ETV Bharat / business

ಮೋದಿ 2.0 ಸರ್ಕಾರ 7 ವರ್ಷ ಪೂರೈಸಲು ತಿಂಗಳು ಬಾಕಿ : NDA ವಿರುದ್ಧ ಮುಗಿ ಬಿದ್ದ ಕಾಂಗ್ರೆಸ್​! - ಕಾಂಗ್ರೆಸ್ ವರ್ಸಸ್​ ಬಿಜೆಪಿ

ನೋಟ್ ಬ್ಯಾನ್​ ನಂತರ ಸರ್ಕಾರದ ಪ್ರತಿ ಹೆಜ್ಜೆಯೂ ತಪ್ಪಾಗಿದೆ. ಅದರ ನೀತಿಗಳು ಮತ್ತು ನಿರ್ಧಾರಗಳು ಹತಾಶವಾಗಿ ತಪ್ಪಾಗಿವೆ ಎಂದು ಒಪ್ಪಿಕೊಳ್ಳುವುದಿಲ್ಲ. ಮೋದಿಯವರ ತಪ್ಪು ಎಂದರೆ ಅವರು ಟೀಕೆಗಳನ್ನು ಸಹಿಸುವುದಿಲ್ಲ ಅಥವಾ ಪ್ರಖ್ಯಾತ ಅರ್ಥಶಾಸ್ತ್ರಜ್ಞರ ಉತ್ತಮ ಸಲಹೆ ಕಿವಿಗೆ ಹಾಕಿಕೊಳ್ಳುವುದಿಲ್ಲ..

Chidambaram
Chidambaram
author img

By

Published : Apr 13, 2021, 2:53 PM IST

ನವದೆಹಲಿ : ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಏಳು ವರ್ಷಗಳನ್ನು ಪೂರೈಸಲು ಒಂದು ತಿಂಗಳು ಮಾತ್ರ ಬಾಕಿ. ಇದರ ಮಧ್ಯೆಯೇ ಮೋದಿ ಆಡಳಿತದ ಆರ್ಥಿಕ ವಿಷಯಗಳ ಬಗ್ಗೆ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಸರ್ಕಾರವನ್ನು ಟೀಕಿಸಿದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು, ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ 7ನೇ ವರ್ಷ ಕೊನೆಗೊಳಿಸಲು ಯಾವ ಮಾರ್ಗವಿದೆ. ಹಣದುಬ್ಬರ ಏರಿಕೆ, ಕೈಗಾರಿಕಾ ಉತ್ಪಾದನೆ ಕುಸಿತ, ರೂಪಾಯಿ ಮೌಲ್ಯ ಇಳಿಕೆ ಮತ್ತು ಷೇರು ಮಾರುಕಟ್ಟೆ ಮುಳುಗಡೆ ಎಂದು ವ್ಯಂಗ್ಯವಾಡಿದ್ದಾರೆ.

ಹರಿದು ಹಾಕುವ ತೆರಿಗೆಗಳ ಸೇರ್ಪಡೆ, ಹೆಚ್ಚುತ್ತಿರುವ ನಿರುದ್ಯೋಗ ಹಾಗೂ ಅತ್ಯಧಿಕ ಬಡತನ ಮತ್ತು ಸಾಲ. ಇವೆಲ್ಲವೂ 2016ರ ನವೆಂಬರ್​ನ ನೋಟು ರದ್ಧತಿಯ ಐದು ವರ್ಷಗಳ ಬೃಹತ್ ನಿರ್ವಹಣೆಯ ಪರಿಣಾಮವಾಗಿದೆ ಎಂದು ಹೇಳಿದರು.

ನೋಟ್ ಬ್ಯಾನ್​ ನಂತರ ಸರ್ಕಾರದ ಪ್ರತಿ ಹೆಜ್ಜೆಯೂ ತಪ್ಪಾಗಿದೆ. ಅದರ ನೀತಿಗಳು ಮತ್ತು ನಿರ್ಧಾರಗಳು ಹತಾಶವಾಗಿ ತಪ್ಪಾಗಿವೆ ಎಂದು ಒಪ್ಪಿಕೊಳ್ಳುವುದಿಲ್ಲ. ಮೋದಿಯವರದು ತಪ್ಪು ಎಂದರೆ ಅವರು ಟೀಕೆಗಳನ್ನು ಸಹಿಸುವುದಿಲ್ಲ ಅಥವಾ ಪ್ರಖ್ಯಾತ ಅರ್ಥಶಾಸ್ತ್ರಜ್ಞರ ಉತ್ತಮ ಸಲಹೆ ಕಿವಿಗೆ ಹಾಕಿಕೊಳ್ಳುವುದಿಲ್ಲ ಎಂದು ಮಾಜಿ ಹಣಕಾಸು ಸಚಿವರು ಆರೋಪಿಸಿದರು.

ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ಫೆಬ್ರವರಿಯಲ್ಲಿ ಶೇ.5.03ರಿಂದ ಶೇ.5.52ಕ್ಕೆ ಏರಿಕೆಯಾಗಿದೆ. ಮಾರ್ಚ್‌ನಲ್ಲಿ ಚಿಲ್ಲರೆ ಹಣದುಬ್ಬರ ಏರಿಕೆಯಾಗಿದೆ. ಸತತ ಆರನೇ ದಿನವೂ ಭಾರತೀಯ ರೂಪಾಯಿ ಮೌಲ್ಯ ಕುಸಿತದ ಹಾದಿ ಮುಂದುವರೆಸಿದೆ. ಕೋವಿಡ್ -19ರ ಹೆಚ್ಚುತ್ತಿರುವ ಪ್ರಕರಣಗಳು ಮತ್ತು ಸ್ಥಳೀಯ ಮಟ್ಟದ ಸೀಮಿತ ಲಾಕ್‌ಡೌನ್‌ಗಳ ಆತಂಕದ ನಡುವೆ ಚಿದಂಬರ್ ಟೀಕಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.