು ಸಮಸ್ಯೆಗಳಿಂದಾಗಿ ವಿವಾದ ಎದ್ದಿದೆ. ತನ್ನ ಆದೇಶವನ್ನು ಸ್ಫೂರ್ತಿಯಿಂದ ಅನುಷ್ಠಾನಗೊಳಿಸಬೇಕೆಂದು ಆರ್​ಬಿಐಗೆ ಕೋರ್ಟ್​ ಮನವಿ ಮಾಡಿದೆ. 'ಲಾಭಗಳನ್ನು ಬ್ಯಾಂಕ್​ನವರು ಸಾಲಗಾರರಿಗೆ ವಿಸ್ತರಿಸುತ್ತಿಲ್ಲ. ಇದಕ್ಕೆ ಸೂಕ್ತ ಮಾರ್ಗಸೂಚಿ ಇರಬೇಕು ಎಂದು ಮೇಲ್ನೋಟಕ್ಕೆ ಕಾಣುತ್ತದೆ' ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.