ನವದೆಹಲಿ: 2020-21ರ ಆರ್ಥಿಕ ವರ್ಷಕ್ಕೆ ವಿಶೇಷ ಆರ್ಥಿಕ ವಲಯ (ಎಸ್‌ಇಝಡ್) ಘಟಕಗಳ ಗುತ್ತಿಗೆ ಬಾಡಿಗೆಯನ್ನು ಹೆಚ್ಚಿಸುವುದಿಲ್ಲ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹೇಳಿದೆ.
ಮೊದಲ ತ್ರೈಮಾಸಿಕದ ಗುತ್ತಿಗೆ ಬಾಡಿಗೆಯನ್ನು ಎಲ್ಲಾ ಎಸ್‌ಇಝಡ್ ಘಟಕಗಳಿಗೆ ಜುಲೈ 31ರವರೆಗೆ ಮುಂದೂಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.
ಮುಂದೂಡಿಕೆ ಮೇಲೆ ಯಾವುದೇ ಬಡ್ಡಿ ದರ ಏರಿಕೆ ಮಾಡುವುದಿಲ್ಲ ಎಂದು ಸಚಿವಾಲಯವು ಸ್ಪಷ್ಟಪಡಿಸಿದೆ. ಈ ಬಗ್ಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳನ್ನು ವಿನಂತಿಸಿದೆ. ರಾಜ್ಯ ಸರ್ಕಾರ / ಖಾಸಗಿ ಎಸ್‌ಇಝಡ್‌ಗಳ ಇಂಜಿನಿಯರ್ ತಮ್ಮ ವಲಯಗಳಲ್ಲಿ ಇದೇ ರೀತಿಯ ಪರಿಹಾರ ಕ್ರಮ ಪರಿಗಣಿಸುವಂತೆ ಸಲಹೆ ನೀಡಿದೆ.