ETV Bharat / business

'ಡಬಲ್​ ಗೇಮ್' ​ ಚೀನಾ ಜತೆಗೆ ಮದುವೆ, ಅಮೆರಿಕದೊಂದಿಗೆ ಸರಸ... ಇದು ಇವರ ಆಟ..! -

​ಚೀನಾದ ಪರಮಾಪ್ತ ರಾಷ್ಟ್ರವಾದ ಪಾಕ್,​ ಬೀಜಿಂಗ್​ನ ಪ್ರತಿ ಕಾರ್ಯತಂತ್ರದ ಗುರಿ ಮತ್ತು ಅದರ ಪ್ರಾಬಲ್ಯ ನಾಯಕತ್ವದ ಜೊತೆಗಿದ್ದು, ಅದಕ್ಕೆ ಬೆಂಬಲಿಸಿ ಸಹಕಾರ ನೀಡಿಕೊಂಡು ಬರುತ್ತಿದೆ. ಅಮೆರಿಕದಿಂದ ತನಗೆ ಅಗತ್ಯವಾದ ಆರ್ಥಿಕ ಮತ್ತು ಮಿಲಿಟರಿ ನೆರವಿನಿಂದ ದೊರೆಯಬಹುದಾದ ಸಾಣೆಕಲ್ಲಿನ ಅವಕಾಶವನ್ನು ತಪ್ಪಿಸಿಕೊಳ್ಳಲು ಬಯಸುವುದಿಲ್ಲ. ಇದೊಂದು ರೀತಿಯಲ್ಲಿ ಚೀನಾ ಜತೆಗೆ ಮದುವೆ, ಅಮೆರಿಕದೊಂದಿಗೆ ಸಂಬಂಧ ಎಂಬುವಂತಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Jul 20, 2019, 11:13 PM IST

ವಾಷಿಂಗ್ಟನ್: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಅಮೆರಿಕ ಜೊತೆಗಿನ ಉನ್ನತ ಮಟ್ಟದ ಭೇಟಿಗೆ ಸಜ್ಜಾಗುತ್ತಿದ್ದಂತೆ, ವಾಷಿಂಗ್ಟನ್ ಮತ್ತು ಬೀಜಿಂಗ್ ನಡುವಿನ ವ್ಯವಹಾರಗಳ ನಿರ್ವಹಣೆಯನ್ನು ಆರ್ಥಿಕ ತಜ್ಞರು ಡಬಲ್ ಗೇಮ್​ಗೆ ಹೋಲಿಸಿ ಕುಹಕವಾಡಿದ್ದಾರೆ.

​ಚೀನಾದ ಪರಮಾಪ್ತ ರಾಷ್ಟ್ರವಾದ ಪಾಕ್​ ಬೀಜಿಂಗ್​ನ ಪ್ರತಿ ಕಾರ್ಯತಂತ್ರದ ಗುರಿ ಮತ್ತು ಅದರ ಪ್ರಾಬಲ್ಯ ನಾಯಕತ್ವದ ಜೊತೆಗಿದ್ದು, ಅದಕ್ಕೆ ಬೆಂಬಲಿಸಿ ಸಹಕಾರ ನೀಡಿಕೊಂಡು ಬರುತ್ತಿದೆ.

ಚೀನಾದೊಂದಿಗೆ ಇಂತಹ ಬಂಧನ ಹೊಂದಿರುವ ಪಾಕ್​, ಅಮೆರಿಕದಿಂದ ತನಗೆ ಅಗತ್ಯವಾದ ಆರ್ಥಿಕ ಮತ್ತು ಮಿಲಿಟರಿ ನೆರವಿನಿಂದ ದೊರೆಯಬಹುದಾದ ಸಾಣೆಕಲ್ಲಿನ ಅವಕಾಶವನ್ನು ತಪ್ಪಿಸಿಕೊಳ್ಳಲು ಬಯಸುವುದಿಲ್ಲ. ಇದೊಂದು ರೀತಿಯಲ್ಲಿ ಚೀನಾ ಜತೆಗೆ ಮದುವೆ, ಅಮೆರಿಕದೊಂದಿಗೆ ಸಂಬಂಧ ಎಂಬುವಂತಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ಆರ್ಥಿಕ ಪ್ರಕ್ಷುಬ್ಧತೆಯನ್ನು ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಅಮೆರಿಕದಿಂದ ಸಿಗುವ ಆರ್ಥಿಕ ಮತ್ತು ಮಿಲಿಟರಿ ನೆರವು ಅಗತ್ಯವಾಗಿದೆ. ಪಾಕ್​ ಒಳಗೆ ಚೀನಾ ಹೂಡಿಕೆಗಳ ಸಂಬಂಧಿಸಿದಂತೆ ಅಮೆರಿಕ ಪರಿಶೀಲನೆಗೆ ಮುಂದಾಗಬಹುದು. ಮುಖ್ಯವಾಗಿ ಚೀನಾ- ಪಾಕಿಸ್ತಾನದ ಆರ್ಥಿಕ ಕಾರಿಡಾರ್​ ಬಗ್ಗೆ ಎಂದು ಪಾಕಿಸ್ತಾನದಿಂದ ಗಡಿಪಾರಾಗಿ ಪ್ಯಾರಿಸ್​ನಲ್ಲಿರುವ ಪತ್ರಕರ್ತ ತಾಹಾ ಸಿದ್ಧಿಕಿ ಎಚ್ಚರಿಸಿದ್ದಾರೆ.

ಪಾಕ್​ ನೆಲದಲ್ಲಿ ಚೀನಾದ ವಿಸ್ತರಣೆಯ ಹೆಜ್ಜೆಗುರುತುಗಳನ್ನು ಅಮೆರಿಕ ನಿರ್ಬಂಧಿಸಲು ಬಯಸುತ್ತದೆ. ಇಂತಹ ಸಂದರ್ಭದಲ್ಲಿ ಪಾಕಿಸ್ತಾನವು ಡಬಲ್ ಗೇಮ್ ಆಡಬಹುದು. ಇಸ್ಲಾಮಾಬಾದ್​ನೊಂದಿಗೆ ತೊಡಗಿಸಿಕೊಂಡಿರುವ ಅಮೆರಿಕ ಮತ್ತು ಚೀನಾ ಇಬ್ಬರೂ ಗರಿಷ್ಠ ಆರ್ಥಿಕ ಲಾಭ ಪಡೆಯಲು ಬಯಸುತ್ತಾರೆ. ಈ ಮೂಲಕ ಭೌಗೋಳಿಕ ಸ್ಥಾನದ ಗಿಟ್ಟಿಸಿಕೊಳ್ಳುತ್ತಾರೆ ಎಂದು ಸಿದ್ಧಿಕಿ ವಿಶ್ಲೇಷಿಸಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.