ನವದೆಹಲಿ: ಕುಸಿಯುತ್ತಿರುವ ಆರ್ಥಿಕತೆ ಬಗ್ಗೆ ಕೇಂದ್ರ ಸರ್ಕಾರ ಸುಳಿವು ನೀಡುತ್ತಿಲ್ಲವೆಂದು ಹರಿಹಾಯ್ದಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಪ್ರಸ್ತುತ ಅರ್ಥವ್ಯವಸ್ಥೆ ಸುಧಾರಿಸಲು ಪ್ರಧಾನಿ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಾಂಗ್ರೆಸ್ನ ಲೋಕಸಭಾ ಚುನಾವಣೆಯ ಪ್ರಣಾಳಿಕೆಯ ಅಂಶಗಳನ್ನು ಕದಿಯಬೇಕು ಎಂದು ವ್ಯಂಗ್ಯವಾಡಿದ್ದಾರೆ.
ಗ್ರಾಮೀಣ ಅನುಭೋಗದ ಬಳಕೆಯು ನಗರ ಅನುಭೋಗದ ಬಳಕೆಗಿಂತ ವೇಗವಾಗಿ ಬೆಳೆಯುತ್ತದೆ ಎಂಬ ಮಾಧ್ಯಮ ವರದಿಯನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ವಾಗ್ದಾಳಿ ನಡೆಸಿದ್ದಾರೆ. "ಗ್ರಾಮೀಣ ಭಾರತ ತೀವ್ರ ಸಂಕಷ್ಟದಲ್ಲಿದೆ. ಆರ್ಥಿಕತೆಯು ಮುಳುಗಿದೆ ಮತ್ತು ಏನು ಮಾಡಬೇಕೆಂಬುದರ ಬಗ್ಗೆ ಸರ್ಕಾರಕ್ಕೆ ಅರಿವಿಲ್ಲ' ಎಂದು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮತ್ತು ಹಣಕಾಸು ಸಚಿವರು ಕಾಂಗ್ರೆಸ್ನಿಂದ ವಿಚಾರಗಳನ್ನು ಕದಿಯಬೇಕು. ಅಲ್ಲಿ ನಾವು ನಿರೀಕ್ಷೆಯಂತೆ ಹಾಗೂ ಅವ್ಯವಸ್ಥೆಯನ್ನು ನಿಭಾಯಿಸಲು ವಿವರವಾದ ಯೋಜನೆಗಳನ್ನು ರೂಪಿಸಿದ್ದೇವೆ ಎಂದು ತಮ್ಮ ಬ್ಲಾಗ್ನಲ್ಲಿ ರಾಗಾ ಬರೆದುಕೊಂಡಿದ್ದಾರೆ.