ನವದೆಹಲಿ: ಈ ಹಣಕಾಸು ವರ್ಷದಲ್ಲಿ ಇದುವರೆಗೆ 39 ಲಕ್ಷಕ್ಕೂ ಹೆಚ್ಚು ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆ 1.26 ಲಕ್ಷ ಕೋಟಿ ರೂ. ಮರುಪಾವತಿ ಮಾಡಿದೆ.
ಈ ಅವಧಿಯಲ್ಲಿ ವೈಯಕ್ತಿಕ ಆದಾಯ ತೆರಿಗೆ (ಪಿಐಟಿ) ಮರುಪಾವತಿ 34,532 ಕೋಟಿ ರೂ. ಮತ್ತು ಕಾರ್ಪೊರೇಟ್ ತೆರಿಗೆ ಮರುಪಾವತಿ 92,376 ಕೋಟಿ ರೂ.ನಷ್ಟಿದೆ.
1,26,909 ಕೋಟಿ ರೂ. ತೆರಿಗೆ ಮರುಪಾವತಿ ನೀಡಲಾಗಿದೆ. 39.14 ಲಕ್ಷ ತೆರಿಗೆದಾರರಿಗೆ ಮರುಪಾವತಿ ಸಿಕ್ಕಿದೆ. 37,21,584 ಪ್ರಕರಣಗಳಲ್ಲಿ 34,532 ಕೋಟಿ ರೂ. ಆದಾಯ ತೆರಿಗೆ ಮರುಪಾವತಿ ಮಾಡಲಾಗಿದೆ. ಕಾರ್ಪೊರೇಟ್ ತೆರಿಗೆದಾರರ 1,92,409 ಪ್ರಕರಣಗಳಲ್ಲಿ (2020ರ ಅಕ್ಟೋಬರ್ 27 ರವರೆಗೆ) 92,376 ಕೋಟಿ ರೂ. ಮರುಪಾವತಿ ಮಾಡಲಾಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಟ್ವೀಟ್ ಮಾಡಿದ್ದಾರೆ.