ನವದೆಹಲಿ: 2018-19ರಲ್ಲಿ 266 ಹೊಸ ರೈಲುಗಳ ಸೇವೆಗಳಿಗೆ ಹೋಲಿಸಿದರೆ 2019-20ರಲ್ಲಿ 153 ಸೇವೆಗಳನ್ನು ಪರಿಚಯಿಸಲಾಗಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ಇದರಲ್ಲಿ ಆಧುನಿಕ ಅರೆ ಹೈಸ್ಪೀಡ್ ರೈಲುಗಳಾದ ವಂದೇ ಭಾರತ್, ತೇಜಸ್ ಎಕ್ಸ್‌ಪ್ರೆಸ್ ಮತ್ತು ಉದಯ್ (ಉತ್ತಕೃಷ್ಟ ಡಬಲ್-ಡೆಕ್ಕರ್ ಹವಾನಿಯಂತ್ರಿತ ಯಾತ್ರಿ) ಎಕ್ಸ್‌ಪ್ರೆಸ್ ರೈಲುಗಳು ಸೇರಿವೆ ಎಂದು ಸಂಸತ್ ಭವನದಲ್ಲಿ ಮಾಹಿತಿ ನೀಡಲಾಗಿದೆ.
ರಾಜ್ಯಸಭೆಯಲ್ಲಿ ಲಿಖಿತ ಪ್ರಶ್ನೆಗೆ ಉತ್ತರಿಸಿದ ರೈಲ್ವೆ ಸಚಿವ ಪಿಯೂಷ್ ಗೋಯಲ್, ಪ್ರಯಾಣಿಕರಿಗೆ ಅನುಕೂಲವಾಗುವಂತೆ ಭಾರತೀಯ ರೈಲ್ವೆ 2018-19 ಮತ್ತು 2019-20ರ ಅವಧಿಯಲ್ಲಿ ಕ್ರಮವಾಗಿ 153 ಮತ್ತು 266 ಹೊಸ ರೈಲ್ವೆ ಸೇವೆಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.
ಹೊಸ ಸೇವೆಗಳನ್ನು ಪರಿಚಯಿಸಿ ರೈಲು ಸೇವೆಗಳನ್ನು ಮೇಲ್ದರ್ಜೆಗೇರಿಸಲು ಮತ್ತು ಪ್ರಯಾಣಿಕರಿಗೆ ಸುಧಾರಿತ ಸೌಲಭ್ಯಗಳನ್ನು ಒದಗಿಸಲು ರಾಷ್ಟ್ರೀಯ ಸಾರಿಗೆ ನಿರಂತರವಾಗಿ ಪ್ರಯತ್ನಿಸುತ್ತದೆ ಎಂದರು.
ಇದನ್ನೂ ಓದಿ: ಆದಾಯ ನಷ್ಟಕ್ಕೆ 14 ರಾಜ್ಯಗಳಿಗೆ ಕೇಂದ್ರದಿಂದ 6,195 ಕೋಟಿ ರೂ. ಅನುದಾನ ಬಿಡುಗಡೆ
ಪ್ರಯಾಣಿಕರಿಗೆ ಉತ್ತಮ ಪ್ರಯಾಣದ ಅನುಭವವನ್ನು ಒದಗಿಸಲು ಭಾರತೀಯ ರೈಲ್ವೆ ವಂದೇ ಭಾರತ್ ಎಕ್ಸ್‌ಪ್ರೆಸ್, ಹಮ್ಸಫರ್, ತೇಜಸ್, ಅಂತ್ಯೋದಯ, ಉದಯ್ ನಂತಹ ಮುಂತಾದ ಪ್ರೀಮಿಯಂ ಸೇವೆಗಳನ್ನು ಪರಿಚಯಿಸಿದೆ. ನವದೆಹಲಿಯಲ್ಲಿ ಅತ್ಯಾಧುನಿಕ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಗಳನ್ನು ಪರಿಚಯಿಸಲಾಗಿದೆ. ವಾರಣಾಸಿ - ನವದೆಹಲಿ ಮತ್ತು ನವದೆಹಲಿ - ಮಾತಾ ವೈಷ್ಣೋದೇವಿ ಕ್ಷೇತ್ರಗಳ ನಡುವೆ ಓಡಿಸಲಾಗುತ್ತಿದೆ ಎಂದು ತಿಳಿಸಿದರು.
ರೈಲುಗಳು ತ್ವರಿತ ವೇಗವರ್ಧನೆ, ಬೋರ್ಡ್ ಇನ್ಫೋಟೈನ್ಮೆಂಟ್ ಮತ್ತು ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಜಿಪಿಎಸ್) ಆಧಾರಿತ ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಸ್ವಯಂಚಾಲಿತ ಸ್ಲೈಡಿಂಗ್ ಬಾಗಿಲುಗಳು, ಹಿಂತೆಗೆದುಕೊಳ್ಳುವ ಹೆಜ್ಜೆಗಳು ಮತ್ತು ಶೂನ್ಯ ಡಿಸ್ಚಾರ್ಜ್ ವ್ಯಾಕ್ಯೂಮ್ ಬಯೋ ಶೌಚಾಲಯದಂತಹ ಮುಂತಾದ ಅಲ್ಟ್ರಾ ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿವೆ ಎಂದು ಹೇಳಿದರು.