ETV Bharat / business

ಜಾಗತಿಕ ಹೂಡಿಕೆ ಆಕರ್ಷಿಸಲು ಭಾರತ ಇನ್ನಷ್ಟು ಸುಧಾರಣೆ ತರಬೇಕಿದೆ: ಐಎಂಎಫ್​

ಇತ್ತೀಚಿನ ವಾರಗಳಲ್ಲಿ ಹಲವು ಅಂತಾರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ 20 ಬಿಲಿಯನ್ ಡಾಲರ್ ಎಫ್‌ಡಿಐ ಮತ್ತು ಇದುವರೆಗೆ 40 ಬಿಲಿಯನ್ ಅಮೆರಿಕನ್ ಡಾಲರ್​ ಹೂಡಿಕೆಯ ವಾಗ್ದಾನ ಮಾಡಿವೆ.

IMF
ಐಎಂಎಫ್​
author img

By

Published : Jul 24, 2020, 11:41 PM IST

ವಾಷಿಂಗ್ಟನ್​: ವ್ಯಾಪಾರ ವಾತಾವರಣ ಬಲಪಡಿಸಲು ಮತ್ತು ವಹಿವಾಟಿನ ಹೂಡಿಕೆ ಉತ್ತೇಜಿಸಲು ಭಾರತದಲ್ಲಿ ಸಂಘಟಿತ ಪ್ರಯತ್ನ ಹಾಗೂ ಆರ್ಥಿಕ ಸುಧಾರಣೆಗಳ ಅಗತ್ಯವಿದೆ ಎಂದು ಐಎಂಎಫ್ ಹೇಳಿದೆ.

ಭಾರತದಲ್ಲಿ ಜಾಗತಿಕ ದೈತ್ಯ ಸಂಸ್ಥೆಗಳಾದ ಫೇಸ್‌ಬುಕ್ ಮತ್ತು ಗೂಗಲ್ ಇತ್ತೀಚೆಗೆ ಮಾಡಿದ ಹೂಡಿಕೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯ ವಕ್ತಾರ ಗೆರ್ರಿ ರೈಸ್ ಈ ಹೇಳಿಕೆ ನೀಡಿದ್ದಾರೆ.

ವಹಿವಾಟಿಗೆ ಪೂರಕ ವಾತಾವರಣ ಸೃಷ್ಟಿಸುವಲ್ಲಿ, ಹೂಡಿಕೆಯನ್ನು ಪ್ರೋತ್ಸಾಹಿಸುವಲ್ಲಿ ಭಾರತ ನಡೆಸಿದ ಪ್ರಯತ್ನಗಳು ಫಲ ನಿಡಿವೆ. ಆದರೂ ಸುಸ್ಥಿರ ಹಾಗೂ ಇನ್ನಷ್ಟು ಪಾಲ್ಗೊಳ್ಳುವಿಕೆ ಬೆಳೆವಣಿಗೆ ಸಾಧಿಸಲು ಭಾರತವು ಹೆಚ್ಚಿನ ಸುಧಾರಣಾ ಕ್ರಮಗಳನ್ನು ಅನುಷ್ಠಾನಕ್ಕೆ ತರಬೇಕಿದೆ ಎಂದು ಸಲಹೆ ನೀಡಿದರು.

ಇತ್ತೀಚಿನ ವಾರಗಳಲ್ಲಿ ಹಲವು ಅಂತಾರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ 20 ಬಿಲಿಯನ್ ಡಾಲರ್ ಎಫ್‌ಡಿಐ ಮತ್ತು ಇದುವರೆಗೆ 40 ಬಿಲಿಯನ್ ಅಮೆರಿಕನ್ ಡಾಲರ್​ ಹೂಡಿಕೆಯ ವಾಗ್ದಾನ ಮಾಡಿವೆ.

ಇತ್ತೀಚಿನ ವರ್ಷಗಳಲ್ಲಿ ವ್ಯಾಪಾರ ವಾತಾವರಣವನ್ನು ಬಲಪಡಿಸಲು ಮತ್ತು ವ್ಯಾಪಾರದಲ್ಲಿ ಹೂಡಿಕೆಯನ್ನು ಉತ್ತೇಜಿಸಲು ಸಂಘಟಿತ ಪ್ರಯತ್ನಗಳನ್ನು ಭಾರತ ಮಾಡಿದೆ. ಇವು ಹೂಡಿಕೆಯನ್ನು ಆಕರ್ಷಿಸಲು ಮತ್ತು ಚಾಲ್ತಿ ಖಾತೆ ಹಣಕಾಸು ಸಮತೋಲನ ಸುಧಾರಿಸಲು ನೆರವಾಗಿವೆ ಎಂದು ರೈಸ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.