ETV Bharat / business

ನಿಯಮ ಸಡಿಲಿಸಿ ಸಿಂಗಲ್​ ಬ್ರ್ಯಾಂಡ್​ನ ನೈಕಿ, ಐಕಿಯಾ, ಅಡಿಡಾಸ್​ಗೆ ಕೇಂದ್ರ ರತ್ನಗಂಬಳಿ

ಕೇಂದ್ರ ಅಥವಾ ಆರ್​ಬಿಐನ ಅನುಮೋದನೆ ಇಲ್ಲದೇ ನೇರ ಹೂಡಿಕೆಯ ಆಟೋಮ್ಯಾಟಿಕ್​ ದಾರಿ​ ಮೂಲಕ ಸಿಂಗಲ್​ ಬ್ರ್ಯಾಂಡ್​ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಶೇ 100ರಷ್ಟು ಬಂಡವಾಳ ಹೂಡಲು 2018ರ ಜನವರಿಯಲ್ಲಿ ನಡೆದ ಸಚಿವ ಸಂಪುಟದಲ್ಲಿ ಅಂಗೀಕಾರ ನೀಡಿ ಜಾರಿಗೆ ತಂದಿತ್ತು. ಈಗ ಮತ್ತೊಂದು ಹೆಜ್ಜೆ ಮುಂದಿಟ್ಟು ಎಫ್​ಡಿಐನಡಿ ಇರುವ ನಿಯಮಗಳನ್ನು ಇನ್ನಷ್ಟು ಸರಳೀಕರಣಗೊಳಿಸಿದೆ.

ಸಾಂದರ್ಭಿಕ ಚಿತ್ರ
author img

By

Published : Aug 28, 2019, 9:18 PM IST

ನವದೆಹಲಿ: ಸಿಂಗಲ್ ಬ್ರ್ಯಾಂಡ್​ ಚಿಲ್ಲರೆ ವ್ಯಾಪಾರ ಕ್ಷೇತ್ರಕ್ಕೆ ಈಗಾಗಲೇ ಶೇ 100ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ (ಎಫ್​ಡಿಐ) ಅವಕಾಶ ಕಲ್ಪಿಸಿದ ಕೇಂದ್ರ ಸರ್ಕಾರ ಇವತ್ತು ಮತ್ತೊಂದು ಮಹತ್ವದ ನಿರ್ಣಯ ತೆಗೆದುಕೊಂಡಿದೆ.

ಕೇಂದ್ರ ಅಥವಾ ಆರ್​ಬಿಐನ ಅನುಮೋದನೆ ಇಲ್ಲದೇ ನೇರ ಹೂಡಿಕೆಯ ಆಟೋಮ್ಯಾಟಿಕ್​ ರೂಟ್​ ಮೂಲಕ ಸಿಂಗಲ್​ ಬ್ರ್ಯಾಂಡ್​ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಶೇ 100ರಷ್ಟು ಬಂಡವಾಳ ಹೂಡಲು 2018ರ ಜನವರಿಯಲ್ಲಿ ನಡೆದ ಸಚಿವ ಸಂಪುಟದಲ್ಲಿ ಅಂಗೀಕಾರ ನೀಡಿ ಜಾರಿಗೆ ತಂದಿತ್ತು. ಈಗ ಮತ್ತೊಂದು ಹೆಜ್ಜೆ ಮುಂದಿಟ್ಟು ಎಫ್​ಡಿಐನಡಿ ಇರುವ ನಿಯಮಗಳನ್ನು ಇನ್ನಷ್ಟು ಸರಳೀಕರಣಗೊಳಿಸಿದೆ.

ಲಾಭವೇನು? ಹೊಡೆತ ಯಾರಿಗೆ?

ಭಾರತದಲ್ಲಿ ಈ ಮೊದಲು ಸಿಂಗಲ್ ಬ್ರ್ಯಾಂಡ್ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಆಟೋಮ್ಯಾಟಿಕ್ ರೂಟ್ ಮೂಲಕ ಶೇ 49ರಷ್ಟು ಮಾತ್ರ ಹೂಡಿಕೆಗೆ ಅವಕಾಶವಿತ್ತು. ಸಿಂಗಲ್ ಬ್ರ್ಯಾಂಡ್ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಶೇ 100ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಹಾಗೂ ನಿಯಮಗಳು ಸಡಿಲಗೊಂಡಿದ್ದರಿಂದ ವಿದೇಶಿ ಸಂಸ್ಥೆಗಳಾದ ನೈಕಿ, ಐಕಿಯಾ, ವುಡ್​ಲ್ಯಾಂಡ್​, ಅಡಿಡಾಸ್​, ರಿಬೊಕ್​ನಂತಹ ಸಂಸ್ಥೆಗಳು ಭಾರತೀಯ ಮಾರುಕಟ್ಟೆಗೆ ಸುಲಭವಾಗಿ ಪ್ರವೇಶ ಮಾಡಬಹುದು. ಆದರೆ, ಇದರಿಂದ ಸ್ಥಳೀಯ ಚಿಲ್ಲರೆ ಸಂಸ್ಥೆಗಳು ವಿದೇಶಿ ಸಂಸ್ಥೆಗಳ ಪ್ರಬಲ ಪೈಪೋಟಿ ಎದುರಿಸಲಾಗದೆ ಮಾರುಕಟ್ಟೆಯಲ್ಲಿ ತಮ್ಮ ಪ್ರಾಬಲ್ಯ ಕಳೆದುಕೊಳ್ಳಬಹುದು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.